ಜಾರುಕುದ್ರು ಸೇತುವೆ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಟ್ಟ ಸೊರಕೆಗೆ ಸಾರ್ವಜನಿಕರಿಂದ ಸನ್ಮಾನ

Spread the love

ಜಾರುಕುದ್ರು ಸೇತುವೆ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಟ್ಟ ಸೊರಕೆಗೆ ಸಾರ್ವಜನಿಕರಿಂದ ಸನ್ಮಾನ

ಉಡುಪಿ: ಉದ್ಯಾವರ ಜಾರುಕುದ್ರುವಿಗೆ ಸೇತುವೆ ನಿರ್ಮಾಣಕ್ಕೆ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಅನುದಾನ ದೊರಕಿಸಿ ಸೇತುವೆ ಪೂರ್ಣಗೊಂಡ ಹಿನ್ನಲೆಯಲ್ಲಿ ಗ್ರಾಮಸ್ಥರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರನ್ನು ಸನ್ಮಾನಿಸಿದರು.

ಸಿದ್ದರಾಮಯ್ಯ ಸರಕಾರದಲ್ಲಿ ವಿನಯ್ ಕುಮಾರ್ ಸೊರಕೆ ರವರು ಸಚಿವರಾದ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರುಕುದ್ರು ಪ್ರದೇಶದಲ್ಲಿ ನೂರಾರು ಮನೆಗಳಿದ್ದು ಆ ಪರಿಸರದ ಸಾರ್ವಜನಿಕರಿಗೆ ಉದ್ಯಾವರಕ್ಕೆ ಬರಬೇಕಾದರೆ ದೋಣಿಯನ್ನೇ ಅವಲಂಬಿಸುತ್ತಿದ್ದು ವೈದ್ಯಕೀಯ ಸಮಸ್ಯೆಗಳು ಮತ್ತು ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಇರುವುದನ್ನು ಮನಗಂಡು ಜಾರು ಕುದ್ರು ಪ್ರದೇಶಕ್ಕೆ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೋಟ್ಯಾಂತರ ರೂ ಅನುದಾನದಿಂದ ಜಾರುಕುದ್ರುವಿಗೆ ಸೇತುವೆಯನ್ನು ನಿರ್ಮಿಸಿದ್ದು ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ.

ಇದೇ ಸೇತುವೆ ಮುಖಾಂತರ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆರವರು ಶುಕ್ರವಾರ ಖಾಸಗಿ ಕಾರ್ಯಕ್ರಮದ ನಿಮಿತ್ಯ ಜಾರುಕುದ್ರಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರು ಎದುರುಗೊಂಡು ಕೃತಜ್ಞತಾ ಪೂರ್ವಕವಾಗಿ ಅವರನ್ನು ಸನ್ಮಾನಿಸಿದರು


Spread the love

Leave a Reply

Please enter your comment!
Please enter your name here