ಜಾಗತೀಕರಣದ ಅವಶ್ಯಕತೆಗೆ ತಕ್ಕಂತಿದೆ ರಾಷ್ಟ್ರೀಯ ಶಿಕ್ಷಣ ನೀತಿ – ಡಾ. ಅಶ್ವತ್ಥ್ ನಾರಾಯಣ

Spread the love

ಜಾಗತೀಕರಣದ ಅವಶ್ಯಕತೆಗೆ ತಕ್ಕಂತಿದೆ ರಾಷ್ಟ್ರೀಯ ಶಿಕ್ಷಣ ನೀತಿ – ಡಾ. ಅಶ್ವತ್ಥ್ ನಾರಾಯಣ

ಮಂಗಳೂರು : ಜಾಗತೀಕರಣದ ಕಾಲಘಟ್ಟದಲ್ಲಿ ಕಲಿಕೆಯಲ್ಲಿ ಆವಿಷ್ಕಾರ ತಂತ್ರಜ್ಞಾನ ಹಾಗೂ ನಾವೀನ್ಯತೆಗೆ ಆದ್ಯತೆ ನೀಡಬೇಕಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅದಕ್ಕೆ ಪೂರಕವಾಗಿದೆ ಎಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ಸಚಿವರು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳೂ ಆದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಅಭಿಪ್ರಾಯಪಟ್ಟರು.

ಅವರು ಆಗಸ್ಟ 30ರ ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಒಂದು ದಿನದ ವಿಚಾರ ಸಂಕಿರಣ, ಮೂಡಬಿದರೆಯ ಬನ್ನಡ್ಕದಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಘಟಕ ಕಾಲೇಜನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಸಮಾಜದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಈ ದಿಸೆಯಲ್ಲಿ 34 ವರ್ಷಗಳ ನಂತರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲಾಗುತ್ತದೆ. ಎನ್‍ಡಿಎ ಸರ್ಕಾರದ 7 ವರ್ಷಗಳ ಅವಧಿಯಲ್ಲಿ ಸುದೀರ್ಘ ಐದೂವರೆ ವರ್ಷಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಅದಕ್ಕಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ಹಲವು ಶೈಕ್ಷಣಿ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಲಾಗಿದ್ದು, 3 ಲಕ್ಷ ಕ್ಕೂ ಹೆಚ್ಚಿನ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020 ರಲ್ಲಿ ಜಾರಿಗೊಳಿಸಿ, 2021ರಲ್ಲಿ ಅನುಷ್ಠಾನಕ್ಕೆ ಗುರಿ ಹಾಕಿಕೊಳ್ಳಲಾಗಿದೆ, ಇದನ್ನು ಜಾರಿ ಮಾಡಲು 15 ವರ್ಷ ಸಮಯ ಇದೆ. ಹತ್ತು ವರ್ಷದಲ್ಲಿ ಈ ಎಲ್ಲ ಸಲಹೆಗಳನ್ನು ಅನುμÁ್ಠನ ಮಾಡುವ ಉದ್ದೇಶ ಇದೆ. ಅನುμÁ್ಠನಕ್ಕೆ ಪೂರಕವಾಗಿ ಶೈಕ್ಷಣಿಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದಕ್ಕೆ ಬೇಕಾಗುವ ಜಾಗೃತಿ ಮತ್ತು ಸಹಕಾರ ನೀಡಲಾಗುತ್ತಿದೆ ಎಂದವರು ತಿಳಿಸಿದರು.

ಅದಕ್ಕೆ ಪೂರಕವಾಗಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಬಹಳಷ್ಟು ತಯಾರಿಗಳನ್ನು ಮಾಡಿಕೊಡಲಾಗುತ್ತಿದೆ. ಅಧ್ಯಯನ ಮಂಡಳಿ, ಅಧ್ಯಾಪಕರು ಒಟ್ಟಿಗೆ ಸೇರಿ ಪಠ್ಯಕ್ರಮ ತಯಾರಿ ಮಾಡಿಕೊಳ್ಳುತ್ತಿವೆ, ಶೈಕ್ಷಣಿಕ, ಸಿಂಡಿಕೇಟ್ ಮಂಡಳಿಗಳು ಹೆಚ್ಚಿನ ಆಸಕ್ತಿ ವಹಿಸಿದ್ದು, ಎಲ್ಲಾ ಶೈಕ್ಷಣಿಕ ವಲಯಗಳು ಅವಶ್ಯಕ ತಯಾರಿಗಳನ್ನು ಮಾಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಜಾಗೃತಿ ಮೂಡಿಸುವ ಹಾಗೂ ಅನುಷ್ಠಾನಕ್ಕೆ ತಯಾರಿ ನಡೆಸಲಾಗುತ್ತಿದೆ. ವೆಬ್ ಪೋರ್ಟಲ್‍ಗಳು, ಸೋಶಿಯಲ್ ಮೀಡಿಯಾ, ಹೆಲ್ಪ್‍ಲೈನ್ಗಳಲ್ಲಿ ಪ್ರಚಾರ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಎಂದರು.

