ಜನಮನ ಸೆಳೆದ ಕರ್ನಾಟಕ ಸಂಘ ಶಾರ್ಜಾ ಆಚರಿಸಿದ “ವಿಶ್ವ ರಂಗ ದಿನಾಚರಣೆ” ಮತ್ತು “ಮಯೂರ ಕಪ್” ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ

Spread the love

ಜನಮನ ಸೆಳೆದ ಕರ್ನಾಟಕ ಸಂಘ ಶಾರ್ಜಾ ಆಚರಿಸಿದ “ವಿಶ್ವ ರಂಗ ದಿನಾಚರಣೆ” ಮತ್ತು “ಮಯೂರ ಕಪ್” ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ

ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ವಿಶ್ವ ರಂಗ ದಿನ ಹಾಗೂ ಪ್ರತಿಷ್ಠಿತ “ಮಯೂರ ಕಪ್” ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟಗಳು ಮಾರ್ಚ್ 27ನೇ ತಾರೀಕು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್ ಅಕಾಡೆಮಿ ಸ್ಕೂಲ್ ಕ್ರೀಡಾಂಗಣದಲ್ಲಿ ವಿಜೃಂಬಣೆಯಿಂದ ನಡೆಯಿತು.

ಗೌರವ ಅತಿಥಿಗಳಾಗಿ ಭಾಗಿಯಾದ ಡಾ ಶ್ರೀ ಶಿವಮೂರ್ತಿ ಮುರುಘಾ ಶರಣರು ಬೆಳಿಗೆ 8.30 ಗಂಟೆಗೆ ಕರ್ನಾಟಕದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ಮಹಾ ಸಂಸ್ಥಾನದ ಪೀಠಾಧೀಶರಾಗಿರುವ ಪೂಜ್ಯ ಡಾ ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾಗೂ ಕರ್ನಾಟಕದ ರಂಗಭೂಮಿ, ಚಲನಚಿತ್ರ ನಟರು ನಿರ್ದೇಶಕರು ಶ್ರೀ ಎಂ. ಎನ್. ಸುರೇಶ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸಂಘ ಶಾರ್ಜಾ ದ ಅಧ್ಯಕ್ಷರಾದ ಶ್ರೀ ಎಂ. ಇ. ಮೂಳೂರ್ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಸಮಾರಂಭ ಯು.ಎ.ಇ. ರಾಷ್ಟ್ರ ಗೀತೆ ಮತ್ತು ಭಾರತದ ರಾಷ್ಟ್ರಗೀತೆ ಯೊಂದಿಗೆ ಪ್ರಾರಂಭವಾಯಿತು.

ಕರ್ನಾಟಕ ಸಂಘ ಶಾರ್ಜಾದ ಪೋಷಕರಾದ ಶ್ರೀ ಮಾರ್ಕ್ ಡೆನಿಸ್, ಸಲಹೆಗಾರರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಶೆಟ್ಟಿ, ಉಪಾಧ್ಯಕ್ಷ ಶ್ರೀ ನೋಯಲ್ ಅಲ್ಮೇಡಾ, ಕ್ರೀಡಾ ಕಾರ್ಯದರ್ಶಿ ಶ್ರೀ ಜೀವನ್ ಕುಕ್ಯಾನ್, ಮತ್ತು ಕರ್ನಾಟಕದಿಂದ ಅತಿಥಿಗಳಾಗಿ ಆಗ್ಮಿಸಿದ್ದ ಶ್ರೀಮತಿ ಅಹಲ್ಯಾ ಸುರೇಶ, ಶ್ರೀ ರಾಕೇಶ್ ರೋಬೊಟಿಕ್ಸ್, ಶ್ರೀ ಬಾಲಕೃಷ್ಣ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರು ಬಿ. ಕೆ. ಗಣೇಶ್ ರೈ ಯವರು ಸರ್ವರನ್ನು ಸ್ವಾಗತಿಸುತ್ತಾ ವಿಶ್ವರಂಗ ದಿನಾಚರಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಸರ್ವರಿಗೂ ಶುಭವನ್ನು ಹಾರೈಸಿದರು

ಪೂಜ್ಯ ಡಾ ಶ್ರೀ ಶಿವಮೂರ್ತಿ ಮುರುಘಾ ಶರಣರು ಇವರಿಗೆ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಸ್ವಾಮೀಜಿಯವರು ಆಶೀರ್ವಚನ ನೀಡಿ ಶುಭ ಸಂದೇಶದೊಂದಿಗೆ ಹಾರೈಸಿದರು.

