ಜೂನ್ ನಲ್ಲಿ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ಕೊಡಿಸುವ ಕಾನೂನಿನ ಅಂತಿಮ ಆದೇಶ

Spread the love

ಜೂನ್ ನಲ್ಲಿ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ಕೊಡಿಸುವ ಕಾನೂನಿನ ಅಂತಿಮ ಆದೇಶ

ಮಂಗಳೂರು: ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ಕೊಡಿಸುವ ಕಾನೂನು 2012 ರಲ್ಲಿ ಜಾರಿಯಾಗಿದ್ದು ಅದರ ವಿರುದ್ದವಾಗಿ ಮೂಲಿದಾರರು ಈವರೆಗೂ ಒಂದಿಲ್ಲೊಂದು ರೀತಿಯಲ್ಲಿ ತಡೆಯಾಜ್ಞೆ ತರಲು ಪ್ರಯತ್ನ ಪಟ್ಟಿದ್ದು, ಏಪ್ರಿಲ್ 21 ರಂದು ಅಂತಿಮವಾಗಿ ವಾದವಿವಾದಗಳನ್ನು ಆಲಿಸಿದ್ದು ಮುಂದಿನ ಜೂನ್ ತಿಂಗಳಲ್ಲಿ ಅಂತಿಮ ಆದೇಶ ನೀಡಲು ಕಾದಿರಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ಮ್ಯಾಕ್ಸಿಂ ಡಿಸಿಲ್ವಾ ತಿಳಿಸಿದ್ದಾರೆ.

2008ರಿಂದ ನಿರಂತರವಾಗಿ ವೇದಿಕೆಯು ಹೋರಾಡುತ್ತಾ ಸಂಘಟನೆಯನ್ನು ಬಲಪಡಿಸುತ್ತಿದ್ದು ಅಂತಿಮವಾಗಿ 2023 ಜೂನ್ ತಿಂಗಳಲ್ಲಿ ಆದೇಶ ಹೊರಬೀಳುವ ನಿರೀಕ್ಷೆ ಇದೆ ಈಗಾಗಲೇ ಸ್ಥಾಪಿತ ಹಿತಾಸಕ್ತಿದಾರರು ಪರಿಸ್ಥಿತಿಯ ದುರುಪಯೋಗಪಡಿಸಿಕೊಳ್ಳುವುದು ತಿಳಿದು ಬಂದಿದೆ.

ಮೂಲಗೇಣಿ ಒಕ್ಕಲುದಾರರು ಯಾರೂ ಅವಸರ ಪಡದೆ ಘನ ಉಚ್ಛ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಿಕೊಂಡಿದ್ದು ಮುಂದಿನ ನಡೆಯನ್ನು ಎಚ್ಚರಿಕೆಯಿಂ ನಡೆಯುವಂತೆ ವೇದಿಕೆಯು ಪ್ರಕಟಣೆಯಲ್ಲಿ ಎಚ್ಚರಿಸಿದೆ.


Spread the love