
ಜೂ.11: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ದಶಮಾನೋತ್ಸವ ಸಮಾರಂಭ
ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ದಶಮಾನೋತ್ಸವ ಸಮಾರಂಭ, 2022-23ನೇ ಸಾಲಿನ ವಾರ್ಷಿಕ ಮಹಾಸಭೆ, ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣೆ ಜೂನ್ 11 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಜರುಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ. ಮೊನ್ಸಿಂಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಫಿಲಿಪ್ ಡಿ’ಕೊಸ್ತಾ ಕೋಣಿ ಬಸ್ರೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ ಭಾಗವಹಿಸಲಿದ್ದು, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಪ್ರಥಮ ಅಧ್ಯಕ್ಷರಾದ ಎಲ್ ರೊಯ್ ಕಿರಣ್ ಕ್ರಾಸ್ತಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿಸೋಜಾ ಗೌರವ ಉಪಸ್ಥಿತಿ ಇರಲಿದ್ದಾರೆ.
ಕಾರ್ಯಕ್ರಮದಲ್ಲಿ ದಶಮಾನೋತ್ಸವ ಸ್ಮಾರಕ ಪುಸ್ತಕ ಅನಾವರಣ, 2023-24ನೇ ಸಾಲಿನ ಕಥೊಲಿಕ್ ಸಭಾ ಡೈರಕ್ಟರಿ ಬಿಡುಗಡೆ, ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ, 2013-14 ರಿಂದ 2023-24 ವರೆಗೆ ಸೇವೆ ನೀಡಿದ ಕೇಂದ್ರಿಯ ಸಮಿತಿ ಮುಖ್ಯಸ್ಥರುಗಳಿಗೆ ಸನ್ಮಾನ, ಜಿಲ್ಲಾ ಲಯನ್ ಗವರ್ನರ್ ಆಗಿ ಆಯ್ಕೆಯಾದ ಡಾ|ನೇರಿ ಕರ್ನೆಲಿಯೊ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಇದೇ ವೇಳೆ ಹಿರಿಯ ಸಾಹಿತಿ ನಿವೃತ್ತ ಪ್ರಾಂಶುಪಾಲರಾದ ಡಾ|ಜೆರಾಲ್ಡ್ ಪಿಂಟೊ ಅವರು ಬರೆದಿರುವ ಆಮ್ಚೆ ಮ್ಹಾಲ್ಗಡೆ ಸಾಹಿತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಥೊಲಿಕ್ ಸಭಾ ಉಡುಪಿ ಪ್ರದೇಶದಲ್ಲಿ ಅತಿ ಹೆಚ್ಚು ಡೊನೇಶನ್ ಕೂಪನ್ ವಿತರಣೆ ಮಾಡಿದವರಿಗೆ, ಆಮ್ಚೊ ಸಂದೇಶ್ ಪತ್ರಿಕೆಗೆ ಸಹಕಾರ ನೀಡಿದವರಿಗೆ ಕೂಡ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.