ಜನನ-ಮರಣ ನೋಂದಣಿ ಪ್ರಕರಣಗಳ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

Spread the love

ಜನನ-ಮರಣ ನೋಂದಣಿ ಪ್ರಕರಣಗಳ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕುಂದಾಪುರ: ಸರ್ಕಾರದ ಪ್ರಸ್ತುತ ಇರುವ ಸಂವಿಧಾನ ಬಧ್ದ ಕಾನೂನು ವ್ಯಾಪ್ತಿಗಳನ್ನು ಮೀರಿ ಜನನ-ಮರಣ ನೋಂದಣಿ ಪ್ರಕರಣಗಳನ್ನು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರ ಕೂಡಲೇ ಹೊರಡಿಸಿರುವ ಅಧಿಸೂಚನೆಯನ್ನು ವಾಪಾಸು ಪಡೆಯಬೇಕು ಎಂದು ತಾಲ್ಲೂಕು ಬಾರ್ ಅಸೋಸೀಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಒತ್ತಾಯಿಸಿದರು.

ಇಲ್ಲಿನ ನ್ಯಾಯಾಲಯದ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ ಕುಂದಾಪುರ ತಾಲ್ಲೂಕು ಬಾರ್ ಅಸೋಸೀಯೇಶನ್ ನೇತ್ರತ್ವದಲ್ಲಿ ಜನನ-ಮರಣ ನೋಂದಣಿ ಪ್ರಕರಣಗಳನ್ನು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ರಾಜ್ಯ ಸರ್ಕಾರದ ಅಧಿಸೂಚನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಕಂದಾಯ ಇಲಾಖೆಯಲ್ಲಿ ಇರುವ ಅನೇಕ ಪ್ರಕರಣಗಳ ಇತ್ಯರ್ಥಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಜನನ-ಮರಣ ನೋಂದಣಿಯ ಕಾರ್ಯಭಾರಗಳು ಸೇರಿಕೊಳ್ಳುವುದರಿಂದ ಒತ್ತಡಗಳು ಇನ್ನಷ್ಟು ಹೆಚ್ಚಾಗುತ್ತದೆ. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಜನನ-ಮರಣ ನೋಂದಣಿ ಪ್ರಕರಣಗಳ ಪ್ರಕ್ರಿಯೆಗಳನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುವುದರಿಂದ ಪರೋಕ್ಷವಾಗಿ ಭ್ರಷ್ಷಾಚಾರಗಳು ಪ್ರಭಾವಕ್ಕೂ ಅವಕಾಶ ನೀಡದಂತಾಗುತ್ತದೆ ಎಂದು ದೂರಿದರು.

ಕುಂದಾಪುರ ಬಾರ್ ಅಸೋಸೀಯೇಶನ್ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಾಥ್ ರಾವ್, ಉಪಾಧ್ಯಕ್ಷೆ ಬೀನಾ ಜೋಸೆಫ್, ಕೋಶಾಧಿಕಾರಿ ಹಾಲಾಡಿ ದಿನಕರ ಕುಲಾಲ್, ಜತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ಹಿರಿಯ, ಕಿರಿಯ ವಕೀಲರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Spread the love

Leave a Reply

Please enter your comment!
Please enter your name here