ಕನ್ನಡ ರಂಗಭೂಮಿ ಚಲನಚಿತ್ರ ನಟರು ನಿರ್ದೇಶಕರು ಎಂ. ಎನ್. ಸುರೇಶ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ವಿಶ್ವ ರಂಗಭೂಮಿ ದಿನಾಚರಣೆಯ ಸಂಪೂರ್ಣ ಮಾಹಿತಿಯನ್ನು ನೀಡಿ ಸಂದೇಶದೊಂದಿಗೆ ಶುಭವನ್ನು ಹಾರೈಸಿದರು.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಎಂ.ಇ. ಮೂಳೂರುರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಸರ್ವರಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಇವರ ಕಾರ್ಯಯೋಜನೆಯನ್ನು ಮೆಚ್ಚಿ ಪೂಜ್ಯ ಡಾ ಶ್ರೀ ಶಿವಮೂರ್ತಿ ಮುರುಘಾ ಶರಣರು ಶಾಲು ಹೊದಿಸಿ ಗೌರವಿಸಿದರು.

ಗಲ್ಫ್ ಕನ್ನಡ ಮೂವೀಸ್ ನ ದೀಪಕ ಸೋಮಶೇಖರ್ ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ
ಯು.ಎ.ಇ. ಯಲ್ಲಿ ನಡೆಯುತ್ತಿದ್ದೆ ಥ್ರೋಬಾಲ್, ವಾಲಿಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದು ಇತ್ತಿಚೆಗೆ ಅಗಲಿರುವ ಎರದು ಕ್ರೀಡಾ ರತ್ನಗಳಾದ ಉಲ್ಲಾಸ್ ಮಿನೆಂಜಸ್ ಮತ್ತು ರೂಪಾ ರವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಪಂದ್ಯಾಟದಲ್ಲಿ ಭಾಗವಹಿಸಿದ ಮಹಿಳಾ ಮತ್ತು ಪುರುಷರ ತಂಡದವರಿಗೆ ಥ್ರೋಬಾಲ್ ತಂಡದ ನಾಯಕಿ ಮರಿನಾ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು.

ಗೌರವ ಅತಿಥಿಗಳು ಮತ್ತು ಅಧ್ಯಕ್ಷರು ಮತ್ತು ಸಲಹೆಗಾರು ತ್ರೋಬಾಲ್ ಎಸೆಯುದರ ಮೂಲಕ ಪಂದ್ಯಾಟಗಳಿಗೆ ಚಾಲನೆ ನೀಡಿದರು.

ಪ್ರೇಕ್ಷಕರ ಮನಸೆಳೆದ ಆಕರ್ಷಕ ಹಾಗೂ ರೋಚಕ ಪಂದ್ಯಾಟ ವಾಲಿಬಾಲ್ ತಂಡದಲ್ಲಿ ಭಾಗವಹಿಸಿದ ತಂಡಗಳು, ಕರಾವಳಿ ಮಿಲನ್, ಸ್ಮಾರ್ಟ್ ಪ್ಲಸ್, ಟೀಮ್ ಡಿ3, ಅಲ್ ಗುರಿಯರ್ ಫ್ರೆಂಡ್ಸ್,ಕರ್ನಾಟಕ ಸ್ಪೈಕರ್ಸ್, ಕೋಸ್ಟಲ್ ಫ್ರೆಂಡ್ಸ್ ಯು.ಎ.ಇ., ಯುನೈಟೆಡ್ ಫ್ರೆಂಡ್ಸ್ ಕುಡ್ಲ, ಬಿ.ಎಂ.ಜಿ. ಭಟ್ಕಲ್.

