ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲೆಗಳ ಅಭಿವೃದ್ದಿಗೆ ಕರಡು ಯೋಜನೆಗಳ ರಚನೆ- ವೀರಪ್ಪ ಮೊಯ್ಲಿಗೆ ಮನವಿ

Spread the love

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲೆಗಳ ಅಭಿವೃದ್ದಿಗೆ ಕರಡು ಯೋಜನೆಗಳ ರಚನೆ- ವೀರಪ್ಪ ಮೊಯ್ಲಿಗೆ ಮನವಿ

ಮುಂಬಯಿ: ಕರಾವಳಿಯ ಜಿಲ್ಲೆಗಳ ಅಭಿವೃದ್ದಿಗಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿರುವ ಮುಂಬಯಿಯಲ್ಲಿ ನೆಲೆಸಿದ ಕರ್ನಾಟಕದ ಕರಾವಳಿಯ ಎಲ್ಲಾ ಜಾತೀಯ ಹಾಗೂ ವಿವಿಧ ಬಾಷೀಯ ಸಂಘಟನೆಗಳನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ, ಸಮಿತಿಯ ಅಧ್ಯಕ್ಷರಾದ ಎಲ್ ವಿ ಅಮೀನರ ನಿಯೋಗವು ಜೂ. 15ರಂದು ಅಂದೇರಿ ಪೂರ್ವದ ಲೀಲಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇವರನ್ನು ಭೇಟಿಯಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ರೂಪಿಸಿಕೊಂಡಿರುವ ಮನವಿಯನ್ನು ನೀಡಿದರು.

ಪರಿಸರ ಪ್ರೇಮಿ ಸಮಿತಿಯ ವಿಶೇಷ ಗೌರವವನ್ನು ಸ್ವೀಕರಿಸಿ ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ ಮನವಿಯನ್ನು ವಾಚಿಸಿದ ವೀರಪ್ಪ ಮೊಯ್ಲಿ ಅವರು “ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಬೇಕು, ಪ್ರವಾಸಿ ಕೇಂದ್ರವಾಗಬೇಕೆಂದು ನಾನು ಬಹಳಷ್ಟು ಶ್ರಮಿಸಿದ್ದೇನೆ. ದೇಶದ ಪ್ರಮುಖ ಕಂಪನಿಗಳು ಜಿಲ್ಲೆಗೆ ಬರೋದಕ್ಕೆ ಬಹಳಷ್ಟು ಯೋಚಿಸುತ್ತಿದೆ , ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪರಿಸರ ಪ್ರೇಮಿ ಸಮಿತಿಯ ಮನವಿಯನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಕೂಡಲೇ ಈ ಬಗ್ಗೆ ಪರಿಶೀಲನೆಗೆ ನಡೆಸುವಂತೆ ಶಿಫಾರಸು ಮಾಡುತ್ತೇನೆ, ಮಂಬಯಿಯಲ್ಲಿ ಎಲ್ಲಾ ಸಮುದಾಯದ ಬಂಧುಗಳು ಒಗ್ಗಟ್ಟಾಗಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ನುಡಿದರು.

ಸಮಿತಿಯ ಉಪಾಧ್ಯಕ್ಷ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ್ ದಾಸ್ ಸ್ವಾಗತಿಸಿ ಎಲ್ಲರನ್ನೂ ಪರಿಚಯಿಸಿದರು, ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ನಾರಾಯಣ್ ದೇವಾಡಿಗ ಅವರು ಮನವಿಯನ್ನು ವಾಚಿಸಿದರು,

