ಜಪ್ಪಿನ ಮೊಗರು ಪ್ರಜ್ಞಾ ಸ್ವಾಧಾರ ಗೃಹದ ಮಹಿಳೆ ಕಾಣೆ

Spread the love

ಜಪ್ಪಿನ ಮೊಗರು ಪ್ರಜ್ಞಾ ಸ್ವಾಧಾರ ಗೃಹದ ಮಹಿಳೆ ಕಾಣೆ

ಮಂಗಳೂರು: ನಗರದ ಜಪ್ಪಿನ ಮೊಗರು ಪ್ರಜ್ಞಾ ಸ್ವಾಧಾರ ಗೃಹದಲ್ಲಿ 2021ರ ಅಕ್ಟೋಬರ್ 12ರಂದು ಉಳ್ಳಾಲ ಪೊಲೀಸರು ಸರೋಜಾ ಬಾಯಿ (40 ವರ್ಷ) ಎಂಬುವವರನ್ನು ದಾಖಲಿಸಲಾಗಿತ್ತು. ಅವರು ಅಲ್ಲಿಂದ ಅ.13 ರಿಂದ ಕಾಣೆಯಾಗಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರ ಇಂತಿದೆ:

ಗೋಧಿ ಮೈಬಣ್ಣ, 5.1 ಅಡಿ ಎತ್ತರ, ದಪ್ಪ ಶರೀರ, ದುಂಡು ಮುಖ, ಕಪ್ಪು ತಲೆ ಕೂದಲು (ಬಾಬ್ ಕಟ್) ಹಾಗೂ ಕಂದು ಬಣ್ಣದ ಚೂಡಿದಾರ, ಹಳದಿ ಪ್ಯಾಂಟ್, ಹಳದಿ ಬಣ್ಣದ ದುಪ್ಪಟ್ಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ಈ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆಯ ದೂ.ಸಂಖ್ಯೆ:0824-2220529, 0824-2220800, ಠಾಣಾಧಿಕಾರಿ ಮೊ.ನಂ:9480805354 ಅಥವಾ ಕಂಕನಾಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love