ತ್ರೋಬಾಲ್ ಮಹಿಳಾ ಮತ್ತು ಪುರುಷರ ತಂಡಗಳು , ಬಂಟ್ಸ್ ದುಬಾಯಿ, ಕೊಂಕಣ್ಸ್ ದುಬಾಯಿ, ಕೋಸ್ಟಲ್ ಫ್ರೆಂಡ್ಸ್ ಯು.ಎ.ಇ., ಮ್ಯಾಂಗ್ಲೂರ್ ಸ್ಟ್ರೈಕರ್ಸ್, ದಿ ಅನ್ ಸ್ಟಾಪೆಬಲ್, ಕರ್ನಾಟಕ ಸಂಘ ಶಾರ್ಜಾ.

ಶಾರ್ಜಾ ಕರ್ನಾಟಕ ಸಂಘದ “ಮಯೂರ ಕಪ್” ತನ್ನದಾಗಿಸಿಕೊಂಡ ತಂಡಗಳು

ಬೆಳಗಿನಿಂದ ಸಂಜೆಯವರೆಗೆ ನಡೆದ ಪೈಪೋಟಿಯಲ್ಲಿ ಜಯಗಳಿಸಿದ ತಂಡಗಳು

ಮಹಿಳಾ ಥ್ರೋಬಾಲ್
ರನ್ನರ್ಸಪ್ : ಮ್ಯಾಂಗ್ಳೂರ್ ಸ್ಟ್ರೈಕರ್ಸ್
ವಿನ್ನರ್ಸ್ : ಬಂಟ್ಸ್ ದುಬಾಯಿ
ಬೆಸ್ಟ್ ಎಟಾಕರ್ : ಸಂಗೀತಾ ಶೆಟ್ಟಿ – ಬಂಟ್ಸ್ ದುಬಾಯಿ
ಬೆಸ್ಟ್ ರಿಸಿವರ್ : ಮರಿನ್ ಶೋಭಾ – ಮ್ಯಾಂಗ್ಲೂರ್ ಸ್ಟೈಕರ್ಸ್
ಬೆಸ್ಟ್ ಆಲ್ ರೌಂಡರ್ : ಧನುಶ್ರೀ – ಬಂಟ್ಸ್ ದುಬಾಯಿ

ಪುರುಷರ ಥ್ರೋಬಾಲ್
ರನ್ನರ್ಸಪ್ : ದಿ ಅನ್ಸ್ಟಾಪೆಬಲ್ ಅಬುಧಾಬಿ
ವಿನ್ನರ್ಸ್ : ಕೋಸ್ಟಲ್ ಫ್ರೆಂಡ್ಸ್ ಯು.ಎ.ಇ.

ಬೆಸ್ಟ್ ಎಟಾಕರ್ : ರಾಯ್ಡೆನ್ – ಅನ್ಸ್ಟಾಪೆಬಲ್
ಬೆಸ್ಟ್ ರಿಸಿವರ್ : ವಿಲ್ಸನ್ – ಕೋಸ್ಟಲ್ ಫ್ರೆಂಡ್ಸ್
ಬೆಸ್ಟ್ ಆಲ್ ರೌಂಡರ್ : ಆಲೇನ್ – ಕೋಸ್ಟಲ್ ಫ್ರೆಂಡ್ಸ್ ಯು.ಎ.ಇ.

ಪುರುಷರ ವಾಲಿಬಾಲ್
ರನ್ನರ್ಸಪ್ ಕರ್ನಾಟಕ ಬುಲ್ಲ್ಸ್
ವಿನ್ನರ್ಸ್ : ಟೀಮ್ ಡಿ3
ಬೆಸ್ಟ್ ಎಟಾಕರ್ : ಆಕಾಶ್ – ಕರ್ನಾಟಕ ಬುಲ್ಲ್ಸ್
ಬೆಸ್ಟ್ ಸೆಟ್ಟರ್ : ಸಜನ್ ಆಳ್ವಾ – ಟೀಮ್ ಡಿ3
ಬೆಸ್ಟ್ ಆಲ್ ರೌಂಡರ್ : ಜಸಲ್ – ಟೀಮ್ ಡಿ3

