Home Mangalorean News Kannada News ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿ ನೊವೆನಾಕ್ಕೆ ಚಾಲನೆ

ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿ ನೊವೆನಾಕ್ಕೆ ಚಾಲನೆ

Spread the love

ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿ ನೊವೆನಾಕ್ಕೆ ಚಾಲನೆ

ಮಂಗಳೂರು: ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ಸಂತ ಆಂತೋನಿ ಅವರ ವಾರ್ಷಿಕ ಹಬ್ಬಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಧರ್ಮಗುರು ಮೊನ್ಸಿಂಜೋರ್ ಮ್ಯಾಕ್ಸಿಂ ನೊರೊನ್ಹಾರವರು ಸಂತ ಆಂತೋನಿಯವರ ಧ್ವಜಾರೋಹಣ ಮಾಡುವ ಮೂಲಕ ತಯಾರಿಯಾಗಿ ಹದಿಮೂರು ದಿನಗಳ ನೊವೇನಾ ಪ್ರಾರ್ಥನೆಗೆ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಅವರು , ಧರ್ಮಸಭೆ ಇಂದು ಪ್ರೇಷಿತರ ಮೇಲೆ ಪವಿತ್ರಾತ್ಮರು ಇಳಿದು ಬಂದ ಹಬ್ಬವನ್ನು ಆಚರಣೆ ಮಾಡುತ್ತದೆ. ಪವಿತ್ರಾತ್ಮರ ಆಗಮನದೊಂದಿಗೆ ಪ್ರೇಷಿತರು ಧರ್ಯದಿಂದ ತುಂಬಿದರು ಮತ್ತು ಸುವಾರ್ತೆ ಸಾರಲು ಮುಂದಾದರು ಎಂದು ಪ್ರವಚನ ನೀಡುತ್ತಾ ಮಾತನಾಡಿದರು.

ಈ ಸಂದರ್ಭ ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿಸೋಜ, ಸಂಸ್ಥೆಯ ಸಹಾಯಕ ನಿರ್ದೇಶಕರಾದ ಫಾ. ರೋಶನ್ ಡಿಸೋಜ ಹಾಗೂ ಫಾ.ತೃಶಾನ್ ಡಿಸೋಜ ಉಪಸ್ಥಿತರಿದ್ದರು. ಜೂ.13ರ ವರೆಗೆ ಪ್ರತಿ ದಿನ ಬೆಳಗ್ಗೆ 7ಕ್ಕೆ ಕೊಂಕಣಿ ಹಾಗೂ ಸಂಜೆ 7ಕ್ಕೆ ಇಂಗ್ಲೀಷ್ನಲ್ಲಿ ಬಲಿಪೂಜೆ, ನೊವೆನಾ ನಡೆಯುತ್ತದೆ.


Spread the love

Exit mobile version