ಸಮಿತಿಯ ಮಾಜಿ ಅಧ್ಯಕ್ಷ, ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಮಾತನಾಡುತ್ತಾ ಈ ಹಿಂದೆ ಬಹಳಷ್ಟು ಬಾರಿ ಸಮಿತಿಯ ಮೂಲಕ ನಮ್ಮ ಯೋಜನೆಗಳನ್ನು ಸಮಗ್ರವಾಗಿ ಅವರಿಗೆ ತಿಳಿಸಿದ್ದೇವೆ. ಅವರು ಕೂಡ ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಆದರೆ ಅದನ್ನು ಕಾರ್ಯಗತಗೊಳಿಸಲು ಹಲವಾರು ತೊಂದರೆಗಳು ಎದುರಾಗಿದ್ದವು, ಇದೀಗ ಅವರ ಪಕ್ಷದ ಸರಕಾರ ಆಡಳಿತಕ್ಕೆ ಬಂದಿದೆ ನಮ್ಮ ಯೋಜನೆಗಳೆಲ್ಲವೂ ಅವರ ಮೂಲಕ ಯಶಸ್ವಿಗೊಳ್ಳುತ್ತದೆ ಎನ್ನುವ ಭರವಸೆ ನಮಗಿದೆ, ನಮ್ಮೆಲ್ಲರ ಉದ್ದೇಶಗಳು ಮತ್ತು ಅವರ ಉದ್ದೇಶ ಕೂಡ ಒಂದೇ “ಜಿಲ್ಲೆಯ ಅಭಿವೃದ್ಧಿ” ಎಂದು ನುಡಿದರು,

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, , ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ ಆರ್ ಶೆಟ್ಟಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜಿ. ಟಿ. ಆಚಾರ್ಯ, ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ, ಉಪಾಧ್ಯಕ್ಷ ನರೇಶ್ ದೇವಾಡಿಗ ,ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ್ ದಾಸ್,ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ, ನ್ಯಾ. ಆರ್‌.ಎಂ. ಭಂಡಾರಿ, ಮಹಾರಾಷ್ಟ್ರ ಒಕ್ಕಲಿಗರ ಸಂಘದ ಅಧ್ಯಕ್ಷ, ಜಿತೇಂದ್ರ ಗೌಡ, ಸಮಿತಿಯ ಮಾಜಿ ಅಧ್ಯಕ್ಷ ಹರೀಶ್‌ ಕುಮಾರ್ ಶೆಟ್ಟಿ ಧರ್ಮಪಾಲ ದೇವಾಡಿಗ, ಜಿಲ್ಲೆಯ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ, ವಿದ್ಯಾ ದಾಯಿನಿ ಸಭಾದ ಗೌರವ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಭಂಡಾರಿ ಸೇವಾ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯ ರಾಕೇಶ್ ಭಂಡಾರಿ, ಮತ್ತು ಜಯಪ್ರಕಾಶ್ ಕಾಮತ್, ಗೌರವ ಕಾರ್ಯದರ್ಶಿಗಳಾದ ರವಿ ಎಸ್ ದೇವಾಡಿಗ, , ಕೋಶಾಧಿಕಾರಿ ತುಳಸಿದಾಸ್ ಅಮೀನ್, ಜೊತೆ ಕೋಶಾಧಿಕಾರಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ಆಚಾರ್ಯ, ಸಿ ಎಸ್ ಗಣೇಶ್ ಶೆಟ್ಟಿ ,ಅಮಿತ್ ಜಗನ್ನಾಥ್ ಶೆಟ್ಟಿ ದೇವಾಡಿಗ ಸಂಘದ ಕಾರ್ಯದರ್ಶಿ ಪ್ರಭಾಕರ್ ದೇವಾಡಿಗ ,ಉಪಸ್ತರಿದ್ದು ವೀರಪ್ಪ ಮೊಯ್ಲಿ ಅವರಿಗೆ ಹೂ ಗುಚ್ಚೆ ಅಭಿನಂದಿಸಿದರು

