ಜೂ. 28: ರಾಜ್ಯಮಟ್ಟದ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗೆ ಚಾಲನೆ

Spread the love

ಜೂ. 28: ರಾಜ್ಯಮಟ್ಟದ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗೆ ಚಾಲನೆ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲ್ಲಿ 2022-23 ನೇ ಸಾಲಿನಲ್ಲಿ ರಾಜ್ಯದ 20000 ಹೆಕ್ಟೇರ್‌ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ಜೂನ್‌ 28 ರಂದು ಬೆಳಿಗ್ಗೆ 11 ಗಂಟೆಗೆ ಬ್ರಹ್ಮಾವರ ತಾಲೂಕಿನ ಬಾರ್ಕೂರಿನ ಶ್ರೀನಿವಾಸ ಉಡುಪರ ಕೃಷಿ ಪ್ರದೇಶದಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರಾದ ವಸಂತ್‌ ಸಾಲ್ಯಾನ್‌ ಹೇಳಿದರು.

ಅವರು ಶನಿವಾರ ಉಡುಪಿ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವಿರೇಂದ್ರ ಹೆಗ್ಗಡೆಯವರ ದೂರದರ್ಶಿತ್ತದ ಕಾರ್ಯಕ್ರಮವಾದ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ನಾಲ್ಕು ದಶಕಗಳಿಂದ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಸರ್ವತೋಮುಖ ಅಭಿವೃದ್ಧಿ ಮತ್ತು ನೆಮ್ಮದಿಯ ನಾಳೆಗಾಗಿ ಶ್ರಮವಹಿಸುತ್ತಿದ್ದು. ಅದರಂತೆ ವಿವಿಧ ಕೃಷಿ ವಿಸ್ತರಣೆ ಮತ್ತು ಕೃಷಿ ಭಿವೃದ್ಧಿ ಕಾರ್ಯಕ್ರಮಗಳನ್ನು ಕಾಲಾನುಸಾರ ನೀಡುತ್ತಾ ಬಂದಿದೆ. ಕ್ಷೀಣಿಸುತ್ತಿರುವ ಭತ್ತ ಬೇಸಾಯ ಪ್ರದೇಶವನ್ನು ಸನತನಗೊಳಿಸಲು ನಮ್ಮ ಯೋಜನೆಯ ವತಿಯಿಂದ ಶ್ರೀ ಪದ್ಧತಿ, ಯಾಂತ್ರೀಕರಣ. ರೈತ ಉತ್ಪಾದಕ ಸಂಸ್ಥೆ ಸ ಮುಂತಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. 2010-14ರ ಅವಧಿಯಲ್ಲಿ ನಬಾರ್ಡ್ ಸಹಕಾರದೊಂದಿಗೆ 5. ರೈತರಿಗೆ ಪ್ರೇರಣೆ ನೀಡಿ ಭತ್ತ ಬೇಸಾಯದಲ್ಲಿ ”ಶ್ರೀ ಪದ್ಧತಿ” ಹಾಗೂ 2014-20 ರ ಅವಧಿಯಲ್ಲಿ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ‘ಕೃಷಿ ಯಂತ್ರಧಾರ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ರೈತ ಸಮುದಾಯದ ಆದಾಯ ವೃದ್ಧಿಗೆ ಸಹಕಾರ ನೀಡಲಾಗಿದೆ.

ಈ ಎರಡೂ ಕಾರ್ಯಕ್ರಮಗಳನ್ನು ಜೋಡಿಸಿ ರೈತರಿಗೆ ಪ್ರೇರಣೆ ನೀಡಲು ಭತ್ತ ಬೇಸಾಯದ ಯಾಂತ್ರಿಕರಣ “ಯಂತ್ರಶ್ರೀ” ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಹೆಸರೇ ಸೂಚಿಸುವಂತೆ ಭತ್ತ ಬೇಸಾಯವನ್ನು ಸರಪಣ ಯಾಂತ್ರೀಕರಣಕ್ಕೊಳಪಡಿಸಿ ಉಳುಮೆಯಿಂದ ಒಕ್ಕಣೆಯವರೆಗೆ ಯಂತ್ರೋಪಕರಣಗಳನ್ನು ರೈತರಿಗೆ ಅವರ ಹೊಲದ ಬಾಗಿಲಿಗೆ ರಿಯಾಯಿತಿ ಬಾಡಿಗೆ ದರದಲ್ಲಿ ಒದಗಣೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಕಳೆದ 2 ವರ್ಷಗಳಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಅನುಷ್ಠಾನಿಸಲಾಗುತ್ತಿದ್ದು ‘ಯಂತ್ರಶ್ರೀ ಕರಾವಳಿಯ ರೈತರಿಗೆ ಬಹಳಷ್ಟು ಉಪಯೋಗವಾಗಿದೆ. ಹೀಗಾಗಿ ಇದನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸಲಾಗುತ್ತಿದೆ.
ಇದರನ್ವಯ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಒಟ್ಟು 20.000 ಹೆಕ್ಟೇರ್ ಪ್ರದೇಶದಲ್ಲಿ ಯಂತ್ರಶ್ರೀ” ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಗುರಿ ಹೊಂದಲಾಗಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮವನ್ನು ತಮ್ಮ ದಿವ್ಯ ಉಪಸ್ಥಿತಿಯಲ್ಲಿ ಪೂಜ್ಯ ಡಾ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಭತ್ತದ ಸಸಿಗಳನ್ನು ಯಂತ್ರದ ಸಹಾಯದಿಂದ ನಾಟಿ ಮಾಡುವ ಮೂಲಕ ನಡೆಸಲು ತೀರ್ಮಾನಿಸಲಾಗಿದೆ.