ಬಹುಮಾನ ವಿತರಣೆ ಸಮಾರಂಭ ಸಂಜೆ 6.30 ಗಂಟೆಗೆ ಮುಖ್ಯ ಪ್ರಾಯೋಜಕರು ಅತಿಥಿಗಳ ಸಮ್ಮುಖದಲ್ಲಿ ನೆರವೇರಿತು. ಬು ಅಬ್ದುಲ್ಲಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರು ಡಾ. ಬು ಅಬ್ದುಲ್ಲಾ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷರು ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಪ್ರೊಮೋಟ್ ಬಿ.ಡಿ. ವ್ಯವಸ್ಥಾಪಕ ನಿರ್ದೇಶಕರು ಶ್ರೀ ವಿಶಾಂತ್ ಮಿನೆಂಜಸ್, ಕ್ಲಾಸಿಕ್ ಮರಿನ್ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಹಂಝಾ, ಗಡಿಯಾರ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಇಬ್ರಾಹಿಂ ಗಡಿಯಾರ್, ಶ್ರೀ ಯೋಗೆಶ್ – ಗ್ರಾಂಡ್ ಸ್ಟೇಶನರಿ, ಶ್ರೀ ನವೀದ್ ಮಗುಂಡಿ, ಸ್ಫ್ರೇ ಟೆಕ್ ನ ವ್ಯವಸ್ಥಾಪಕ ನಿರ್ದೇಶಕರು ಶ್ರೀ ರಾಮಚಂದ್ರ ಹೆಗ್ದೆ, ಶ್ರೀ ತನ್ವೀರ್ ಅರಿಬ್ ಗ್ರೂಪ್, ಶ್ರೀ ವಾಸು ಶೆಟ್ಟಿ – ಬಿಟಾನೀಯಾ, ಶ್ರೀ ಪ್ರಭಾಕರ್ ಸುವರ್ಣ, ಅಧ್ಯಕ್ಷರು ಬಿಲ್ಲವಾಸ್ ದುಬಾಯಿ, ಶ್ರೀ ಶಶಿಧರ್ ನಾಗರಾಜಪ್ಪ, ಕನ್ನಡ ಪಾಠಶಾಲೆ, ಶ್ರೀ ಮಲ್ಲಿಕಾರ್ಜುನ ಗೌಡ ಪೂರ್ವ ಅಧ್ಯಕ್ಷರು, ಕನ್ನಡಿಗರು ದುಬಾಯಿ ಭಾಗಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಪಂದ್ಯಾಟದ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ವಿಘ್ನೇಶ್ ಕುಂದಾಪುರ ನೆರವೇರಿಸಿ ಕೊಟ್ಟರು

ಕರ್ನಾಟಕ ಸಂಘ ಶಾರ್ಜಾದ ಸರ್ವ ಸದಸ್ಯರುಗಳ ಪೂರ್ವಭಾವಿ ತಯಾರಿಯೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು ಸಹಕಾರ ನೀಡಿರುವ ಎಲ್ಲಾ ಪ್ರಾಯೋಜಕರುಗಳಿಗೆ ಎಲ್ಲಾ ತಂಡಗಳ ಆಟಗಾರರು ಮತ್ತು ಕ್ರೀಡಾಕೂಟದಲ್ಲಿ ಭಾಗಿಗಳಾದ ಎಲ್ಲಾ ಅಹ್ವಾನಿತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಅಧ್ಯಕ್ಷರಾದ ಶ್ರೀ ಎಂ.ಇ. ಮೂಳೂರ್ ರವರು ಕರ್ನಾಟಕ ಸಂಘ ಶಾರ್ಜಾ ದ ಪರವಾಗಿ ಮಾಧ್ಯಮದ ಮೂಲಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

Photo Album


Spread the love

1 Comment

  1. ಮಾಧ್ಯಮದ ಮೂಲಕ ಸದಾ ಬೆಂಬಲ ಪ್ರೋತ್ಸಾಹ ನೀಡುತ್ತಿರುವ ಮ್ಯಾಂಗ್ಲುರಿಯನ್ ಜಾಲತಾಣ ವೆಬ್ ಮಾಧ್ಯಮ ಹಾಗೂ ತಮ್ಮ ಸಿಬ್ಬಂದಿ ವರ್ಗದವರಿಗೆ ಶಾರ್ಜಾ ಕರ್ನಾಟಕ ಸಂಘದ ಪರವಾಗಿ ಹಾರ್ದಿಕ ಧನ್ಯವಾದಗಳು.

    ಬಿ. ಕೆ. ಗಣೇಶ್ ರೈ

Comments are closed.