ಜಿಲ್ಲಾಧಿಕಾರಿ ಫೋನ್ ಇನ್ ಕಾರ್ಯಕ್ರಮ: ಮಳೆನೀರು ಚರಂಡಿಗೆ ಕೊಳಚೆ ನೀರು! ನಗರದ ಒಳಚರಂಡಿ ಅವ್ಯವಸ್ಥೆ ಬಗ್ಗೆ ದೂರುಗಳ ಸರಮಾಲೆ
ಮಂಗಳೂರು: ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕವಾಗಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿರುವಂತೆಯೇ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ೧ ಗಂಟೆಯ ಫೋನ್ ಇನ್ ಕಾರ್ಯಕ್ರಮದಲ್ಲೂ ಮಳೆ ನೀರು ಚರಂಡಿಯಲ್ಲಿ ಫ್ಲಾಟ್, ಅಪಾರ್ಟ್ಮೆಂಟ್‌ಗಳ ಕೊಳಚೆ ನೀರು (ಒಳಚರಂಡಿ) ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಸಲ್ಲಿಕೆಯಾಗಿವೆ.
ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಬುಧವಾರ ಪಾಲಿಕೆಯ ಮೇಯರ್ ಕೊಠಡಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ, ಸುರತ್ಕಲ್ ಮುಕ್ಕದ ವಾರ್ಡ್ ನಂ. ೧ರ ಚರ್ಚ್ ಮುಂಭಾಗದ ತೆರೆದ ನೀರಿನ ಚರಂಡಿಯಲ್ಲಿ ಸಮೀಪದ ಫ್ಲಾಟ್‌ಗಳ ಕೊಳಚೆ ನೀರು ಬಿಡಲಾಗುತ್ತಿದೆ. ಈ ಬಗ್ಗೆ ಎರಡು ಮೂರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಆಗಿಲ್ಲ. ಈ ಚರಂಡಿ ಸಮೀಪವೇ ಬಸ್ಸು ನಿಲ್ದಾಣವಿದೆ. ಸಾವಿರಾರು ಮಕ್ಕಳು, ನಾಗರಿಕರು ಈ ಬಸ್ಸು ನಿಲ್ದಾಣಕ್ಕೆ ಬರುವಾಗ ಈ ಕೊಳಚೆ ನೀರಿನ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಫಾ. ಸ್ಟಾನ್ಲಿ ಪಿಂಟೋ ಎಂಬವರು ದೂರಿದರು.
ಕೃಷ್ಣಾಪುರ ಮರಿಯಮ್ ಡಿಸೋಜಾ ಎಂಬವರು ಕರೆ ಮಾಡಿ, ಮಳೆ ನೀರು ತೋಡಿಗೆ ಕೊಳಚೆ ನೀರು ಬಿಡಲಾಗುತ್ತಿದೆ ಎಂದು ದೂರಿದರೆ, ಯೆಯ್ಯಾಡಿಯ ಸುಭಾಶಿನಿ ಭಟ್‌ರವರು, ಕದ್ರಿ ಪದವು ಬಳಿ ೪೦ ಮನೆಗಳಿಗ್ದು, ಪಾಲಿಕೆಯಿಂದ ಒಳಚರಂಡಿ ವ್ಯವಸ್ಥೆ ಮಾಡಲಾಗಿಲ್ಲ. ೨೦ ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುರತ್ಕಲ್ ಭಾಗದಲ್ಲಿ ಯುಜಿಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಸ್ಥಳೀಯರು ೨೫ ವರ್ಷಗಳಿಂದ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ನವೀನ್ ಬೈಕಂಪಾಡಿ ಎಂಬವರು ದೂರಿದರು.
ಈ ದೂರುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಫ್ಲಾಟ್‌ಗಳು, ವಸತಿ ಸಮುಚ್ಚಯಗಳಿಗೆ ಒಳಚರಂಡಿ ನೀರು ಮಳೆ ನೀರು ಚರಂಡಿಗೆ ಹರಿಸದಿರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಅಭಿಯಾನವನ್ನೂ ಮಂಗಳೂರು ನಗರ ಪಾಲಿಕೆಯಿಂದ ನಡೆಸಲಾಗುತ್ತಿದೆ. ತ್ಯಾಜ್ಯ ನೀರನ್ನು ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಮೂಲಕ ಸಂಸ್ಕರಿಸಲು ಅಪಾರ್ಟ್ಮೆಂಟ್‌ಗಳಿಗೆ ನಿರ್ದೇಶಿಸಲಾಗಿದೆ. ಉಲ್ಲಂಘಿಸುವವರ ವಿರುದ್ಧ ಎಂಸಿಸಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಎಂಸಿಸಿ ಆಯುಕ್ತರು ಅಪಾರ್ಟ್ಮೆಂಟï ಸಂಘಗಳ ಸಭೆಯನ್ನು ಸಹ ಕರೆದು, ಮಳೆನೀರಿನ ಚರಂಡಿಗಳಿಗೆ ಒಳಚರಂಡಿ ಬಿಡದಂತೆ ನಿರ್ದೇಶಿಸಿದ್ದಾರೆ. ಅಪಾರ್ಟ್ಮೆಂಟ್‌ಗಳು ತಮ್ಮದೇ ಆದ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ನಗರದ ಕೆಲವೆಡೆ ಹಳೆಯ ಒಳಚರಂಡಿ ವ್ಯವಸ್ಥೆ ಶಿಥಿಲಾವಸ್ಥೆಯಲ್ಲಿರುವ ಕಾರಣ ನಗರಕ್ಕೆ ಸಮಗ್ರ ಹೊಸ ಒಳಚರಂಡಿ ವ್ಯವಸ್ಥೆಗಾಗಿ ೧೨೦೦ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.
