ಜಿ.ಪಂ. ಸಿ.ಇ.ಓ ಡಾ. ಆನಂದ್ ಅವರಿಂದ ಪರಿಶೀಲನೆ

Spread the love

ಜಿ.ಪಂ. ಸಿ.ಇ.ಓ ಡಾ. ಆನಂದ್ ಅವರಿಂದ ಪರಿಶೀಲನೆ

ಮಂಗಳೂರು:  ಸುಳ್ಯ ತಾಲೂಕು ಪಂಚಾಯತ್‍ಗೆ ಜು.12ರ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರು ಭೇಟಿ ನೀಡಿದರು.

ನಂತರ ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣ ಘಟಕ, ಅಮೃತ ಮುಕ್ತಿಧಾಮ, ಅಮೃತ ಉದ್ಯಾನವನ ಎಎಒ ಕಾಮಗಾರಿ, ಅರಂತೋಡು ಗ್ರಾಮ ಪಂಚಾಯತ್ ಗ್ರಂಥಾಲಯ, ಅಂಗನವಾಡಿ ಹಾಗೂ ಅರಂಬೂರು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ, ಸಹಾಯಕ ನಿರ್ದೇಶಕರು (ಗ್ರಾ.ಉ), ಸಹಾಯಕ ಅಭಿಯಂತರರು, ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು‌ ಹಾಗೂ ಸಿಬ್ಬಂದಿಗಳಿದ್ದರು


Spread the love