‘ಜಿಸ್ಕಾ ಮಾಲ್ – ಉಸ್ಕಾ ಹಮಾಲ್’ ಜಾರಿಗೆ ಮನವಿ

Spread the love

‘ಜಿಸ್ಕಾ ಮಾಲ್ – ಉಸ್ಕಾ ಹಮಾಲ್’ ಜಾರಿಗೆ ಮನವಿ

ಬೆಂಗಳೂರು: ದೇಶದ 29 ರಾಜ್ಯಗಳಲ್ಲಿ ಈಗಾಗಲೇ ‘ಜಿಸ್ಕಾ ಮಾಲ್ – ಉಸ್ಕಾ ಹಮಾಲ್’ ಜಾರಿಯಾಗಿರುವುದರಿಂದ ರಾಜ್ಯದಲ್ಲಿ ಆ.16ರಿಂದ ಲೋಡಿಂಗ್ ಹಾಗೂ ಆನ್ ಲೋಡ್ ವಾರ್ನಿ ಮಾಮೂಲಿ ಕೊಡುವುದನ್ನು ನಿಲ್ಲಿಸುವ ಸಂಬಂಧ ಯಶವಂತಪುರ ಎಂ.ಪಿ.ಎ.ಸಿ ಯಾರ್ಡ್ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗುವುದು ಎಂದು ಯಶವಂತಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಮೋಹನ್ ಹೇಳಿದ್ದಾರೆ.

ಅ.12 ರಂದು ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಯಶವಂತಪುರ ಲಾರಿ ಮಾಲೀಕರ ಸಂಘವು ಗೋರುಗುಂಟೆ ಪಾಳ್ಯ ಮುಖ್ಯ ರಸ್ತೆಯಿಂದ ದಿಂದ ಮೆರವಣಿಗೆ ಹೊರಟು ಎಪಿಎಂಸಿ ಕಚೇರಿಗೆ ನಿಮ್ಮ ಸರಕಿಗೆ ನಿಮ್ಮ ಹಮಾಲಿ ಮಾಮೂಲಿ ಫಲಕವನ್ನು ಹಿಡಿದುಕೊಂಡು ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಬೇರೆ ರಾಜ್ಯಗಳಲ್ಲಿ ಯಾವುದೇ ಲಾರಿ ಮಾಲೀಕರು ಹಣವನ್ನು ಹಮಾಲಿಗಳಿಗೆ ಹಣ ಕೊಡುತ್ತಿಲ್ಲ. ಇನ್ನು ಮುಂದೆ ಆ.16ರಿಂದ ಕರ್ನಾಟಕ ರಾಜ್ಯದಲ್ಲಿಯೂ ಲಾರಿ ಮಾಲೀಕರು ಯಾವುದು ಮಾಮೂಲಿ ಕೊಡುವುದಿಲ್ಲ ಎಂದು ತೀರ್ಮಾನಿಸಿದ್ದು, ಈ ಸಂಬಂಧ ಮನವಿ ನೀಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಯಶವಂತಪುರ ಲಾರಿ ಮಾಲೀಕರ ಸಂಘ, ಕೆಜಿಟಿಎ, ಎಪಿಎಂಸಿ, ಲಾರಿ ಅಸೋಸಿಯೇಷನ್, ಬಿಸಿಎಲ್‌ಟಿಎ, ಕೆಜಿಎಫ್, ಎಫ್‌ಜಿಓಎ, ಕೆಎಸ್‌ಟಿಎ, ಬೆಂಗಳೂರು ಜಿಲ್ಲೆಯ ಎಲ್ಲಾ ಲಾರಿ ಮಾಲೀಕರ ಅಸೋಸಿಯೇಷನ್ ಇತರೆ ಸಂಘಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಲಾರಿ ಮಾಲೀಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ವರ್ತಕರು ಹಾಗೂ ಕೈಗಾರಿಕೆಗಳು ತಮ್ಮ ಸರಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಣಿಕೆ ಮಾಡಲು ಸಾಗಾಣಿಕೆ ಮಾಡುವ ಲಾರಿಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ಆದರೆ ಅವರ ಸರಕನ್ನು ಲಾರಿಗಳಲ್ಲಿ ಲೋಡಿಂಗ್ ಹಾಗೂ ಅನ್ ಲೋಡಿಂಗೆ ವಾರ್ನಿ ಮಾಮೂಲಿ ಎಂದು ಲಾರಿಯವರಿಂದ ಹಣ ವಸೂಲಿಮಾಡಿ ಲಾರಿ ಮಾಲೀಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ರೂಪಾಯಿ ಮಾಲೀಕರಿಗೆ ಹೊರೆಯಾಗುತ್ತಿದೆ. ಇದರ ತಡೆಗೆ ‘ಜಿಸ್ಕಾ ಮಾಲ್ – ಉಸ್ಕಾ ಹಮಾಲ್’ ಜಾರಿ ಮಾಡಲಾಗಿದ್ದು ಅದನ್ನು ಕಾರ್ಯರೂಪಕ್ಕೆ ತರುವುದಾಗಿ ಹೇಳಿದ್ದಾರೆ.


Spread the love