ಜಪ್ಪಿನಮೊಗರುವಿನಲ್ಲಿ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಉಳ್ಳಾಲ ಹೊಯಿಗೆಯನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ನಿರ್ಮಿಸುವ ಪ್ರಸ್ತಾವನೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲೂö್ಯಡಿ)ಯು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಅನುಮತಿಗಾಗಿ ಪರಿವೇಶ್ ಪೋರ್ಟಲï ಮೂಲಕ ಸಲ್ಲಿಸಿದೆ ಎಂದು ದ.ಕ. ಜಿ¯್ಲÁಧಿಕಾರಿ ಮತ್ತು ಮನಪಾ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಫೋನ್‌ಇನ್ ವೇಳೆ ಡಾಲ್ಫಿ ವೇಗಸ್ ಎಂಬವರು ಸೇತುವೆ ಕಾಮಗಾರಿ ಬಗ್ಗೆ ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ಈ ಪ್ರತಿಕ್ರಿಯೆ ನೀಡಿದರು. ಈ ಯೋಜನೆಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಸಮಿತಿಯಿಂದ ಅನುಮೋದನೆ ಕಡ್ಡಾಯವಾಗಿದೆ ಎಂದು ಹೇಳಿದರು. ಫೆಬ್ರವರಿ ಮೊದಲ ವಾರದಲ್ಲಿ ಕೆಸಿಎಸ್‌ಎಂಸಿ ಸಭೆ ನಡೆಯುವ ಸಾಧ್ಯತೆಯಿದೆ. ಸಿಆರ್‌ಝಡ್ ಅನುಮೋದನೆ ಪಡೆದ ನಂತರ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಪಾದಚಾರಿ ಸೇತುವೆಯು ಈ ಹಿಂದೆ ಉಳ್ಳಾಲ ಹೊಯಿಗೆಯಿಂದ ಮಂಗಳೂರಿಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಕಚೇರಿಗೆ ಹೋಗುವವರು, ವಿದ್ಯಾರ್ಥಿಗಳು ಮತ್ತು ದಿನಗೂಲಿ ಕಾರ್ಮಿಕರಿಗೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿತ್ತು. ಜಪ್ಪಿನಮೊಗÀರು ಹಿನ್ನೀರಿನಲ್ಲಿ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯು ನಿವಾಸಿಗಳು ರಾಷ್ಟಿçÃಯ ಹೆz್ದÁರಿ ೬೬ ಅನ್ನು ತಲುಪಲು ಮತ್ತು ಮಂಗಳೂರು ಅಥವಾ ತೊಕ್ಕೊಟ್ಟು ಕಡೆಗೆ ಹೋಗುವ ಖಾಸಗಿ ಅಥವಾ ಸರ್ಕಾರಿ ಬಸ್‌ಗಳನ್ನು ಹತ್ತಲು ಅತ್ಯಂತ ಕಡಿಮೆ ಅವಧಿಯ ಸಂಪರ್ಕ ಮಾರ್ಗವಾಗಿದೆ.
ಫೋನ್ ಇನ್ ಮೂಲಕ ಅವ್ಯವಸ್ಥಿತ ಪಾರ್ಕಿಂಗ್, ಪಾದಚಾರಿ ಮಾರ್ಗಗಳ ಕೊರತೆ, ಹಂಪ್‌ಗಳ ಅಗತ್ಯತೆ, ಹಂಪ್‌ಗಳಿಗೆ À ಬಣ್ಣ ಬಳಿಯುವುದು ಮತ್ತು ಅಪಘಾತಗಳನ್ನು ತಡೆಗಟ್ಟಲು ತೆರೆದ ಮಳೆನೀರಿನ ಚರಂಡಿಗಳನ್ನು ಸ್ಲ್ಯಾಬ್‌ಗಳಿಂದ ಮುಚ್ಚುವುದು ಮೊದಲಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಗಮನ ಸೆಳೆದರು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಂದಾಯ ಅಧಿಕಾರಿ ಅಕ್ಷತಾ ಕೆ. ಸೇರಿದಂತೆ ವಿವಿಧ ವಿಭಾಗಗಳ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
