ಜಾಗೃತ ಗ್ರಾಹಕ ಸಮಾಜದ ಪ್ರಗತಿಗೆ ದಿಕ್ಸೂಚಿ: ಗೀತಾ ಪ್ರಸನ್ನ

Spread the love

ಜಾಗೃತ ಗ್ರಾಹಕ ಸಮಾಜದ ಪ್ರಗತಿಗೆ ದಿಕ್ಸೂಚಿ: ಗೀತಾ ಪ್ರಸನ್ನ

ಮೈಸೂರು: ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದು ಉಪ ಪೊಲೀಸ್ ಆಯುಕ್ತರದ ಗೀತಾ ಪ್ರಸನ್ನ ಹೇಳಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಶೇಷಾದ್ರಿ ಅಯ್ಯರ್ ರಸ್ತೆ, ಹಳೆ ಆರ್ ಎಂಸಿ ಹತ್ತಿರ ಇರುವ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ನಡೆದ ಗ್ರಾಹಕ ಜಾಗೃತಿ ಸಮಾವೇಶದಲ್ಲಿ ದೀಪ ಬೆಳಗಿಸಿ ಆ ನಂತರ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಗ್ರಾಹಕರು ಪ್ರತಿ ಖರೀದಿಯ ಮೇಲೆ ರಸೀದಿ ಪಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಈ ಹಿಂದೆ ಕಿರಾಣಿ ಅಂಗಡಿ, ಸೀಮೆಎಣ್ಣೆಯ ಅಳತೆ ವಿಷಯದಲ್ಲಿ ಮಾತ್ರ ಜಾಗೃತರಾಗಿದ್ದ ಜನರು ಇತ್ತೀಚೆಗೆ ಮೊದಲಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಇದರಿಂದ ಸಮಾಜದ ಪ್ರಗತಿಯೂ ಸುಲಭವಾಗುತ್ತದೆ ಎಂದರು.

ಹುಟ್ಟಿನಿಂದಲೂ ಸಾಯುವ ಕೊನೆ ಕ್ಷಣದವರೆಗೆ ಪ್ರತಿ ವ್ಯಕ್ತಿಯೂ ಗ್ರಾಹಕನಾಗಿರುತ್ತಾನೆ. ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಆತ ಗ್ರಾಹಕನ ಪಾತ್ರ ನಿರ್ವಹಿಸುತ್ತಿರುತ್ತಾನೆ. ಹಾಗಾಗಿ, ಹೊಣೆಗಾರಿಕೆ ಅರಿತು ಗ್ರಾಹಕರ ಕಾಯಿದೆಯ ಜಾಗೃತಿ ಪಡೆಯಬೇಕು. ಕಾನೂನುಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ತೋರಿಕೆಗೆ ಒಂದು ಉಪಯೋಗಕ್ಕೆ ಒಂದು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಮನಸ್ಥಿತಿಯಿಂದ ಹೊರಬಂದು ಎಲ್ಲರೂ ಕಾನೂನಿನ ಅಡಿಯಲ್ಲಿಯೇ ಕಾರ್ಯನಿರ್ವಹಿಸುವ ಮತ್ತು ತಮ್ಮ ಜವಾಬ್ದಾರಿ ಪ್ರದರ್ಶಿಸುವಂತಾಗಬೇಕು ಎಂದರು.

ಕೇಂದ್ರೀಯ ಮಹಿಳಾ ಜಾಗರಣ ಪ್ರಮುಖರಾದ ಆಶಾಸಿಂಗ್ ರವರು ಸಂಘಟನಾ ದೃಷ್ಟಿಯಿಂದ ಗ್ವಾಲಿಯರ್ ನಿಂದ ಬಂದು ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದು ಮೈಸೂರಿನಲ್ಲಿ. ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ಗ್ರಾಹಕ ಜಾಗೃತಿ ಸಮಾವೇಶಕ್ಕೆ ಬಂದಿರುವುದು ಸಂತೋಷ ವಾಗುತ್ತಿದೆ. ಗ್ರಾಹಕ ಹಕ್ಕುಗಳನ್ನು ಸಾರ್ಥಕವಾಗಿ ಗ್ರಾಹಕರು ಉಪಯೋಗಿಸಿಕೊಳ್ಳುತ್ತಾ ತಮ್ಮ ಸಮಸ್ಯೆಗಳನ್ನು ಸೂಕ್ತವಾಗಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಖಜಾಂಚಿ ಶ್ರೀಶೈಲ ರಾಮಣ್ಣ, ಪ್ರೊ. ಕೆ ಬಿ ವಾಸುದೇವ, ಪ್ರಿನ್ಸಿಪಾಲರಾದ ದೀಪುಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಮಹಿಳಾ ಪ್ರಮುಖ ಗಾಯತ್ರಿ ನಾಡಿಗ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಡಾ. ಜಿ. ವಿ.ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮೈಸೂರು ವಲಯದ ಮಹಿಳಾ ಪ್ರಮುಖ ವಾಣಿ ಭಾಸ್ಕರ್, ಕಾರ್ಯದರ್ಶಿ ರಾಘವೇಂದ್ರ, ರವಿಶಂಕರ್, ರಂಗನಾಥ, ವಕೀಲರಾದ ಶಿವರಾಜ್ ಇನ್ನಿತರರು ಹಾಜರಿದ್ದರು.


Spread the love

Leave a Reply

Please enter your comment!
Please enter your name here