ಜೆನೆಟ್ ಬಾರ್ಬೋಜಾ ಮುದರಂಗಡಿ ಅವರಿಗೆ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿ

Spread the love

ಜೆನೆಟ್ ಬಾರ್ಬೋಜಾ ಮುದರಂಗಡಿ ಅವರಿಗೆ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿ

ಉಡುಪಿ: ಮಹಿಳಾ ಸಂಘಟನೆಗಾಗಿ ಉಡುಪಿ ಜಿಲ್ಲೆಯ ಜೆನೆಟ್ ಬಾರ್ಬೋಜಾ ಮುದರಂಗಡಿ ಇವರಿಗೆ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಷ್ಟ್ರೀಯ ಸ್ತ್ರೀ ಆಯೋಗ, ಅಖಿಲ ಭಾರತೀಯ ಕೆಥೊಲಿಕ್ ಬಿಷಪ್ ಮಂಡಳಿಯು ನಡೆಸಿದ 4ನೇ ರಾಷ್ಟ್ರ ಮಟ್ಟದ ಮಹಿಳಾ ಸಮ್ಮೇಳನ ಲಕ್ನೋದ ನವಿಂತಾ ಧರ್ಮ ಕೇಂದ್ರದಲ್ಲಿ ನಡೆದಿದ್ದು ಭಾರತೀಯ ಬಿಷಪ್ ಮಂಡಳಿಯ ಅಧ್ಯಕ್ಷರಾದ ಪಾಂಡಿಚೇರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ರೆ. ಫ್ರಾನ್ಸಿಸ್ ಕಾಲಿಸ್ತ್ ಹಾಗೂ ರಾಷ್ಟ್ರೀಯ ಸ್ತ್ರೀ ಆಯೋಗ ದ ಕಾರ್ಯದರ್ಶಿ ಭಗಿನಿ ಲಿಡ್ವಿನ್ ಫೆರ್ನಾಂಡಿಸ್ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಮಹಿಳಾ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ತಾಲೂಕು ಒಕ್ಕೂಟ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ರಚನೆ, ಸ್ತ್ರೀಯರ ಸಬಲೀಕರಣ,ರಾಜಕೀಯ ಹಾಗೂ ವಿವಿಧ ಸ್ತರಗಳಲ್ಲಿ ನೀಡಿದ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ

ಈ ಸಂದರ್ಭದಲ್ಲಿ ಸಂಪದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ನಿರ್ದೇಶಕರಾದ ವಂದನೀಯ ರೆಜಿನಾಲ್ಡ್ ಪಿಂಟೊ ಹಾಗೂ ಸಂಘಟನೆಯ ಮಾಜಿ ಅಧ್ಯಕ್ಷೆ ಜೂಡಿತ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.


Spread the love