
ಜನವರಿ 1: ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸಿದ್ಧಾಪುರ ಶಾಖೆ ಕಟ್ಟಡ ಉದ್ಘಾಟನೆ
ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿಯನ್ನು ಕಂಡಿರುವ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಿದ್ದಾಪುರ ಶಾಖೆಯ ನೂತನ ಕಟ್ಟಡ ಉತ್ಕ್ರಷ್ಟದ ಉದ್ಘಾಟನಾ ಸಮಾರಂಭ ಜನವರಿ 1 ರಂದು ಬೆಳಿಗ್ಗೆ 10.30ಕ್ಕೆ ಕುಂದಾಪುರ ತಾಲೂಕಿನ ಸಿದ್ದಾಪುರ ಮುಖ್ಯ ರಸ್ತೆಯ ಬಳಿ ನಡೆಯಲಿದೆ.
ಸಿದ್ದಾಪುರದ ಮುಖ್ಯ ರಸ್ತೆಯ ಬಳಿಯ ಉತ್ಕೃಷ್ಟ ಸ್ವಂತ ಕಟ್ಟದಲ್ಲಿ ಕಾರ್ಯಾರಂಭಗೊಳ್ಳುವ ಎಸ್ ಸಿ ಡಿಸಿ ಬ್ಯಾಂಕಿನ ಸಿದ್ದಾಪುರ ಶಾಖೆಯು ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು, ಕೋರ್ ಬ್ಯಾಂಕಿಂಗ್ ಹಾಗೂ ಏಕಗವಾಕ್ಷಿ ಸೌಲಭ್ಯದ ಜೊತೆಗೆ ಆರ್ ಟಿ ಜಿ ಎಸ್/ನೆಫ್ಟ್ ಸೌಲಭ್ಯ ಈ ಶಾಖೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.
ಸರ್ವ ಸುಸಜ್ಜಿತ ನೂತನ ಕಟ್ಟಡದಲ್ಲಿ ಕಾರ್ಯಾರಂಭಗೊಳ್ಳೂವ ಶಾಖೆಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿರುವರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ವಹಿಸಲಿದ್ದು, ಎಟಿಎಂ ಶಾಖೆಯನ್ನು ಬಿ ಎಂ ಸುಕುಮಾರ್ ಶೆಟ್ಟಿ, ಗಣಕೀಕರಣದ ಉದ್ಘಾಟನೆಯನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಭದ್ರತಾಕೋಶದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಹೊಸ ಸ್ವಸಹಾಯ ಸಂಘಗಳ ಉದ್ಘಾಟನೆಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಠೇವಣಿ ಪತ್ರ ವಿತರಣೆಯನ್ನು ಸಿದ್ದಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಕುಲಾಲ್, ಸಾಲ ಪತ್ರ ವಿತರಣೆಯನ್ನು ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ ಇದರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿದ್ವಾನ್ ಗಣೇಶ್ ಅಡಿಗ ನೆರವೇರಿಸುವರು ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.