ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಪ್ರೀತಂ ಗೌಡ

Spread the love

ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಪ್ರೀತಂ ಗೌಡ
 

ಹಾಸನ: ‘ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೇ ಹಾಕಿದಂತೆ. ದೇವೇಗೌಡರು, ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ.ಏಕಂದ್ರೆ ಅವರಿಗೆ ಬರೋದು 20- 25 ಸೀಟು ಮಾತ್ರ’ ಎಂದು ಶಾಸಕ ಪ್ರೀತಂ ಗೌಡ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಗರ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಪ್ರಚಾರದ ಸಂದರ್ಭದಲ್ಲಿ ಪ್ರೀತಂ ಗೌಡ ಮಾತನಾಡಿದ್ದು, ‘ಮೈಸೂರಿನ ಮೇಲೆ ಬೆಂಗಳೂರಿಗೆ ಹೋಗೋದು ಬೇಡ. ಹಾಸನದಿಂದ ಬೆಳ್ಳೂರು ಕ್ರಾಸ್‌ ಮೇಲೆ ಹೋಗಿ ಎಂದು ಹೇಳುತ್ತೇನೆ. ಅದರ ಮೇಲೆ ನಿಮ್ಮಿಷ್ಟ’ ಎಂದಿದ್ದಾರೆ.

‘ಮೈಸೂರಿನ ಮೇಲೆಯೇ ಬೆಂಗಳೂರಿಗೆ ಹೋಗೋದಕ್ಕೆ ಖುಷಿಯಾಗುತ್ತದೆ ಅನ್ನೋದಾದರೆ, ಏನೂ ಮಾಡಲು ಆಗದು. ಎಲ್ಲ ನದಿ ನೀರು ಸಮುದ್ರಕ್ಕೆ ಹರಿಯುವಂತೆ, ಎಲ್ಲರೂ ನಮ್ಮ ಹತ್ತಿರಕ್ಕೇ ಬರಬೇಕು. ಅವರಿಗೆ ವೋಟು ಹಾಕಿದರೂ, ಬರೋದು ನಮ್ಮ ಹತ್ತಿರವೇ’ ಎಂದಿದ್ದಾರೆ.


Spread the love