ಜಪ್ಪಿನಮೊಗರು ಸ್ವಾಧಾರ ಕೇಂದ್ರದಿಂದ 3 ಮಹಿಳೆಯರು ಕಾಣೆ – ಮಾಹಿತಿ ನೀಡುವಂತೆ ಪೊಲೀಸರ ಮನವಿ
ಮಂಗಳೂರು: ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿದ್ದ ಮೂವರು ಮಹಿಳೆಯರು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೀಸ್ ವರದಿಯ ಪ್ರಕಾರ, ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾದ ರಾಣಿ (26) ಮತ್ತು ಸೋನಿಯಾ (19) ಹಾಗೂ ವಾರಸುದಾರರಿಲ್ಲದೇ ಆಶ್ರಯ ಕೇಂದ್ರದಲ್ಲಿ ವಾಸಿಸುತ್ತಿದ್ದ ಕೊಲ್ಕತ್ತ ಮೂಲದ ನರ್ಗಿಸ್ (35) ಎಂಬವರು 2019ರ ಫೆಬ್ರವರಿ 4ರಂದು ಸ್ವಾಧಾರ ಕೇಂದ್ರದ ಹಿಂಬದಿಯಿಂದ ಓಡಿ ಹೋಗಿದ್ದಾರೆ.
ಕಾಣೆಯಾದವರ ವಿವರಗಳು:
ರಾಣಿ: ಎತ್ತರ 152 ಸೆಂ.ಮೀ., ಗೋಧಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ, ದಪ್ಪ ಶರೀರ. ಕಾಣೆಯಾದ ದಿನ ಕೇಸರಿ ಬಣ್ಣದ ಪ್ಯಾಂಟ್ ಹಾಗೂ ಶಾಲ್ ಹೊಂದಿರುವ ಚೂಡಿದಾರ ಧರಿಸಿದ್ದರು. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಸೋನಿಯಾ: ಎತ್ತರ 135 ಸೆಂ.ಮೀ., ಸಾಧಾರಣ ಶರೀರ, ಬಿಳಿ ಮೈಬಣ್ಣ, ಕಪ್ಪು ಕೂದಲು, ಕೋಲು ಮುಖ. ಕಾಣೆಯಾದ ದಿನ ನೀಲಿ ಬಣ್ಣದ ಚೂಡಿದಾರ ಧರಿಸಿದ್ದರು. ಕನ್ನಡ ಮಾತನಾಡುತ್ತಾರೆ.
ನರ್ಗಿಸ್: ಎತ್ತರ 135 ಸೆಂ.ಮೀ., ಸಾಧಾರಣ ಶರೀರ, ಕಪ್ಪು ಮೈಬಣ್ಣ, ದುಂಡು ಮುಖ. ಕಾಣೆಯಾದ ದಿನ ಗುಲಾಬಿ ಬಣ್ಣದ ಚೂಡಿದಾರ ಧರಿಸಿದ್ದರು. ಹಿಂದಿ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ತಕ್ಷಣ ಸಂಪರ್ಕಿಸಲು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
