
ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಚುನಾವಣೆ : ಕುಶಾಲ್ ಪೂಜಾರಿ ತಂಡ ಜಯಭೇರಿ
ಮಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರು. ಇದರ ಪುತ್ತೂರು ,ಸುಳ್ಯ ಬೆಳ್ತಂಗಡಿ ಕಡಬ ಮೂಡಬಿದಿರೆ ಉಳಾಲ ಸುರತ್ಕಲ್ ಮುಲ್ಕಿ ಕೈಕಂಬ ಬಂಟ್ವಾಳ ವಿ ಟ್ಲ ಮಂಗಳೂರು ಉಪಸಮಿತಿ ಓಳಗೊಂಡ ಜಿಲ್ಲಾ ಸಮಿತಿಯ ಚುನಾವಣೆ ಲಯನ್ಸ್ ಸೇವಾ ಮಂದಿರ ಮಲಿಕಟ್ಟ ಮಂಗಳೂರುನಲ್ಲಿ ನಡೆಯಿತು.
2022-2025 ರ ಸಾಲಿನ ಜಿಲ್ಲಾ ಸಮಿತಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ, ರಾಜ್ಯದ ಆರ್ ಆರ್ ತಂಡದ ಬೆಂಬಲದಲ್ಲಿ ಕುಶಾಲ್ ಪೂಜಾರಿ ಮತ್ತು ಅವರ ತಂಡ ಅತ್ಯಂತ ಬಹುಮತಗಳಿಂದ ಜಯಗಳಿಸಿದೆ.
ಅಧ್ಯಕ್ಷರಾಗಿ ಕುಶಾಲ್ ಪೂಜಾರಿ ಕಿನ್ನಿಗೋಳಿ, ಉಪಾಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ ಮೂಡುಬಿದ್ರಿ, ಲಕ್ಷ್ಮೀನಾರಾಯಣ ಅಡ್ಯಂತಾಯ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸುಶೀಲ್ ನೊರೊನ್ಹ ಮಂಗಳೂರು, ಜಂಟಿ ಕಾರ್ಯದರ್ಶಿಯಾಗಿ ಪುರುಷೋತ್ತಮ್ ಪಿ. ಉಳ್ಳಾಲ, ಸಂಘಟನಾ ಕಾರ್ಯದರ್ಶಿಯಾಗಿ ಯೂಸುಫ್ ಎನ್. ಪಿ. ಬಂಟ್ವಾಳ, ಕೋಶಾಧ್ಯಕ್ಷನಾಗಿ ಎಸ್ ಪ್ರವೀಣ್ ಮಂಗಳೂರು ಹಾಗೂ ಕಾರ್ಯಕಾರಿ ಸಮಿತಿಗೆ ಆಂಟೋನಿ ಫೆರ್ನಾಂಡಿಸ್, ಚರಣ್ ಕುಮಾರ್, ಗೋಪಾಲ, ಹೈದರ್ ಎಚ್ ಎ, ಮಾಯಿಲಪ್ಪ ಗೌಡ, ರಘುಪತಿ ನಾಯಕ್, ರಾಮ, ರವೀಂದ್ರ ಸಪಲ್ಯ, ಸಂಜೀವ ಎ ಜಿ, ಸುಬ್ರಯ ಗೌಡ, ವಾಸುದೇವ ಗೌಡ, ಯಶೋಧರ, ನವೀನ್ ಕುಮಾರ್ ಇವರುಗಳು ಆಯ್ಕೆ ಆಗಿದ್ದಾರೆ. ಇವರನ್ನು ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ರಮೇಶ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಉರ್ಭನ್ ಪಿಂಟೊ ರವರು ಅಭಿನಂದಿಸಿದಾರೆ.