ಎಲ್ಲಾ ಜಾತಿಯ ಮುಖಂಡರು ಜಿಲ್ಲೆ ಅಭಿವೃದ್ಧಿಗೆ ಕಾರ್ಯಪ್ರವೃತರಾಗಿದ್ದಾರೆ – ಎಲ್. ವಿ. ಅಮೀನ್,

ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಅಧ್ಯಕ್ಷರಾದ ಎಲ್. ವಿ. ಅಮೀನ್ ಸಮಿತಿಯು ಕಳೆದ ಮೂರು ವರ್ಷಗಳಿಂದ ಜಿಲ್ಲೆಗಳ ಅಭಿವೃದ್ಧಿಗಾಗಿ ಹೋರಾಟವನ್ನು ನಡೆಸಿ ದೇಶದ ಪ್ರಮುಖ ಉದ್ಯಮಗಳು ನಗರಕ್ಕೆ ಬರುವಂತೆ ಶ್ರಮಿಸಿದೆ, ಪರಿಸರ ಮಾಲಿನ್ಯದೊಂದಿಗೆ ಕೈಗಾರಿಕೋದ್ಯಮಗಳು ಪ್ರಾರಂಭಗೊಳ್ಳೋದಕ್ಕೆ ಹೋರಾಟಗಳು ನಡೆಸುತ್ತಾ ಬಂದಿದ್ದೇವೆ ಆ ಮೂಲಕ ಜಿಲ್ಲೆಯ ಲ್ಲಿ ಉದ್ಯಮ ಸೃಷ್ಟಿಯಾಗಿದೆ, ನಿಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಅಭಿವೃದ್ಧಿಗಾಗಿ ಬಹಳಷ್ಟು ನೀವು ಶ್ರಮಿಸಿದ್ದೀರಿ, ಇದೀಗ ಮತ್ತೆ ತಮ್ಮ ಮೂಲಕ ಅಭಿವೃದ್ಧಿ ಆಗುತ್ತಿರುವ ಜಿಲ್ಲೆಗೆ ನಿಮ್ಮ ಪಕ್ಷದ ಸರಕಾರದ ಸಹಕಾರ ನೀಡಬೇಕು ಆಸೆಯನ್ನು ಇರಿಸಿಕೊಂಡಿದ್ದೇವೆ ,ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸಿ ಕೇಂದ್ರವಾಗಬೇಕು ನಮ್ಮ ನಾಡಿನ ಸಾವಿರಾರು ವಿದ್ಯಾವಂತರಿಗೆ ಉದ್ಯೋಗ ನೀಡುವ ಮುಖ್ಯ ಕೇಂದ್ರವಾಗಬೇಕೆನ್ನುವ ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸಬೇಕು ಈಗಾಗಲೇ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಸರಕಾರಕ್ಕೆ ಮನವಿ ನೀಡಿದ್ದೇವೆ, ಅದನ್ನು ಕಾರ್ಯರೂಪಕ್ಕೆ ತರುವ ಹಾಗೆ ತಮ್ಮ ಪ್ರಯತ್ನ ನಡೆಯಬೇಕು ಎಂದು ವಿನಂತಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಗಮನಹರಿಸುವಂತೆ ಸಮಿತಿಯ ಬೇಡಿಕೆ: ತೋನ್ಸೆ ಜಯಕೃಷ್ಣ ಶೆಟ್ಟಿ,

