ಜ. 15ರಂದು ಬೆಳಪುವಿನಲ್ಲಿ ಸೌತ್ ಇಂಡಿಯನ್ ಓಪನ್ ಕಬ್ಬಡಿ ಪಂದ್ಯಾಟ

Spread the love

ಜ. 15ರಂದು ಬೆಳಪುವಿನಲ್ಲಿ ಸೌತ್ ಇಂಡಿಯನ್ ಓಪನ್ ಕಬ್ಬಡಿ ಪಂದ್ಯಾಟ

ಉಡುಪಿ: ಪಿಎಂ ಕಿಂಗ್ ಅಟಾಕರ್ಸ್ ಇವರ ವತಿಯಿಂದ ಸೌತ್ ಇಂಡಿಯನ್ ಓಪನ್ ಕಬ್ಬಡಿ ಪಂದ್ಯಾಟ ಅಂಡರ್ 65 ಕೆಜಿ ಇದರ ಸಹಯೋಗದೊಂದಿಗೆ ಬೆಳಪು ಮೈದಾನದಲ್ಲಿ ಜನವರಿ 15 ರಂದು ಬೆಳಿಗ್ಗೆ 9.30 ಕ್ಕೆ ಪಿಎಂ ಟ್ರೋಪಿ ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ.

ಈ ಪಂದ್ಯಾಟದಲ್ಲಿ ಭಾಗವಹಿಸಲು ನೋಂದಣಿ ಶುಲ್ಕ ರೂ 1500 ನಿಗದಿ ಪಡಿಸಲಾಗಿದ್ದು, ಜನವರಿ 5 ನೋಂದಣಿಗೆ ಕೊನೆಯ ದಿನವಾಗಿದೆ. ಆಸಕ್ತ ತಂಡಗಳು 7353023585 ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮಾಡಿ ನೊಂದಣಿ ಶುಲ್ಕ ಪಾವತಿಸಬಹುದು.

ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ರೂ 25515, ದ್ವಿತೀಯ ರೂ 13. 515 ಹಾಗೂ ತೃತೀಯ ರೂ 4515 ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ಬೈಸ್ಟ್ ರೈಡರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಡಿಫೆಂಡರ್ ಮತ್ತು ಮ್ಯಾನ್ ಆಫ್ ದ ಮ್ಯಾಚ್ ಬಹುಮಾನ ಕೂಡ ನೀಡಲಾಗುತ್ತದೆ.

ಪಂದ್ಯಾಟದಲ್ಲಿ ಆಯೋಜಕರ ತೀರ್ಮಾನವೇ ಅಂತಿಮವಾಗಿದ್ದು ಪಂದ್ಯಾಟದ ವೇಳೆ ಯಾವುದೇ ತಂಡ ಅನುಚಿತ ವರ್ತನೆ ತೋರಿದಲ್ಲಿ ಅಂತಹ ತಂಡವನ್ನು ಅನರ್ಹಗೊಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9606439131, 7353023585, 9632206483, 9019551502 ಸಂಖ್ಯೆಗೆ ಸಂಪರ್ಕಿಸಲು ಆಯೋಜಕರು ಕೋರಿದ್ದಾರೆ.


Spread the love

Leave a Reply

Please enter your comment!
Please enter your name here