ಜಾಗತಿಕ ಬಂಟರ ಸಂಘ- ಪಟ್ಲ ಟ್ರಸ್ಟ್‌ ನಿಂದ ಅಶ್ವಿನಿ ಅಕ್ಕುಂಜೆ, ರಿಷಬ್ ಶೆಟ್ಟಿ ಸಹಿತ 12 ಮಂದಿಗೆ ಸನ್ಮಾನ

Spread the love

ಜಾಗತಿಕ ಬಂಟರ ಸಂಘ- ಪಟ್ಲ ಟ್ರಸ್ಟ್‌ ನಿಂದ ಅಶ್ವಿನಿ ಅಕ್ಕುಂಜೆ, ರಿಷಬ್ ಶೆಟ್ಟಿ ಸಹಿತ 12 ಮಂದಿಗೆ ಸನ್ಮಾನ
 

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸಹಯೋಗದಲ್ಲಿ ಡಿಸೆಂಬರ್ ೪ರಂದು ಭಾನುವಾರ ಸಂಜೆ ೪ ಗಂಟೆಗೆ ಮುಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಿವೇಶನದಲ್ಲಿ ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕ್ರತ ಕ್ರೀಡಾಪಟು ಅಶ್ವಿನಿ ಅಕ್ಕುಂಜೆ, ಚಲನ ಚಿತ್ರ ನಟ-ನಿರ್ದೇಶಕ ರಿಷಬ್ ಶೆಟ್ಟಿ ಸಹಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರನ್ನು ಸನ್ಮಾನಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣರಾದ ನಿವೇಶನದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಡೆಯುವ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಕ್ರೀಡಾಪಟು ಅಶ್ವಿನಿ ಅಕ್ಕುಂಜೆ, ಕಾಂತಾರ ಸಿನಿಮಾ ಖ್ಯಾತಿಯ ನಟ ನಿರ್ದೇಶಕ ರಿಷಭ್ ಶೆಟ್ಟಿ, ೨೦೨೨ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ನೃತ್ಯಗುರು ಪಿ. ಕಮಲಾಕ್ಷ ಆಚಾರ್, ತಾಳಮದ್ದಳೆ ಅರ್ಥಧಾರಿ ಡಾ. ಪ್ರಭಾಕರ ಜೋಷಿ, ದೈವ ನರ್ತಕ ಗುಡ್ಡ ಪಾಣಾರ, ಬಡಗುತಿಟ್ಟಿನ ಸ್ತ್ರೀ ವೇಷಧಾರಿ ಎಂ.ಎ ನಾಯ್ಕ್, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಸಂಗೀತ ಕ್ಷೇತ್ರದ ವಿದ್ವಾನ್ ಎಂ.ನಾರಾಯಣ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ದೇವಿದಾಸ್ ಶೆಟ್ಟಿ, ಜಯರಾಮ್ ಬನಾನ್, ಡಾ.ಎಲ್. ಎಚ್. ಮಂಜುನಾಥ್ ಮತ್ತು ಯುವವಾಹಿನಿ ಘಟಕದ ಅಧ್ಯಕ್ಷ ಉದಯಿ ಅಮೀನ್ ಮಟ್ಟು ಮೊದಲಾದರನ್ನು ಸನ್ಮಾನಿಸಲಾಗುವುದು. ಕಾಂತಾರ ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು.
ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷ್ಮೀ ನಾರಾಯಣ ಅಪ್ಪಣ್ಣ, ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಕೆ ಪ್ರಕಾಶ್‌ಶೆಟ್ಟಿ, ಬರೋಡ ಶಶಿಧರ ಶೆಟ್ಟಿ, ಸಿ ಎ ಸದಾಶಿವ ಶೆಟ್ಟಿ, ಪಟ್ಲ ಸತೀಶ ಶೆಟ್ಟಿ ಒಕ್ಕೂಟದ ಪಧಾದಿಕಾರಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ ಜಯಕರ ಶೆಟ್ಟಿ ಇಂದ್ರಾಳಿ, ಉಳ್ತೂರು ಮೋಹನ ದಾಸ್ ಶೆಟ್ಟಿ, ಪ್ರವೀಣ ಭೋಜ ಶೆಟ್ಟಿ, ಮೊದಲಾದವರು ಭಾಗವಹಿಸಲಿದ್ದಾರೆ.

Spread the love