ಜ.1 ರಿಂದ ಫಾಸ್ಟ್ಯಾಗ್ ಕಡ್ಡಾಯ : ಇನ್ನೊಂದು ಹೋರಾಟಕ್ಕೆ ಸಿದ್ಧವಾಗುತ್ತಿದೆ ಹೆದ್ದಾರಿ ಜಾಗೃತಿ ಸಮಿತಿ!

Spread the love

ಜ.1 ರಿಂದ ಫಾಸ್ಟ್ಯಾಗ್ ಕಡ್ಡಾಯ : ಇನ್ನೊಂದು ಹೋರಾಟಕ್ಕೆ ಸಿದ್ಧವಾಗುತ್ತಿದೆ ಹೆದ್ದಾರಿ ಜಾಗೃತಿ ಸಮಿತಿ!

ಉಡುಪಿ: 2021 ಜನವರಿ 1ರಿಂದ ಎಲ್ಲಾ ಟೋಲ್ ಬೂತ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶದ ಹಿನ್ನಲೆಯಲ್ಲಿ ಸ್ಥಳೀಯರಿಗೆ ವಿನಾಯತಿ ನೀಡುವ ವಿಚಾರದಲ್ಲಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಸಾಸ್ತಾನದ ಟೋಲ್ ಬೂತ್ ನಲ್ಲಿ ಟೋಲ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಇದುವರೆಗೂ ಸ್ಥಳೀಯರಿಗೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಟೋಲ್ ವಿನಾಯತಿ ಇದ್ದು ಮುಂದೆ ಇದನ್ನು ಯಾವ ರೀತಿಯಲ್ಲಿ ಮುಂದುವರಿಸುತ್ತೀರಿ, ಸ್ಥಳೀಯರು ಯಾವ ಲೇನ್ ನಲ್ಲಿ ಸಂಚರಿಸಬೇಕು ಎಂದು ಜಾಗೃತಿ ಸಮಿತಿ ಸದಸ್ಯರು ವಿಚಾರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಅಧಿಕಾರಿಗಳು 2021 ಜನವರಿ 1 ರಿಂದ ಫಾಸ್ಟ್ ಟ್ಯಾಗ್ ನ ಕಡ್ಡಾಯದ ಆದೇಶ ನಮಗೆ ಬಂದಿರುತ್ತದೆ. ಸ್ಥಳೀಯರಿಗೆ ಯಾವುದೇ ರಿಯಾಯಿತಿಯಾಗಲಿ, ವಿನಾಯತಿಯಾಗಲಿ ನೀಡುವಂತಿಲ್ಲಾ ಹಾಗೂ ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಶುಲ್ಕ ನೀಡಬೇಕಾಗುತ್ತದೆ ಎಂದು ತಿಳಿಸಿದರು

ಇದಕ್ಕೆ ಪ್ರತಿಕ್ರಿಯಿಸಿದ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಸ್ಥಳೀಯರಿಗೆ ಶುಲ್ಕ ವಿನಾಯತಿ ನೀಡುವ ಘೋಷಣೆ ಜಿಲ್ಲೆಯ ಸಂಸದರು ಮತ್ತು ಎಲ್ಲ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಸಮ್ಮುಖದಲ್ಲಿ ಘೋಷಣೆಯಾಗಿದ್ದು ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲಾಗಿದೆ ಮುಂದೆಯೂ ಕೂಡ ಯಾವುದೇ ರೀತಿಯಲ್ಲಿ ಸ್ಥಳೀಯರಿಗೆ ಟೋಲ್ ವಿಧಿಸಲು ಯತ್ನಿಸಿದರೇ ಮತ್ತೊಮ್ಮೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಟೋಲ್ ಅಧಿಕಾರಿಗಳು ಡಿಸೆಂಬರ್ 28 ರ ಸೋಮವಾರ ಸಂಜೆ 6 ಗಂಟೆಯೊಳಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಯಾವುದಾದರೂ ಒಂದು ನಿರ್ಧಾರ ತಿಳಿಸುವುದಾಗಿ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದು, ಮೇಲಾಧಿಕಾರಿಗಳ ನಿರ್ಧಾರದ ಬಳಿ ಜಾಗೃತಿ ಸಮಿತಿಯ ಸದಸ್ಯರು ಚಿಂತನೆ ನಡೆಸುವುದಾಗಿ ತಿಳಿಸಿದರು.


Spread the love