ಜಲೀಲ್ ಹತ್ಯೆ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಅಗ್ರಹ: ಜೆಡಿಎಸ್

Spread the love

ಜಲೀಲ್ ಹತ್ಯೆ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಅಗ್ರಹ: ಜೆಡಿಎಸ್

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಜಲೀಲ್  ಹತ್ಯೆ ಪ್ರಕರಣ ಬಹಳ ಗಂಭೀರ ವಾಗಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಯಾವುದೇ ವ್ಯಕ್ತಿ ಗಳು ಯಾವುದೇ ಧರ್ಮ, ಜಾತಿ, ಪಕ್ಷ, ಸಂಘಟನೆಗಳ ಸಂಬಂಧ ಪಟ್ಟವರು ಆಗಲಿ ಪೋಲಿಸ್ ಕಮಿಷನರವರು ಕೂಡಲೇ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ  ಸಂದರ್ಭದಲ್ಲಿ ಜನರು ಭಯಭೀತರಾಗಿ ಬದುಕಲು ಅಸಾಧ್ಯವಾಗಿದೆ.

ಈ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುವ ನೈತಿಕ ಪೊಲೀಸ್ ಗಿರಿ, ಗೂಂಡಾಗಿರಿ, ಹತ್ಯೆಗಳು ಎಷ್ಟು ನಡೆದಿದೆ. ಇದರಿಂದ ಪೊಲೀಸ್ ಇಲಾಖೆಗೆ ಎಷ್ಟು ಕೆಟ್ಟ ಹೆಸರು ಬಂದಿದೆ.ಈ ಜಿಲ್ಲೆಯಲ್ಲಿ ಸಾಮನ್ಯ ಜನರಿಗೆ ಫೋಲಿಸರ  ಮೇಲೆ     ಹೆಚ್ಚಿನ  ಗೌರವ ಭಯ ಗೌರವ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಅರ್ಥ ಮಾಡಬೇಕು ಅತ್ಮ ವಿಮರ್ಶೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದಲಿ  ಜಿಲ್ಲಾ ಜೆಡಿಎಸ್ ಪಕ್ಷದ ಕಾರ್ಯಕರ್ತರು ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ


Spread the love