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ವೀರಪ್ಪ ಮೊಯ್ಲಿ ಅವರನ್ನು ಅಭಿನಂದಿಸುತ್ತ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ತಾವು ಈ ಹಿರಿಯ ವಯಸ್ಸಿನಲ್ಲೂ ಕೂಡ ಲವಲವಕಿಯಿಂದ ರಾಜಕೀಯದಲ್ಲಿ ಗುರುತಿಸಿ ಕೊಂಡಿದ್ದೀರಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಜವಾಬ್ದಾರಿತ ಹುದ್ದೆಯನ್ನು ಪಡೆದು ಸಮರ್ಥ ರೀತಿಯಲ್ಲಿ ನಿರ್ವಹಿಸಿದ ಹೆಗ್ಗಳಿಕೆ ಕೂಡ ನಿಮಗಿದೆ ಈ ಹಿಂದೆ ಜಿಲ್ಲೆಗೆ ಹಲವಾರು ಯೋಜನೆಗಳು ಬರುವಂತೆ ಕೆಲಸ ಕಾರ್ಯಗಳನ್ನು ಮಾಡಿದ್ದೀರಿ, ಅದನ್ನು ನಾವು ಸದಾ ನೆನಪಿಸಬೇಕಾಗಿದೆ,ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮುಂದಿನ 100 ವರ್ಷಗಳ ಅಭಿವೃದ್ಧಿಗಳನ್ನು ಯೋಚಿಸಿ ಸ್ಥಳೀಯರ ಭಾವನೆಗಳು, ಸಂಸ್ಕೃತಿ ಮತ್ತು ಧಾರ್ಮಿಕ ಸೌಹಾರ್ದತೆ ಮತ್ತು ಎಲ್ಲಾ ಜಾತಿಗಳ ಗೌರವಗಳಿಗೆ ಧಕ್ಕೆಯಾಗದಂತೆ ಗಮನದಲ್ಲಿಟ್ಟುಕೊಂಡು ತಕ್ಷಣದ ಜಿಲ್ಲಾ ಕರಡು ಯೋಜನೆ ಗಳನ್ನು ಸರಕಾರ ಕಾರ್ಯಗತ ಗೊಳಿಸುವಂತೆ ತಾವು ನಮ್ಮೊಂದಿಗೆ ಸಹಕರಿಸುರೆಂಬ ನಂಬಿಕೆ ಇದೆ , ನಮ್ಮ ಸಮಿತಿ ಜಾತಿ ಮತ್ತು ಧರ್ಮವನ್ನು ಪ್ರೀತಿಸುವುದು ಮಾತ್ರವಲ್ಲದೆ ಜಿಲ್ಲೆಯ ಅಭಿವೃದ್ಧಿಯ ಜವಾಬ್ದಾರಿ ನಮ್ಮಲ್ಲಿದೆ , ತಮ್ಮ ಪಕ್ಷ ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಕೊಳ್ಳುವಂತೆ ಸರಕಾರದ ಸಚಿವರಿಗಳಿಗೆ, ಅಧಿಕಾರಿಗಳಿಗೆ ಮಾತುಕತೆಗಳನ್ನು ನಡೆಸಬೇಕು, ತಮಗೆ ಜಿಲ್ಲೆಯ ಅಭಿವೃದ್ಧಿಗಳ ವಿಚಾರಗಳು ಎಲ್ಲವು ತಿಳಿದಿದೆ. ನಮ್ಮ ಸಮಿತಿಯಲ್ಲಿ ಸರ್ವ ಜಾತಿಯ ಮುಖಂಡರುಗಳಿದ್ದಾರೆ. ಅವರೆಲ್ಲರ ಬೆಂಬಲದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಸರಕಾರದೊಂದಿಗೆ ನಾವು ಸದಾ ಸೇವಕರಾಗಿ ಕಾರ್ಯನಿರ್ವಹಿಸುತ್ತೇವೆ, ಕಳೆದ 23 ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸುತ್ತ ಬಂದಿದ್ದೇವೆ ನಮ್ಮ ಯೋಜನೆ ಮತ್ತು ಯೋಚನೆ ಜಿಲ್ಲೆ ಅಭಿವೃದ್ಧಿ ಆದಾಗ ರಾಜ್ಯ ದೇಶ ಅಭಿವೃದ್ಧಿಯಾಗಲು ಸಾಧ್ಯ, ನಮ್ಮ ಯುವ ಜನಾಂಗಕ್ಕೆ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಉದ್ಯಮಗಳು ಸೃಷ್ಟಿಯಾಗಬೇಕು. ಇದಕ್ಕೆ ನಿಮ್ಮ ಪಕ್ಷದ ಸರಕಾರ ಸಹಕಾರ ನೀಡಬೇಕು ಎಂದು ಪರಿಸರ ಪ್ರೇಮಿಯ ಎಲ್ಲಾ ಯೋಜನೆಗಳನ್ನು ಯೋಚನೆಗಳನ್ನು ವಿವರಿಸಿದರು.

