ಜ.10: ರಾಮಕೃಷ್ಣ ಮಠದಲ್ಲಿ   ಸ್ವಚ್ಛ ಮಂಗಳೂರು: ಮುಂದೇನು?  ಸಮಾಲೋಚನಾ ಸಭೆ

Spread the love

ಜ.10: ರಾಮಕೃಷ್ಣ ಮಠದಲ್ಲಿ   ಸ್ವಚ್ಛ ಮಂಗಳೂರು: ಮುಂದೇನು?  ಸಮಾಲೋಚನಾ ಸಭೆ

ಮಂಗಳೂರು: ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಕಳೆದ ಆರು ವರ್ಷಗಳಿಂದ ಶ್ರಮದಾನ ಹಾಗೂ ಜಾಗೃತಿ ಕಾರ್ಯ ಕೈಗೊಂಡು ಜನಮಾನಸದಲ್ಲಿ ಶುಚಿತ್ವದ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಈ ಸ್ವಚ್ಚತಾ ಅಭಿಯಾನವನ್ನು ಆರಂಭಿಸುವಾಗ ಐದು ವರ್ಷದ ಯೋಜನೆಯಾಗಿದ್ದರಿಂದ ಅದನ್ನು 2019 ಅಕ್ಟೋಬರ್ ನಲ್ಲಿ ಸಮಾರೋಪಗೊಳಿಸಲಾಗಿತ್ತು. ಆದರೆ ಅನೇಕ ಸ್ವಯಂಸೇವಕರು ಸಮಾಜಸೇವಕರು ಹಿರಿಯರು ಗಣ್ಯರು ಹೀಗೆ ಸಮಾಜದ ಅನೇಕರು ಅಭಿಯಾನ ಮತ್ತಷ್ಟು ವರ್ಷಗಳ ಕಾಲ ಮುಂದುವರೆಯಬೇಕು ಎಂದು ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದರು. ಆ ಹಿನ್ನಲೆಯಲ್ಲಿ ಈ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಕೈಜೋಡಿಸಿದ ಸುಮಾರು ನೂರೈವತ್ತಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳ ಹಾಗೂ ಸ್ವಚ್ಛತೆ ಸೇರಿದಂತೆ ನಗರದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿವುಳ್ಳ ನಾಗರಿಕರ ಸಭೆಯನ್ನು ಆಯೋಜಿಸಲಾಗಿದೆ

ಸ್ವಚ್ಛ ಮಂಗಳೂರು ಅಭಿಯಾನದ ಮುಂದುವರೆಯಬೇಕೆ ಬೇಡವೆ? ಅಭಿಯಾನ ಮುಂದುವರೆಸುವುದಾದರೆ ಅದರ ಮುಂದಿನ ಕಾರ್ಯಯೋಜನೆಯ ರೂಪುರೇಶೆಗಳು, ಅಭಿಯಾನದ ಸ್ವರೂಪ, ಸಾರ್ವಜನಿಕರ ಪಾತ್ರ ಇತ್ಯಾದಿಗಳನ್ನು ಚರ್ಚಿಸಲು ದಿನಾಂಕ ಭಾನುವಾರ 10-1-2021 ರಂದು ಸಾಯಂಕಾಲ 4 ಗಂಟೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ “ಸ್ವಚ್ಛ ಮಂಗಳೂರು ಮುಂದೇನು? ಎಂಬ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ಸ್ವಾಮಿ ಜಿತಕಾಮಾನಂದಜಿ ಅಧ್ಯಕ್ಷರು ರಾಮಕೃಷ್ಣ ಮಠ ಮಂಗಳೂರು, ಸ್ವಾಮಿ ಮಹಾಮೇಧಾನಂದಜಿ ಸಂಪಾದಕರು ವೇದಾಂತ ಕೇಸರಿ ಮಾಸಪತ್ರಿಕೆ ಇವರುಗಳು ಸಾನಿಧ್ಯ ವಹಿಸಲಿದ್ದಾರೆ ಡಾ. ಎನ್ ವಿನಯ ಹೆಗ್ಡೆ ಕುಲಾಧಿಪತಿಗಳು ನಿಟ್ಟೆ ವಿಶ್ವವಿದ್ಯಾನಿಲಯ ಇವರು ಮುಖ್ಯ ಅಭ್ಯಾಗತರಾಗಿ ಭಾಗಿಯಾಗಲಿದ್ದಾರೆ. ಶ್ರೀ ಮಂಜುನಾಥ್ ಭಂಡಾರಿ ಅಧ್ಯಕ್ಷರು ಭಂಡಾರಿ ಫೌಂಡೇಶನ್ ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾಜಿ ವಿಧಾನಪರಿಷತ್ ಸದಸ್ಯರು ಇವರುಗಳು ವಿಶೇಷ ಅತಿಥಿಗಳಾಗಿ ಸಭೆಯಲ್ಲಿ ಉಪಸ್ಥಿತರಿರುವರು. ಜೊತೆಗೆ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಭಾಗಿಯಾದ ನೂರೈವತ್ತಕ್ಕೂ ಮಿಕ್ಕಿ ಸಂಘಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಪ್ರಮುಖ ಕಾರ್ಯಕರ್ತರು, ನಗರದ ಗಣ್ಯಮಾನ್ಯರು, ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಲಲಿದ್ದಾರೆ.


Spread the love