ಜಾಗವಿಲ್ಲದೆ ಖಾಸಗಿ ಜಮೀನಿನಲ್ಲಿ ಶವ ಸಂಸ್ಕಾರ

Spread the love

ಜಾಗವಿಲ್ಲದೆ ಖಾಸಗಿ ಜಮೀನಿನಲ್ಲಿ ಶವ ಸಂಸ್ಕಾರ

ಚಾಮರಾಜನಗರ: ಗ್ರಾಮದಲ್ಲಿ ಮೃತಪಟ್ಟವರ ಸಂಸ್ಕಾರ ಮಾಡಲು ಸರ್ಕಾರಿ ಸ್ಮಶಾನ ಇಲ್ಲದೆ ಖಾಸಗಿ ಜಮೀನಿನಲ್ಲಿ ಶವ ಸಂಸ್ಕಾರ ನಡೆಯುತ್ತಿರುವ ಘಟನೆಗೆ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯಿತಿಯ ವಿ.ಎಸ್. ದೊಡ್ಡಿಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಮೀನಿದೆ ಆದರೆ ಶವಗಳನ್ನು ಹೂಳಲು ಹಾಗೂ ದಹಿಸಲು ಸ್ಥಳವಕಾಶ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಸೋಮವಾರ ಪುಟ್ಟ ರಾಚಶೆಟ್ಟಿ ಮೃತ ವ್ಯಕ್ತಿಯ ಶವದ ಅಂತ್ಯ ಕ್ರಿಯೆಗೆ ಸ್ಥಳ ಇಲ್ಲದೆ ಖಾಸಗಿ ಜಮೀನಿನ ಮಾಲೀಕರ ಬಳಿ ಅಂಗಲಾಚಿದ ಮೃತ ಕುಟುಂಬಸ್ಥರ ಕಣ್ಣೀರಿಗೆ ಕರಗಿದ ಖಾಸಗಿ ಜಮೀನಿನ ಮಾಲೀಕರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಜೋಳವನ್ನು ಕಟಾವು ಮಾಡಿದ್ದಲ್ಲದೆ ಶವವನ್ನು ದಹಿಸಲು ಅವಕಾಶ ಮಾಡಿಕೊಟ್ಟರು.

ವಿ.ಎಸ್ ದೊಡ್ಡ ಗ್ರಾಮದಲ್ಲಿ 400 ಕುಟುಂಬವಿದ್ದು, ಇಲ್ಲಿ ಸ್ಮಶಾನಕ್ಕೆ ಸ್ಥಳವಕಾಶ ಕೊಡಿ ಎಂದು ಶಾಸಕರು, ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


Spread the love