ಶಿಕ್ಷಣದಲ್ಲಿನ ಬದಲಾವಣೆ ಹಾಗೂ ಅಳವಡಿಸಿಕೊಳ್ಳುವಿಕೆಯ ಕುರಿತು 10 ಸಾವಿರ ಪ್ರಾಧ್ಯಾಪಕರಿಗೆ 1 ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಪ್ರಸ್ತುತ 21ನೇ ಶತಮಾನಕ್ಕೆ ಪ್ರಸ್ತುತ ವಿರುವ ಶಿಕ್ಷಣವನ್ನು ನೀಡಲಾಗುತ್ತಿದೆ. ನಿರ್ಣಾಯಕ ಕಲಿಕೆಗಳು, ಸಾಂಸ್ಕøತಿಕ ಚಟುವಟಿಕೆಗಳು, ಆಟ ಹಾಗೂ ಪಾಠಗಳೊಂದಿಗಿನ ದೈಹಿಕ ಹಾಗೂ ಮಾನಸಿಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸಧೃಡ ಗೊಳಿಸಬೇಕು. ಅವರಲ್ಲಿ ಪರಿಪೂರ್ಣ ವ್ಯಕ್ತಿತ್ವ ಬೆಳೆಸಬೇಕು. ಸಮಾಜ ಜೀವಿಯನ್ನಾಗಿಸಿ ಸೋಲು ಹಾಗೂ ಗೆಲುವಿನ ಅನುಭವ ಕಾಣಬೇಕು. ಕೇವಲ ಸಿದ್ಧಾಂತಗಳ ಶಿಕ್ಷಣವಲ್ಲದೇ ಮೌಲ್ಯಮಾಪನ, ಸಂಸ್ಕøತಿ ಹಾಗೂ ಆಚಾರ ವಿಚಾರ ಕೌಶಲ್ಯತೆಗಳನ್ನು ತಿಳಿಸಿಕೊಡಬೇಕಿದೆ ಎಂದು ಹೇಳಿದರು.

ವಿದ್ಯಾರ್ಥಿ ಸ್ನೇಹಿಯಾಗಿರುವ ನೂತನ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವೂ ಆಗಿದೆ, ಕಳೆದ ಅಗಸ್ಟ್ 15ರಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಿದ್ದೇವೆ. ದೇಶದ ಶತಮಾನೋತ್ಸವದ ಸಂದರ್ಭದಲ್ಲಿ ವಿಶ್ವಕ್ಕೆ ವಿಶ್ವ ಗುರುವಾಗಬೇಕಾದರೆ ಈ ನೀತಿನ್ನು ಆಮೂಲಾಗ್ರವಾಗಿ ಜಾರಿ ಮಾಡಲೇಬೇಕಿದೆ ಎಂದರು ಅವರು, ಮೊದಲು ಪಠ್ಯೇತರ ಚಟುವಟಿಕೆ ಇತ್ತು. ಆದರೆ ಈಗ ಅದು ಕೂಡ ಪಠ್ಯದ ಒಂದು ಭಾಗ. ಅಲ್ಲದೆ, ಈವರೆಗೆ ಸಮಾಜದ ಅನೇಕ ಸಮಸ್ಯೆಗಳು ಕಲಿಕೆಯ ಒಂದು ಭಾಗ ಆಗಿರಲಿಲ್ಲ. ಪುಸ್ತಕದಲ್ಲಿ ಇರುವುದನ್ನು ಮಾತ್ರ ಓದುವ ಕೆಲಸ ಆಗುತ್ತಿತ್ತು. ಅದರ ಬದಲಿಗೆ ಕುಶಲತೆ ಕಲಿಸುವ ಕೆಲಸವೂ ಈಗ ಆಗಲಿದೆ. ವಿದ್ಯಾರ್ಥಿ ತನಗೆ ಇಷ್ಟವಾಗುವ ವಿಷಯವನ್ನು ಮುಕ್ತವಾಗಿ ಕಲಿಯುವ ಅವಕಾಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಎಂದು ಸಚಿವರು ಪ್ರತಿಪಾದಿಸಿದರು.

