ಜವನೀಕುಪ್ಪೆಯಲ್ಲಿ ಬೋನಿಗೆ ಬಿದ್ದ ಚಿರತೆ

Spread the love

ಜವನೀಕುಪ್ಪೆಯಲ್ಲಿ ಬೋನಿಗೆ ಬಿದ್ದ ಚಿರತೆ

ಪಿರಿಯಾಪಟ್ಟಣ: ಕಾಡಿನಿಂದ ನಾಡಿಗೆ ನುಗ್ಗಿ ರೈತರ ಸಾಕುಪ್ರಾಣಿಗಳನ್ನು ತಿಂದು ಹಾಕಿದ್ದಲ್ಲದೆ, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಚಿರತೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದ ಘಟನೆ ತಾಲೂಕಿನ ಜವನೀಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಕೆಲ ದಿನಗಳಿಂದ ಜವನೀಕುಪ್ಪೆ ಗ್ರಾಮದಲ್ಲಿ ಚಿರತೆ ದಾಳಿಯಿಂದ ಜಾನುವಾರುಗಳು ಸಾವನ್ನಪ್ಪಿದ ದೂರು ಕೇಳಿಬಂದ ಹಿನ್ನೆಲೆ ಅರಣ್ಯ ಇಲಾಖೆಯವರು ಚಿರತೆ ಸೆರೆಗಾಗಿ ಗ್ರಾಮದಲ್ಲಿ ಬೋನು ಇರಿಸಿದ್ದು ಆ ಬೋನಿಗೆ ಚಿರತೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಗರಹೊಳೆ ಉದ್ಯಾನವನದ ಪಶುವೈದ್ಯಾಧಿಕಾರಿ ರಮೇಶ್ ಅವರಿಂದ ಚಿರತೆಯ ಆರೋಗ್ಯ ತಪಾಸಣೆ ಮಾಡಿಸಿ ಇಂಜೆಕ್ಷನ್ ಮೂಲಕ ಚಿಪ್ ಅಳವಡಿಸಿದ ನಂತರ ನಾಗರಹೊಳೆ ವ್ಯಾಪ್ತಿಯ ಆನೆಚೌಕೂರು ವನ್ಯಜೀವಿ ವಲಯದ ಬೇಗೂರು ಅರಣ್ಯ ಪ್ರದೇಶದ ಕಾಡಿಗೆ ಬಿಡಲಾಗಿದೆ.

ಈ ವೇಳೆ ಆರ್‌ಎಫ್‌ಓ ವೈ.ಕೆ ಕಿರಣ್‌ಕುಮಾರ್, ಡಿಆರ್‌ಎಫ್‌ಓ ಪಾರ್ವತಿ, ಅರಣ್ಯ ರಕ್ಷಕ ರಾಜು ಮತ್ತು ಸಿಬ್ಬಂದಿ ಇದ್ದರು.


Spread the love