ಜಯಂಟ್ಸ್ ಫೆಡರೇಶನ್ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Spread the love

ಜಯಂಟ್ಸ್ ಫೆಡರೇಶನ್ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಉಡುಪಿ: ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಉಡುಪಿ ಜಯಂಟ್ಸ್ ಗ್ರೂಪ್ ಆತಿಥ್ಯದಲ್ಲಿ ಜಯಂಟ್ಸ್ ಫೆಡರೇಶನ್ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮತ್ತು ಮಾಜಿ ಅಧ್ಯಕ್ಷರುಗಳ ಸಮ್ಮಿಲನ ಕಾರ್ಯಕ್ರಮವನ್ನು ಶನಿವಾರ ಉಡುಪಿಯ ಪಂಚರತ್ನ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.

ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ, ಸಾಧಕರ ಕೊಡುಗೆಯನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಜಯಂಟ್ಸ್ ಉಡುಪಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ವಹಿಸಿದ್ದರು. ಜಯಂಟ್ಸ್ ವೆಲ್ಫೇರ್ ಫೌಂಡೇಶನ್‌ನ ಡೆಪ್ಯುಟಿ ವರ್ಲ್ಡ್ ಚೇಯರ್‌ಮೆನ್ ಎಂ.ಲಕ್ಷ್ಮಣನ್, ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ. ಅಮೀನ್, ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ತಾರದೇವಿ ವಾಲಿ, ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಫೆಡರೇಶನ್ 4 ಇದರ ಅಧ್ಯಕ್ಷ ಡಿ.ಫ್ರಾಂಕ್ಲಿನ್ ರಾಜ್ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಡಾ.ಮದುಸೂಧನ್ ನಾಯಕ್ (ಮೆಡಿಸಿನ್), ಸುಧೀರ್‌ರಾಜ್ ಕೆ.(ಶಿಕ್ಷಣ), ಸಿರಾಜ್ ಅಹ್ಮದ್(ಸಮಾಜ ಸೇವೆ), ಮಲೇಶಪ್ಪ ಬಿಸಿರೊಟ್ಟಿ(ಕೃಷಿ), ಮಹೇಶ್ ಜಾದವ್(ಮಾನವೀಯ ಸೇವೆ), ಮೋಹನ ಮಯಿಪಡ್ಡಿ(ಜೋತಿಷ್ಯ), ಸಂಪತ್ ಕುಮಾರ್ ಪಾಂಗಾಳ (ಕಲೆ), ಆಚಾರ್ಯ ಜಗದೀಶ್ ಶಿವಪುರ(ಸಂಗೀತ) ಅವರನ್ನು ಸನ್ಮಾನಿಸ ಲಾಯಿತು.

ಜಯಂಟ್ಸ್ ಪ್ರಮುಖರಾದ ಲಕ್ಷ್ಮೀಕಾಂತ್ ಬೆಸ್ಕೂರು, ತೇಜೇಶ್ವರ್ ರಾವ್, ಯಶವಂತ ಸಾಲಿಯಾನ್, ವಿನ್ಸೆಂಟ್ ಸಾಲ್ದಾನ, ಗಣೇಶ್ ಉರಾಳ್, ಜಗದೀಶ್ ಅಮೀನ್, ಚಿದಾನಂದ ಪೈ, ದಯಾನಂದ ಕಲ್ಮಾಡಿ, ರಾಜೇಶ್ ಶೆಟ್ಟಿ, ದೇವದಾಸ್ ಕಾಮತ್, ಲಿಯಾಕತ್ ಅಲಿ, ವಾದಿರಾಜ್, ವಿನಯ್, ರೇಖಾ ಪೈ, ಸುಂದರ್ ಪೂಜಾರಿ, ಮಧುಸೂದನ್ ಹೇರೂರು, ನವೀನ್‌ಚಂದ್ರ ಭಂಡಾರಿ, ಪ್ರಭಾಕರ ಬಂಗೇರ, ದಿನೇಶ್ ಪುತ್ರನ್, ಗಣೇಶ್ ಹಾಗೂ ಜಯಂಟ್ಸ್ ಸದಸ್ಯರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಆಡಳಿತ ನಿರ್ದೇಶಕ ರೋಶನ್ ಬಲ್ಲಾಳ್ ವಂದಿಸಿದರು. ವಿವೇಕ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.


Spread the love