
Spread the love
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಂಬ್ಲ ಹಾಗೂ ಮಣ್ಣಗುಡ್ಡೆ ವಾರ್ಡ್ ನಿವಾಸಿಗಳಿಗೆ ರೇಷನ್ ಕಿಟ್ ವಿತರಣೆ
ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಗರದ ಕಂಬ್ಲ ಹಾಗೂ ಮಣ್ಣಗುಡ್ಡೆ ವಾರ್ಡ್ ನ ಆರ್ಥಿಕವಾಗಿ ಹಿಂದುಳಿದ ಜನರಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮತ್ತು ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಜೆ. ಆರ್. ಲೋಬೊ ರವರು ವಿತರಿಸಿದರು.
ಈ ಸಂದರ್ಭದಲ್ಲಿ ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಮಹಾಬಲ ಮಾರ್ಲ, ವಿಶ್ವಾಸ್ ದಾಸ್, ಟಿ. ಕೆ. ಸುಧೀರ್, ನೀರಜ್ ಪಾಲ್, ಶಾಂತಲಾ ಗಟ್ಟಿ, ಉದಯ್ ಕುಂದರ್, ನಿರಂಜನ್, ಮಂಜುಳಾ ನಾಯಕ್, ಪದ್ಮನಾಭ ಅಮೀನ್, ರಘುರಾಜ್, ಕೃತಿನ್ ಕುಮಾರ್, ಚೇತನ್, ಲಿಯಾಖತ್ ಶಾ, ಆಸ್ಟನ್ ಸಿಕ್ವೇರಾ, ಶಾನ್ ಡಿಸೋಜಾ, ಲಕ್ಷ್ಮಣ್ ಶೆಟ್ಟಿ, ಯಶವಂತ್ ಪ್ರಭು, ತನ್ವಿರ್ ಶಾ, ಮಿಥುನ್ ಉರ್ವಾ, ಯೋಗೀಶ್ ನಾಯಕ್ ಮತ್ತಿತರರು ಹಾಜರಿದ್ದರು.
Spread the love