ಕರ್ನಾಟಕ ರಾಜ್ಯವು ದೇಶದ ಹೆಮ್ಮೆಯ ಭತ್ತದ ಕಣಜವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬರಗಾಲ, ಕೂಲಿಯಾಳುಗಳ ಕೊರತೆ, ಬೆಲೆ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಬಹುತೇಕ ರೈತರು ಭತ್ತ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ವಾಣಿಜ್ಯ ಬೆಳೆಗಳತ್ತ ರೈತರು ಹೆಚ್ಚು ಆಕರ್ಷಿತರಾಗುತ್ತಿರುವುದು ಮತ್ತೊಂದು ಕಾರಣವಾಗಿರುತ್ತದೆ. ಈ ಹಂತದಲ್ಲಿ ಕಡಿಮೆ ನೀರನ್ನು ಉಪಯೋಗಿಸಿ ಮಾಡುವ ಶ್ರೀಪದ್ಧತಿ ಬೇಸಾಯವನ್ನು ಯಾಂತ್ರೀಕೃತ ಪದ್ಧತಿಯಲ್ಲಿ ಮಾಡಿದ ಉತ್ಪಾದನಾ ವೆಚ್ಚವನ್ನು ತಗ್ಗಿಸಿ. ಭತ್ತ ಬೇಸಾಯವನ್ನು ಲಾಭದಾಯಕವಾಗಿ ಮಾಡಬಹುದಾಗಿದೆ.

ಯಾಂತ್ರೀಕೃತ ಭತ್ತ ಬೇಸಾಯ ಯಂತ್ರಶ್ರೀ” ಯೋಜನೆ ವಿದ್ಯುಕ್ತ ಚಾಲನೆ :
ಜೂನ್‌ 28ರಂದು ಪೂರ್ವಾಹ್ನ 11.00 ಗಂಟೆಗೆ ಬ್ರಹ್ಮಾವರ ತಾಲೂಕಿನ ಬಾರದ ಶ್ರೀ ಶ್ರೀನಿವಾಸ ಉಡುಪರ ಕೃಷಿ ಪ್ರದೇಶದಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು. ಈ ಸಮಾರಂಭ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ, ಕೇಂದ್ರ ರಾಜ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾಗಿರುವ ಕು ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶ್ರೀ ಕೊಟ ಶ್ರೀನಿವಾಸ್ ಪೂಜಾರಿಯವರು. ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ರಘುಪತಿ ಭಟ್‌, ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ ಹಾಗೂ ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ಭತ್ತದ ಸಸಿಗಳನ್ನು ಯಂತ್ರದ ಸಹಾಯದಿಂದ ನಾಟಿ ಮಾಡುವ ಮೂಲಕ ಜರುಗಲಿರುವುದು.

ರೈತರಿಗೆ ಭತ್ತ ಯಾಂತ್ರೀಕರಣದ ಕೌಶಲ್ಯವನ್ನು ತೋರಿಸಿಕೊಡಲು ಉಳುಮೆಯಿಂದ ಮೊದಲ್ಗೊಂಡು ಒಕ್ಕಣೆಯವರೆಗೆ ಬಳಕೆ ಮಾಡುವ ಮಾನವ ಚಾಲಿತ ಮತ್ತು ಸ್ವಯಂ ಚಾಲಿತ ಯಂತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ನುರಿತ ತಜ್ಞರು, ಯಂತ್ರೋಪಕರಣಗಳ ಬಳಕೆಯ ಮಾಹಿತ ಮಾರ್ಗದರ್ಶನ ನೀಡಲಿರುವರು. ಹಸಿರೆಲೆ ಗೊಬ್ಬರ ಗಿಡ ತಯಾರಿ, ನರ್ಸರಿ ತಯಾರಿ ಮತ್ತು ಭತ್ತ ನಾಟಿ ಯಂತ್ರದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಯಂತ್ರಶ್ರೀ ಯೋಜನೆಯಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದು ಹೇಳಿದರು.


Spread the love