ಜೆಪ್ಪು ಪಟ್ನ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಬಿರುಸಿನ ಪ್ರಚಾರ 

Spread the love

ಜೆಪ್ಪು ಪಟ್ನ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಬಿರುಸಿನ ಪ್ರಚಾರ 

ನಗರದ ಅತ್ತಾವರ ವಾರ್ಡಿನ ವ್ಯಾಪ್ತಿಯ ಜೆಪ್ಪು ಪಟ್ನ ಪ್ರದೇಶದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಇಂದು ತಾ 29.4.2023ರಂದು ಮನೆ ಮನೆಗೆ ಭೇಟಿ ಜನರಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಜ್ಯದಲ್ಲಿ ಮರಳಿ ಅಧಿಕಾರವನ್ನು ತರಬೇಕೆಂದು ವಿನಂತಿಸಿದರು.

ಬಿಜೆಪಿ ಆಡಳಿತದಲ್ಲಿ ಜನ ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಉತ್ತಮ ಆಡಳಿತ ನೀಡಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಶಾಲೆಟ್ ಪಿಂಟೋ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ,ಶೀಬಾ ರಾಮಚಂದ್ರನ್, ಮಾಜಿ ಕಾರ್ಪೊರೇಟರ್ ಶೈಲಜಾ, ವಿಜಯಲಕ್ಷ್ಮೀ, ಭಾಸ್ಕರ್ ರಾವ್, ಪ್ರಮುಖರಾದ ಟಿ. ಕೆ. ಸುಧೀರ್, ನವಾಜ್ ಜೆಪ್ಪು, ಕೀರ್ತಿ ರಾಜ್ ಬಾಬುಗುಡ್ಡೆ, ಗೀತಾ ಸುವರ್ಣ,ವಿದ್ಯಾ, ಓಸ್ವಲ್ಡ್ ಫುರ್ತಾದೋ,ಹಾರ್ಬಟ್ ಡಿಸೋಜಾ,ಪ್ರವೀತ್ ಕರ್ಕೇರ,ದೋಲ್ಪಿ ಪಟ್ನ, ಬಾಬು ಸಾಲ್ಯಾನ್, ಪ್ರಶಾಂತ್, ಶಮೀರ್,ಮೊದಲಾದವರು ಉಪಸ್ಥಿತರಿದ್ದರು.


Spread the love