ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ – ನಿರ್ಲಕ್ಷ ಮಾಡಬೇಡಿ, ಕೋವಿಡ್ ಲಕ್ಷಣ ಕಂಡು ಬಂದಲ್ಲಿ ಪರೀಕ್ಷೆ ಮಾಡಿಕೊಳ್ಳಿ – ಡಿ.ಸಿ. ಜಿ ಜಗದೀಶ್ ಮನವಿ

Spread the love

 ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ – ನಿರ್ಲಕ್ಷ ಮಾಡಬೇಡಿ, ಕೋವಿಡ್ ಲಕ್ಷಣ ಕಂಡು ಬಂದಲ್ಲಿ ಪರೀಕ್ಷೆ ಮಾಡಿಕೊಳ್ಳಿ – ಡಿ.ಸಿ. ಜಿ ಜಗದೀಶ್ ಮನವಿ

ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಭರ್ತಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಜಿ.ಜಗದೀಶ್ ತುರ್ತು ಮನವಿಯೊಂದನ್ನು ಮಾಡಿದ್ದು ,ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ.ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ,ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.ಇಂತಹ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇರುವವರು ನಿರ್ಲಕ್ಷ್ಯ ಮಾಡಬಾರದು.ಲಕ್ಷಣ ಇದ್ದರೂ ಹತ್ತು ಹದಿನೈದು ದಿನ ಮನೆಯಲ್ಲೇ ಇದ್ದು ಕೊರೋನಾ ಉಲ್ಬಣಿಸಿದ ಬಳಿಕ ನೇರ ಐಸಿಯೂ ಗೆ ಬರುವವರ ಸಂಖ್ಯೆ ಹೆಚ್ಚುತ್ತಲೆ ಇದೆ.ಹೀಗೆ ಮಾಡಬೇಡಿ.ತಕ್ಷಣ ಬಂದು ಟೆಸ್ಟ್ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಪಾಲಿಸಬೇಕು. ಈ ಸಮಯದಲ್ಲಿ ಸಂಬಂಧಿಕರು ಮನೆಯಲ್ಲಿದ್ದರೂ ಐಸೊಲೇಷನ್ ನಲ್ಲಿರಲಿ.ಮನೆಯ ಒಬ್ಬರಿಗೆ ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ.ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ ಎಂದು ಹೇಳಿದ್ದಾರೆ.


Spread the love

Leave a Reply

Please enter your comment!
Please enter your name here