ಜಲೀಲ್ ಕುಟುಂಬಕ್ಕೆ ಜೆಡಿಎಸ್ ಪಕ್ಷದ ಸಾಂತ್ವನ

Spread the love

ಜಲೀಲ್ ಕುಟುಂಬಕ್ಕೆ ಜೆಡಿಎಸ್ ಪಕ್ಷದ ಸಾಂತ್ವನ

ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಜಾಕೆ ಮಾದವ ಗೌಡರ ನೇತೃತ್ವದಲ್ಲಿ ಜಿಲ್ಲಾ ನಿಯೋಗವು ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.

ಇಂತಹ ಹೀನಾಯ ಅಮಾನುಷ ಕ್ರತ್ಯವೆಸಗಿದರನು ಕಠಿಣ ಶಿಕ್ಷೆ ಒಳಪಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಕುಟುಂಬದ ಹಿರಿಯ ತಾಯಿ ,ವಿಧವೆ ಹೆಂಡತಿ ಹಾಗೂ ಚಿಕ್ಕ ಮುಗ್ದ ಮಗು ಅರ್ಥಿಕ ಸಂಕಟದ ಪರಿಸ್ಥಿತಿ ಬಗ್ಗೆ ಪಕ್ಷದ ಪಕ್ಷದ ವರಿಷ್ಠ ಎಚ್. ಡಿ. ದೇವಗೌಡರವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್ ರವರ ಗಮನಕ್ಕೆ ತಂದು ಅರ್ಥಿಕ ಸಹಾಯ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು.ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.

ಪಕ್ಷದ ನಾಯಕರಾದ ಸುಶೀಲ್ ನೊರೊನ್ಹಾ ,ಝಮೀರ್ ಶಾ, ರತ್ನಾಕರ ಸುವರ್ಣ, ಶ್ರೀಮತಿ ಸುಮತಿ ಹೆಗ್ಡೆ, ಲತೀಫ್ ಓಳಚ್ಚಿಲ್, ಅಲ್ತಾಫ್ ತುಂಬೆ, ಸುರತ್ಕಲ್ ಕ್ಷೇತ್ರದ ಪ್ರಮುಖ ನಾಯಕರಾದ ಅಜೀಜ್, ವಿನ್ಸೆಂಟ್ ಕೊಡಿಕ್ಕಲ್, ಕನಕದಾಸ ಕುಳೂರ್,ನವಾಜ್, ಹಮೀದ್, ಅಸ್ಪಕ್ ಅಹಮದ್, ಪಕ್ಷದ ಹಲವು ಕಾರ್ಯಕರ್ತರು ಭಾಗವಹಿಸಿ ಸಾಂತ್ವನ ವ್ಯಕ್ತಪಡಿಸಿದರು.


Spread the love

Leave a Reply

Please enter your comment!
Please enter your name here