ಜಮೀನು ರಸ್ತೆ ವಿವಾದ ಕೊಲೆಯಲ್ಲಿ ಅಂತ್ಯ : ಮೂವರ ಬಂಧನ

Spread the love

ಜಮೀನು ರಸ್ತೆ ವಿವಾದ ಕೊಲೆಯಲ್ಲಿ ಅಂತ್ಯ : ಮೂವರ ಬಂಧನ

ಚಾಮರಾಜನಗರ: ಹಳೇ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ದ್ವೇಷಕ್ಕೆ ವ್ಯಕ್ತಿ ಯೊಬ್ಬರು ಬಲಿಯಾಗಿದ್ದು, ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಗುರುಸ್ವಾಮಪ್ಪ ( 72) ಹತ್ಯೆಗೀಡಾದ ದುರ್ದೈವಿ. ಇವರ ಪುತ್ರ ಮಂಜುನಾಥ್ ತಲೆಗೆ ಮಚ್ಚಿನೇಟಿನಿಂದ ತೀವ್ರ ಗಂಭೀರ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ಕಳೆದ 15 ವರ್ಷಗಳಿಂದ ಗುರುಸ್ವಾಮಪ್ಪ ಮತ್ತು ಮಲೆ ಮಾದಪ್ಪ ರವರ ಕುಟುಂಬಗಳ ನಡುವೆ ವೈಮನಸ್ಸಿತ್ತು ಎನ್ನಲಾಗಿದ್ದು, ಜಮೀನಿನ ನಡುವೆ ಇರುವ ತಿರುಗಾಡುವ ರಸ್ತೆ ವಿಚಾರವಾಗಿ ಗಲಾಟೆ ನಡೆದು ಮಲೆ ಮಾದಪ್ಪ, ಪತ್ನಿ ಮಂಗಳ ಮತ್ತು ಮಗ ಮಲ್ಲಿಕಾರ್ಜುನಪ್ಪ ಮಕ್ಕಳು ಮಚ್ಚಿನಿಂದ ಗುರುಸ್ವಾಮಪ್ಪ ಮತ್ತು ಅವರ ಮಗ ಮಂಜುನಾಥ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು ಪರಿಣಾಮ ಸ್ಥಳದಲ್ಲಿಯೇ ಗುರುಸ್ವಾಮಪ್ಪ ಮೃತಪಟ್ಟಿದ್ದಾರೆ.

ಅವರ ಪುತ್ರ ಮಂಜುನಾಥ್ ಗೆ ಎಡಗೈ ಮತ್ತು ತಲೆಗೆ ತೀವ್ರ ತರವಾದ ಗಾಯವಾಗಿದ್ದು ಮೆದಳಿಗೆ ಪೆಟ್ಟಾಗಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಪ್ರಕರಂ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love