ಮಾನ್ಯ ಮಾಜಿ ಕೇಂದ್ರ ಸಚಿವರು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಯವರಿಗೆ ನೀಡಿದ ಕರಡು ಯೋಜನೆಗಳ ಮುಖ್ಯಾಂಶಗಳು;

1) ಪರಿಸರ – ನದಿ – ಸಮುದ್ರ ಸಂರಕ್ಷಣಾ ಯೋಜನೆ, ಕೊಳಚೆ ನೀರು ಪೈಪ್ ಲೈನ್, ಪರಿಣಾಮಕಾರಿ ಚಿಕಿತ್ಸಾ ಯೋಜನೆ, ವಸತಿ ಕಾಲೋನಿ ಹಾಗೂ ಸಣ್ಣ ಕೈಗಾರೀಕೊಧ್ಯಮಕ್ಕೆ ಪರಿಣಾಮಕಾರಿ ಯೋಜನೆ, ಅರಣ್ಯ ಹಾಗೂ ಬೆಟ್ಟಗಳ ರಕ್ಷಣೆ, ಉದ್ಯಾನ ಮೀಸಲಾತಿ.

2)ಕೈಗಾರೀಕರಣ – ಎಂಜಿನಿಯರಿಂಗ್ ವಲಯಗಳು, ಔಷಧೀಯ ವಲಯಗಳು, ರಾಸಾಯನಿಕ ವಲಯಗಳು, ಆಹಾರ ಸಂರಕ್ಷಣೆ, ಆಟೋಮೊಬೈಲ್, ಮೀನುಗಾರಿಕೆ ಉದ್ಪಾದನೆ, ಪ್ಲಾಸ್ಟಿಕ್, ಸಣ್ಣ ಮತ್ತು ದೊಡ್ಡಪ್ರಮಾಣದ ವಿಶೇಷ ಆರ್ಥಿಕ ವಲಯಗಳು.

3) ರಸ್ತೆ ಸಂಪರ್ಕ – ಎಲ್ಲಾ ಜಾತಿ ಮತಗಳ ಧಾರ್ಮಿಕ ಕೇಂದ್ರಗಳಿಗೆ ಬೀದಿ ದೀಪ , ರಸ್ತೆ ಸಂಪರ್ಕ, ಅದೇ ರೀತಿ ಸಣ್ಣ ಹಳ್ಳಿಗಳಿಗೆ ಮತ್ತು ಒಳ ಪ್ರದೇಶದಲ್ಲಿರುವ ವಸತಿಗಳಿಗೆ, ಸ್ಥಳೀಯರ ಮಾಹಿತಿಯನ್ನು ಪಡೆದು ಪಾದಚಾರಿ ದಾಟುವಿಕೆ, ಪಾರ್ಕಿಂಗ್ ವ್ಯವಸ್ಥೆ, ಮಾನವ ಸುರಕ್ಷತೆಗೆ ರಸ್ತೆಗಳಲ್ಲಿ ಸಿಗ್ನಲನ್ನು ಅಳವಡಿಸುವುದು.

4) ವಾಣಿಜ್ಯ ವಲಯ – ಐಟಿ ಪಾರ್ಕ್, ವಾಣಿಜ್ಯ ಹಾಗೂ ಬ್ಯಾಂಕಿಗ್ ಕಟ್ಟಡಗಳು, ಅಂತರಾಷ್ಟೀಯ ವಾಣಿಜ್ಯ ಕೇಂದ್ರ, ಹೋಟೇಲು ಮತ್ತು ರೆಸೋರ್ಟ್ಸ್.

5) ಕರಾವಳಿ ಅಭಿವೃದ್ಧಿ ಯೋಜನೆಗಳು ಪ್ರವಾಸೋದ್ಯಮ ಯೋಜನೆಗಳು.

6) ದೊಡ್ಡ ಮಟ್ಟದ ಸಭಾಗೃಕ್ಕೆ ಜಾಗದ ಮೀಸಲಾತಿ, ವಿಶಾಲವಾದ ಆಟದ ಮೈದಾನ.

7) ಸಾರ್ವಜನಿಕ ಕಾರ್ಯಗಳಿಗಾಗಿ ಭೂಮಿಯನ್ನು ಕಾಯ್ದಿರಿಸುವಿಕೆ, ಇತ್ಯಾದಿ.


Spread the love