ಜು. 6 ರಂದು ಮೀನುಗಾರ ಮುಖಂಡರೊಂದಿಗೆ ಮಲ್ಪೆಯಲ್ಲಿ ಡಿ ಕೆ ಶಿವಕುಮಾರ್‌ ಸಭೆ

Spread the love

ಜು. 6 ರಂದು ಮೀನುಗಾರ ಮುಖಂಡರೊಂದಿಗೆ ಮಲ್ಪೆಯಲ್ಲಿ ಡಿ ಕೆ ಶಿವಕುಮಾರ್‌ ಸಭೆ

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಡಿ. ಕೆ ಶಿವಕುಮಾರ್ ಅವರು ಜುಲೈ 6 ರಂದು ಮಲ್ಪೆಯಲ್ಲಿ ಮೀನುಗಾರರ ಸಮಸ್ಯೆಗಳ ಬಗ್ಗೆ ಮುಖಂಡರುಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಮತ್ಸ್ಯಕ್ಷಾಮ , ಇಂಧನ ಬೆಲೆಏರಿಕೆ, ಕೋವಿಡ್ ಸಂಕಷ್ಟ ಮತ್ತು ಲಾಕ್ಡೌನ್ ನಿರ್ಭಂಧಗಳಿಂದಾಗಿ ಸಮುದ್ರ ಮೀನುಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಮುದ್ರ ಮೀನುಗಾರಿಕೆ ನಡೆಸುವ ಎಲ್ಲಾ ವಿಧದ ಮೀನುಗಾರರ ಮತ್ತು ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುವವರ ಸಮಸ್ಯೆಯನ್ನು ಡಿ. ಕೆ ಶಿವಕುಮಾರ್ ರವರು ಮಲ್ಪೆ ಮೀನುಗಾರಿಕಾ ಬಂದರಿಗೆ ಜುಲೈ 6 ರಂದು ಮದ್ಯಾಹ್ನ 11.00ಕ್ಕೆ ಆಗಮಿಸಿ ಎಲ್ಲಾ ಮೀನುಗಾರರ ಮುಖಂಡರುಗಳು, ಸಂಘ-ಸಂಸ್ಥೆ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮೀನುಗಾರರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಶಿವಕುಮಾರ್‌ ಅವರು ಜುಲೈ 5ರಂದು ಮಧ್ಯಾಹ್ನ 3.30 ಕ್ಕೆ ಆಗಮಿಸುವುದಾಗಿ ನಿರ್ಧಾರವಾಗಿತ್ತು.


Spread the love