ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದು ಸರಿಯಲ್ಲ – ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Spread the love

ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದು ಸರಿಯಲ್ಲ – ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ರೈತರು ಸಂವಿಧಾನಬದ್ಧವಾಗಿ ಹೋರಾಟ ಮಾಡಿ, ತಮ್ಮ ವಿಚಾರವನ್ನು ಮುಂದಿಡುವುದು ತಪ್ಪಲ್ಲ ಅದನ್ನು ಬಿಟ್ಟು ದೇಶ , ಧ್ವಜ ಸಂವಿಧಾನವನ್ನು ಅವಮಾನ ಮಾಡುವ ಕೆಲಸ ಸರಿಯಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಕೇಂದ್ರ ಸರಕಾರ ಇನ್ನೂ ಕೂಡ ಮಾತುಕತೆಗೆ ಆಹ್ವಾನ ಮಾಡುತ್ತಿದೆ ರೈತರು ಕಾನೂನು ಬದಲಾವಣೆ ಮಾಡಿದರೆ ಮಾತ್ರ ಬರುತ್ತೇವೆ ಎಂದು ಪಟ್ಟು ಹಿಡಿಯೋದು ಸರಿಯಲ್ಲ ಈಗಾಗಲೇ ಇದ್ದ ಕಾನೂನನ್ನು ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿದೆ ಹಾಗಾಗಿ ಯಾವುದೇ ರಾಜಕೀಯ ಪಕ್ಷ ಈ ಕಾಯ್ದೆ ವಿರೋಧ ಮಾಡಿದರೆ ತಪ್ಪಾಗುತ್ತದೆ ಎಂದರು.

ಮೀಸಲಾತಿಗೆ ಆಗ್ರಹಿಸಿ ವಿವಿಧ ಜಾತಿಗಳ ಹೋರಾಟ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸ್ವಾಮೀಜಿ ಮೂಲದಲ್ಲೇ ತಪ್ಪಾಗಿದೆ ಅನ್ನೋದು ನಮ್ಮ ಅಭಿಪ್ರಾಯವಾಗಿದ್ದು, ಜಾತಿ ಆಧಾರದಲ್ಲಿ ಮೀಸಲಾತಿ ಕೊಟ್ಟಿರುವುದರಿಂದಲೇ ಸಮಸ್ಯೆ ಆಗಿದೆ. ಎಲ್ಲರೂ ನಾವು ಹಿಂದುಳಿದವರು ಎಂದು ಹಾತೊರೆಯುತ್ತಿದ್ದಾರೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುತ್ತೇವೆ ಅಂದ್ರೆ ಸಮಸ್ಯೆ ಆಗುತ್ತಿರಲಿಲ್ಲಸವಲತ್ತುಗಳು ಯಾರಿಗೆ ಬೇಡ ಹೇಳಿ. ಎಲ್ಲಾ ಜಾತಿಗಳಲ್ಲೂ ಹಿಂದುಳಿದವರು ಇದ್ದಾರೆ ಸವಲತ್ತು ಕೇಳುವುದು ತಪ್ಪಲ್ಲ. ಆನೇಕ ಹಿಂದುಳಿದವರು ನಮ್ಮೊಂದಿಗೆ ಕಷ್ಟ ತೊಡಿಕೊಂಡಿದ್ದಾರೆ ಹಿಂದುಳಿದ ಸಮಾಜದಲ್ಲಿ ಎಲ್ಲಾ ಸವಲತ್ತುಗಳು ಪ್ರಬಲರ ಪಾಲಾಗುತ್ತಿದೆ ಆದರೆ ಹಿಂದುಳಿದವರು ಇನ್ನೂ ಹಿಂದುಳಿದಿದ್ದಾರೆ ಮೀಸಲಾತಿ ಕೊಟ್ಟನಂತರ ಒಳಮೀಸಲಾತಿಗೆ ಕಲಹ ಶುರುವಾಗುತ್ತದೆ ಎಂದರು.

ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದೌರ್ಜನ್ಯ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸ್ವಾಮೀಜಿಗಳು ಧ್ವಂಸವಾದ ಮಂದಿರಗಳನ್ನು ಪುನರ್ನಿರ್ಮಾಣ ಮಾಡುವ ಭರವಸೆ ಸಿಕ್ಕಿದೆ. ಸುಟ್ಟುಹಾಕಿದ ರಥಗಳನ್ನು ಪುನಹ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸರಕಾರದ ಮಂತ್ರಿಗಳು ಅಂದಿದ್ದಾರೆ. ದೇವಾಲಯದ ಅರ್ಚಕರಿಗೆ ವಿಶೇಷ ಸೌಲಭ್ಯ ನೀಡುತ್ತೇವೆ ದೇವಾಲಯಗಳಲ್ಲಿ ಅನ್ಯಮತೀಯ ರಿಗೆ ಅವಕಾಶಕೊಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ತಾನು ಹಿಂದೂ ಎಂದು ಡಿಕ್ಲರೇಷನ್ ಪಡೆದ ಬಳಿಕವೇ ದೇವಾಲಯಗಳಲ್ಲಿ ಉದ್ಯೋಗ ನೀಡುವುದಾಗಿ ಸಚಿವರ ಈ ಭರವಸೆಗಳ ನಂತರವೂ ಕೆಲವೊಂದು ದೂರು ಬಂದಿದೆ ಆದ್ದರಿಂದ ಸೂಕ್ತ ಕ್ರಮಕ್ಕಾಗಿ ಆಂಧ್ರ ಸರ್ಕಾರಕ್ಕೆ ಆಗ್ರಹಿಸಿದ್ದೇವೆ ಎಂದರು.


Spread the love