ಈವರಗೂ ಇರುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಫ್ಲೆಕ್ಸಿಬಿಲಿಟಿ ಇರಲಿಲ್ಲ. ಈಗ ಬಹು ಆಯ್ಕೆಯ ಹಾಗೂ ಬಹು ಶಿಸ್ತೀಯ ಕಲಿಕೆಗೆ ಮುಕ್ತ ಅವಕಾಶ ಇದೆ. ತಂತ್ರಜ್ಞಾನ ಮೂಲಕ ಎಲ್ಲಿಂದ ಬೇಕಾದರೂ ಕಲಿಯಬಹುದು. ಮಾಹಿತಿಯನ್ನು ಜ್ಞಾನವನ್ನಾಗಿ ರೂಪಿಸುವ ಕೆಲಸ ಆಗಬೇಕು, ಅದೀಗ ಆಗುತ್ತಿದೆ ಎಂದರು.

ಹೊಸ ಶಿಕ್ಷಣ ನೀತಿ ಅನುಸಾರ ವಾರ್ಷಿಕ ಮೌಲ್ಯ ಮಾಪನದ ಬದಲಿಗೆ ನಿತ್ಯದ ಕಲಿಕೆ-ಬೋಧನೆಯ ಬಳಿಕ ಮೌಲ್ಯ ಮಾಪನವೂ ಇರುತ್ತದೆ. ಈ ಮೂಲಕ ಕಲಿಕೆಯ ಗುಣಮಟ್ಟ ವೃದ್ಧಿಯಾಗುವುದರ ಜತೆಗೆ ಪ್ರತಿ ವಿದ್ಯಾರ್ಥಿಯ ಸಾಮರ್ಥವೂ ಹೆಚ್ಚಾಗಲಿದೆ. ಇದರಿಂದ ಜಾಗತಿಕವಾಗಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧೆ ನಡೆಸಲು ಸುಲಭ ಸಾಧ್ಯವಾಗುತ್ತದೆ, ಇದೇ ವೇಳೆ ಶೈಕ್ಷಣಿಕ ಸಂಸ್ಥೆಗಳಿಗೂ ಶಕ್ತಿ ತುಂಬಲಾಗುವುದು. ಆಡಳಿತದಲ್ಲೂ ಸ್ವಾಯತ್ತತೆ ನೀಡಲಾಗುವುದು ಹಾಗೂ ಪ್ರತಿ ಸಂಸ್ಥೆಯೂ ಪದವಿ ಕೊಡುವ ಸಂಸ್ಥೆಗಳಾಗುತ್ತವೆ. ಅದರಲ್ಲಿ ಪ್ರತ್ಯೇಕ ಮಂಡಳಿ ಇರುತ್ತದೆ. ಉದಾಹರಣೆಗೆ ನಿಟ್ಟೆ ಸಂಸ್ಥೆ ಸ್ವಾಯತ್ತತೆ ಸಿಕ್ಕ ನಂತರ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬ ಉದಾಹರಣೆ ನಮ್ಮ ಮುಂದೆಯೇ ಇದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪೆÇ್ರ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿದರು. ಶಿಕ್ಷಣ ತಜ್ಞರೂ ಆದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಸ್ ವಿನಯ ಹೆಗ್ಡೆ ಶುಭಾಶಂಸನೆಗೈದರು.

ಶಾಸಕರಾದ ಉಮನಾಥ ಕೋಟ್ಯಾನ್, ಲಾಲಾಜಿ ಮೆಂಡನ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮಾತನಾಡಿದರು. ಮಾಜಿ ಶಾಸಕ ಗಣೇಶ ಕಾರ್ಣಿಕ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪೆÇ್ರ.ಬಿ. ತಿಮ್ಮೇಗೌಡ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.

ಪ್ರೋಪೆಸರ್‍ಗಳು, ಅಧ್ಯಾಪಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.


Spread the love