
Spread the love
ಜಾನುವಾರು ಸಾಗಾಣಿಕೆ ನಿಷೇಧದ ಆದೇಶ ವಾಪಸ್: ದ.ಕ.ಜಿಲ್ಲಾಧಿಕಾರಿ ರವಿಕುಮಾರ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಜಾನುವಾರು ಸಾಗಾಣಿಕೆ ಸಂಬಂಧಿಸಿ ಹೇರಲಾಗಿದ್ದ ನಿಷೇಧದ ಆದೇಶ ವನ್ನು ವಾಪಸ್ ಪಡೆಯಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 348 ಗ್ರಾಮಗಳಲ್ಲಿನ 7,036 ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿತ್ತು.
ಅಲ್ಲದೆ 397 ಜಾನುವಾರುಗಳು ಸಾವಿಗೀಡಾಗಿತ್ತು. ಫೆ.15ರವರೆಗೆ ಜಿಲ್ಲೆಯ 2,26,801 ಜಾನುವಾರುಗಳಿಗೆ ಚರ್ಮ ಗಂಟುರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹೊಸ ಪ್ರಕರಣ ಕಂಡು ಬಂದಿಲ್ಲ. ರೋಗವು ನಿಯಂತ್ರಣಕ್ಕೆ ಬಂದ ಕಾರಣ ಜಾನುವಾರು ಸಾಗಾಣಿಕೆ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
Spread the love