ಜೆಪ್ಪಿನ ಮೊಗರು ನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ 

Spread the love

ಜೆಪ್ಪಿನ ಮೊಗರು ನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ 

ಮಂಗಳೂರು: ಜೆಪ್ಪಿನ ಮೊಗರು ವಾರ್ಡ್ ವ್ಯಾಪ್ತಿಯಲ್ಲಿರುವ ಜೆಪ್ಪಿನ ಮೊಗರು ಯುವಕ ವೃಂದ ಕಟ್ಟಡದಲ್ಲಿ ಮತ್ತು ಕಡೆಕಾರ್ ಪ್ರದೇಶದಲ್ಲಿ ವಾಸವಾಗಿರುವ ಕೋವಿಡ್ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದ ಜನರಿಗೆ ಇಂದು ತಾ 10.6.2021ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್. ಲೋಬೊರವರು ದಿನಸಿ ಸಾಮಾನುಗಳ ಕಿಟ್ ಗಳನ್ನು ವಿತರಿಸುವಂತ ಕಾರ್ಯ ನೆರವೇರಿಸಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ಜೆಪ್ಪಿನ ಮೊಗರು ಪ್ರದೇಶದಲ್ಲಿ ಬಡ ಹಾಗೂ ಮಾಧ್ಯಮ ವರ್ಗದ ಜನರು ಬಹಳಸ್ಟಿದ್ದಾರೆ. ದಿನ ಕೂಲಿಯಿಂದ ಜೀವನ ಸಾಗಿಸುವವರು ಸಂಖ್ಯೆ ಅಧಿಕವಾಗಿರುತ್ತದೆ. ಈ ಒಂದು ಕೋವಿಡ್ ಲಾಕ್ ಡೌನ್ ನಿಂದಾಗಿ ಜನರಿಗೆ ಕೆಲಸವೂ ಇಲ್ಲ, ಸಂಬಳವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತು ಕಾಂಗ್ರೆಸ್ ಪಕ್ಷ ಇಂದು ಈ ಭಾಗದ ಜನರಿಗೆ ಜೀವನ ಸಾಗಿಸಲು ಸ್ವಲ್ಪ ಸಹಾಯವನ್ನು ಮಾಡುವ ದೃಷ್ಟಿಯಲ್ಲಿ ದಿನ ಸಾಮಗ್ರಿಗಳ ಕಿಟ್ ಗಳನ್ನು ಒದಗಿಸಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ, ವಾರ್ಡ್ ಅಧ್ಯಕ್ಷ ಜೆ. ಸುಧಾಕರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಪೂಜಾರಿ, ಪಕ್ಷದ ಮುಖಂಡರಾದ ಹೊನ್ನಯ್ಯ,ಹರ್ಬಟ್ ಡಿಸೋಜಾ, ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾ ಪ್ರಸಾದ್, ಭಾಸ್ಕರ್ ರಾವ್,ಶ್ರೀಧರ್ ರಾಜ್ ಶೆಟ್ಟಿ, ಸುಧೀರ್ ಕಡೆಕಾರ್,ಸ್ಟೀವನ್, ತಾರಾನಾಥ್ ಭಂಡಾರಿ,ಸುಭಾಷ್ ಅಡಪ್ಪ, ಬಾಲಕೃಷ್ಣ ಶೆಟ್ಟಿ, ಕೃಷ್ಣ ಶೆಟ್ಟಿ, ಅಶೋಕ್ ಕುಡುಪಾಡಿ,ಆಸೀಫ್ ಜೆಪ್ಪು, ಕೃತಿನ್ ಕುಮಾರ್,ಶಾನ್ ಡಿಸೋಜಾ, ಜೀವನ್ ಮೋರೆ,ಲಕ್ಷ್ಮಣ್ ಶೆಟ್ಟಿ, ಯಶವಂತ ಪ್ರಭು, ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here