
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿ ತರಲು ೪ ದಿನಗಳ ಫುಲ್ ಲಾಕ್‌ಡೌನ್‌ನಿಂದ ಮಾತ್ರ ಸಾಧ್ಯ ಇಲ್ಲವೇ, ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ-ಜಿಲ್ಲಾಡಳಿತಕ್ಕೆ ಐವನ್ ಡಿ ಸೋಜ ಸಲಹೆ
ಪ್ರಸ್ತುತಃ ಇರುವ ನಿಯಮದಿಂದ ಕೊರೊನಾ ಸಂಪೂರ್ಣ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂಬುವುದು ಕಳೆದ ೩೦ ದಿನಗಳ ಲಾಕ್‌ಡೌನ್‌ನಿಂದ ಸಾಬೀತಾಗಿದೆ. ಮನೆಯಲ್ಲಿ ಇದ್ದವರು ಮನೆಯಲ್ಲಿ, ಹೊರಗೆ ಇದ್ದವರು ಹೊರಗೆ ಎಂಬAತೆ ಕಾರ್ಯ ನಿರ್ವಹಣತೆ ಆಗುತ್ತದೆ. ಸರಕಾರ ಅಥವಾ ಜಿಲ್ಲಾಡಳಿತ ಎಲ್ಲರ ಯೋಗಕ್ಷೇಮದ ಬಗ್ಗೆ ಚಿಂತನೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಪ್ರಸ್ತುತ ಇರುವ ಲಾಕ್‌ಡೌನ್, ಒಂದು ರೀತಿಯ ಭಯದ ವಾತವರಣದಿಂದ ಇರುವವರು ಮನೆಯಲ್ಲಿ, ಉಳಿದವರು ರಸ್ತೆಯಲ್ಲಿ ಎಂಬAತೆ ಇದೆ. ಬೆಳಿಗ್ಗೆ ೬ರಿಂದ ೧೦ಗಂಟೆಯವರೆಗೆ ಅಂಗಡಿ ಸಾಮಾನು, ೧೦ರಿಂದ ಮಧ್ಯಾಹ್ನ ೨ಗಂಟೆಯವರೆಗೆ ಬ್ಯಾಂಕುಗಳ ಹಣಕಾಸಿನ ವ್ಯವಹಾರ ನಡೆಯುತ್ತದೆ. ಕೇವಲ ತರಕಾರಿ, ರೇಶನ್ ಸ್ಟೊರ‍್ಸ್ ಮತ್ತು ಅಂಗಡಿಗಳಿಗೆ ಅನುಮತಿ ಇದೆ. ಉಳಿದ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಅವರ ಪಾಡು ಏನು? ಅವರಲ್ಲಿರುವ ಸಾಮಾನುಗಳ ಕಥೆಯೇನು?ಈ ಬಗ್ಗೆ ಆಲೋಚನೆಯು ಆಡಳಿತಾಧಿಕಾರಿಗಳು ಮಾಡದೇ ಇರುವುದು ಖಂಡನೀಯ?
ಜನರ ಅಭಿಪ್ರಾಯದಂತೆ, ಒಂದೇ ಸಂಪೂರ್ಣ ಬಂದ್ ಮಾಡಿ ಕೊರೊನಾವನ್ನು ಹತೋಟಿಗೆ ತನ್ನಿ ಅಥವಾ ಈ ಲಾಕ್‌ಡೌನಿನಲ್ಲಿ ಎಲ್ಲರೂ ದುಡಿಯುವ, ಅಂಗಡಿಗಳನ್ನು ತೆರೆಯುವ ಅವಕಾಶಗಳನ್ನು ನೀಡಿ, ಇಂತಹ ಕೆಲವು ನಿರ್ಧಾರಗಳು ನೆರೆಯ ಉಡುಪಿಯಲ್ಲಿ, ಕಾಸರಗೋಡು ಜಿಲ್ಲೆಗಳಲ್ಲಿ ತೆಗೆದುಕೊಳ್ಳಲಾಗಿದೆ.
ಲಾಕ್‌ಡೌನ್ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವ ನಿರ್ಧಾರ ಜಿಲ್ಲಾಡಳಿತಕ್ಕೆ ಇದೆ. ವ್ಯಾಕ್ಸಿನ್ ಗಳನ್ನು ಮನೆಮನೆಗೆ ಹೋಗಿ ನೀಡಿ, ನಮ್ಮಲ್ಲಿ ಅನೇಕ ಇಲಾಖೆಗಳ ಅಧಿಕಾರಿಗಳು, ಕೊರೊನಾ, ಸಂಧಿತಿತ ಕೆಲಸಗಾರರು ಇದ್ದಾರೆ. ಅವರನ್ನು ಬಳಕೆ ಮಾಡಿ ನೀಡಬಹುದಾಗಿದೆ. ಯಾವುದಕ್ಕೂ ಸರಿಯಾದ ಯೋಜನೆಗಳನ್ನು ಹಾಕದೇ, ಕೇವಲ ಜನರನ್ನು ಮನೆಯಲ್ಲಿ ಇರಿ ಎಂದು ಗೋಳು ಮಾಡುವುದು ಸರಿಯಾದ ಕ್ರಮವಲ್ಲ. ೩೦ ದಿನಗಳ ಬಳಿಕ ಸರಕಾರ, ಜಿಲ್ಲಾಡಳಿತ ಈ ಬಗ್ಗೆ ತಮ್ಮ ನಿರ್ಧಾರಗಳನ್ನು ಪುನರ್ ಪರಿಶೀಲಿಸಬೇಕು ಎಂದು ಐವನ್ ಡಿ ಸೋಜರವರು ಜಿಲ್ಲಾಡಳಿತ, ಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ.
ವ್ಯಾಕ್ಸಿನ್ ನೀಡಲು ಸರಕಾರಕ್ಕೆ ಕೂಡಲೇ ಒತ್ತಾಯಿಸಿ, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ವಿನಹ, ಖಾಸಗಿ ಆಸ್ಪತ್ರೆಗೆ ತೆರಳುವಂತೆ ಕೈ ತೋರಿಸುವುದು ಸರಕಾರದ ನೀತಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದ್ದಾರೆ.
ವ್ಯಾಕ್ಸಿನ್ ನೀಡಿದರೆ, ಜನರಿಗೆ ಅರ್ಧದಷ್ಟು ಇರುವ ಕೊರೊನಾ ಹೆದರಿಕೆ ದೂರ ಆಗುತ್ತದೆ ಎಂಬುವುದನ್ನು ಆರೋಗ್ಯ ಇಲಾಖೆ ಗಮನಿಸಬೇಕು ಎಂದು ತಿಳಿಸಿದ್ದಾರೆ.