ಜೀವನದ ಕ್ಷಣಗಳಿಗೆ ಸಂಗೀತದ ರಂಗು ತುಂಬಿದ ಜಿಣ್ಯೆ ರಂಗ್ ರಸಮಂಜರಿ

Spread the love

ಜೀವನದ ಕ್ಷಣಗಳಿಗೆ ಸಂಗೀತದ ರಂಗು ತುಂಬಿದ ಜಿಣ್ಯೆ ರಂಗ್ ರಸಮಂಜರಿ

ಮಂಗಳೂರು: ಮಾಂಡ್ ಸೊಭಾಣ್ ಪ್ರಾಯೋಜಿತ ತಿಂಗಳ ವೇದಿಕೆ ಸರಣಿಯ 229ನೇ ಕಾರ್ಯಕ್ರಮ 07-02-2021 ರಂದು ಸಂಜೆ 6.30 ಗಂಟೆಗೆ ಕಲಾಂಗಣದಲ್ಲಿ ನಡೆಯಿತು.

ಗಾಯಕ ರೊನಿ ಕ್ರಾಸ್ತಾ, ಕುಲ್ಶೇಕರ ಇವರು ಗಂಟೆ ಬಾರಿಸಿ ಚಾಲನೆ ನೀಡಿದರು. ನಂತರ ಕೊಂಕಣಿ ಕವಿ ವಾಲ್ಟರ್ ದಾಂತಿಸ್ ಹಾಡುಗಳು ಉದಿಸಿದ ಹಿನ್ನಲೆ ವಿವರಿಸುತ್ತಾ ಹೋದಂತೆ, ವಿಭಿನ್ನ ರೀತಿಯಲ್ಲಿ ‘ಜಿಣ್ಯೆ ರಂಗ್’ ರಸಮಂಜರಿ ಪ್ರಸ್ತುತವಾಯಿತು.

ಹಿರಿಯ ಗಾಯಕ ಜೋಡಿ ಎರಿಕ್-ಜೊಯ್ಸ್ ಒಝೇರಿಯೊ ಕಿರಾಕ್ ಮೋಗ್ ಪೆರಾಚೊ ಹಾಡು ಹಾಡಿ ಮನ ರಂಜಿಸಿದರೆ ಗಾಯಕರಾದ ರೊಬಿನ್ ಸಿಕ್ವೇರಾ, ಆಶ್ವಿನ್ ಡಿಕೋಸ್ತಾ, ವೆಲಿಟಾ ಲೋಬೊ, ಎಲ್ಟನ್ ಪಿಂಟೊ, ಸೀಮಾ ಡಿಸೋಜ, ಆಶ್ನಾ ಡಿಸಿಲ್ವಾ, ಶರ್ವಿನ್ ಮಾಬೆನ್, ಲೊಯ್ ವಾಲೆಂಟೈನ್ ಹಾಗೂ ಅರುಣ್ ದಾಂತಿ ವಿವಿಧ ಹಾಡುಗಳಿಗೆ ದನಿಗೂಡಿದರು.

ಸಮಯದ ಓಟದಲ್ಲಿ ಗೆದ್ದ ಮತ್ತು ಜನಮನದಲ್ಲಿ ಉಳಿದ – ಸಾಂಡುನ್ ಗೆಲ್ಲ್ಯಾ ಚೆಡ್ಯಾ, ಕೆಸಾರ್ ಕಳೊ, ವೆಂಗೆಂತ್ ಧರುಂ, (ಸ್ವರ ಸಂಯೋಜನೆ -ಎರಿಕ್ ಒಝೇರಿಯೊ) ಮಾಂಯ್ಗೆ ಮಾಂಯ್, ಡುರುಂವ್ ಡುರುಂವ್, ಲೈಫ್ ವಿದ್ ಯೂ, ಹಾಂಡಿಯೆಚಿಂ ಸ್ವಪ್ಣಾಂ, ಟೈಟ್ ಫಿಟ್ ಜೀನ್ಸ್, ಜಿಣ್ಯೆಚಿ ಶಿಕ್ಷಕಿ, ಘರಾಂತ್ ಆಂಜ್, ಹಾಡ್ತಾ ಉಗ್ಡಾಸ್, ರೊಸಾ ದೀಸ್, ಗೊಂಗೊ – (ಸ್ವರ ಸಂಯೋಜನೆ- ಲೊಯ್ ವಾಲೆಂಟೈನ್) ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡವು.

ರಾಹುಲ್ ಪಿಂಟೊ ನೇತೃತ್ವದಲ್ಲಿ ನಾಚ್ ಸೊಭಾಣ್ ತಂಡದ ಸ್ನೇಹಿತ್ ಪಿಂಟೊ, ಡೆಲಿಶಿಯಾ ಪಿರೇರಾ, ಡಿಯಾನಾ ಮೆಂಡೊನ್ಸಾ, ಕರಿಷ್ಮಾ ಮೊಂತೇರೊ, ಗ್ಲೆನಿನಾ, ಜೀವನ್ ಸಿದ್ದಿ, ವೆನೆಸ್ಸಾ ಮತ್ತು ಲೆನಿಟಾ ಡಿಸೋಜ ಇವರು ನೃತ್ಯಗಳನ್ನು ಸಾದರಪಡಿಸಿದರು. ಈ ಸಂದರ್ಭದಲ್ಲಿ ವಾಲ್ಟರ್ ದಾಂತಿಸ್ ಎರಿಕ್-ಜೊಯ್ಸ್ ಒಝೇರಿಯೊ ಜೋಡಿಗೆ ನೆನಪಿನ ಕಾಣಿಕೆ ನೀಡಿದರು.

ಬ್ಯಾಂಡ್ ಚರಿತ್ರಾ ಸಂಗೀತ ಸಂಯೋಜನೆ ನೀಡಿದ್ದು, ಲೊಯ್ ವಾಲೆಂಟೈನ್ ಸಲ್ಡಾನ್ಹಾ, ಪ್ಯಾಟ್ಸನ್ ಪಿರೇರಾ, ಐವನ್ ಪಿರೇರಾ, ರಿಕಿತ್ ಸೋನ್ಸ್, ಶರ್ವಿನ್ ಮಾಬೆನ್, ರೂಬನ್ ಮಚಾದೊ ಮತ್ತು ಆಲ್ಸ್ಟನ್ ಗೋಮ್ಸ್ ಸಂಗೀತದ ವಿವಿಧ ಪರಿಕರಗಳಲ್ಲಿ ಸಹಕರಿಸಿದರು.

ಕಾರ್ಯಕ್ರಮದ ಮೊದಲಿಗೆ ಇಂಗ್ಲೆಂಡಿನ ಕೊಂಕಣಿ ಸಂಘಟನೆ ಎಸ್.ಕೆ.ಎ, ಲಂಡನ್ ಇವರು ಲಾಕ್ಡೌನ್ ಸಮಯದಲ್ಲಿ ಸುಮಾರು 750 ಸ್ಪರ್ಧಿಗಳೊಂದಿಗೆ ನಡೆಸಿದ ವಿಶ್ವ ಮಟ್ಟದ ಗಾಯನ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧಿಗಳನ್ನು ಗೌರವಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸುನೀಲ್ ಮೊಂತೇರೊ ಉಪಸ್ಥಿತರಿದ್ದರು.

ಟಿವಿ ನಿರೂಪಕ ಅರುಣ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.


Spread the love