ಜ14-16 : ಬಿಕರ್ನಕಟ್ಟೆ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಹಾಗೂ ಪುಣ್ಯಕ್ಷೇತ್ರದ ರಜತ ಮಹೋತ್ಸವ

Spread the love

ಜ14-16 : ಬಿಕರ್ನಕಟ್ಟೆ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಹಾಗೂ ಪುಣ್ಯಕ್ಷೇತ್ರದ ರಜತ ಮಹೋತ್ಸವ

ಮಂಗಳೂರು: ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನುಜನವರಿ 14, 15 ಹಾಗೂ 16ರಂದು ವಿಜೃಂಭಣೆಯಿಂದ ಕೊಂಡಾಡಲಾಗುವುದು ಎಂದು ಪುಣ್ಯಕ್ಷೇತ್ರದ ನಿರ್ದೇಶಕರಾದ ವಂದನೀಯ ಸ್ವಾಮಿ ರೋವೆಲ್ ಡಿ ಸೋಜಾ ಹೇಳಿದರು . ಅವರು ಶನಿವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳು
ಜನವರಿ 14ರಂದು ಬೆಳಿಗ್ಗೆ 10.30 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ಅತೀ ವಂದನೀಯ ರೊನಾಲ್ಡ್ ಸೆರಾವೊ, ರೆಕ್ಟರ್, ಜೆಪ್ಪು ಸೆಮಿನರಿ, ಇವರು ಹಾಗೂ ಸಂಜೆ 6 ಘಂಟೆಗೆ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊ, ಧರ್ಮಾಧ್ಯಕ್ಷರು, ಶಿವಮೊಗ್ಗ ಧರ್ಮಪ್ರಾಂತ್ಯ,ಇವರ ಅಧ್ಯಕ್ಷತೆಯಲ್ಲಿ ಅರ್ಪಿಸಲಾಗುವುದು. ಜನವರಿ 15ರಂದು ಬೆಳಿಗ್ಗೆ 10.30 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನುಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ, ಧರ್ಮಾಧ್ಯಕ್ಷರು, ಮಂಗಳೂರುಧರ್ಮಾಪ್ರಾಂತ್ಯ, ಇವರು ಹಾಗೂ ಸಂಜೆ 6 ಘಂಟೆಗೆಅತೀ ವಂದನೀಯ ಮ್ಯಾಕ್ಸಿಮ್ ನೊರೊನ್ಹಾ, ವಿಕಾರ್ಜೆರಾಲ್, ಮಂಗಳೂರು ಧರ್ಮಪ್ರಾಂತ್ಯ, ಇವರಅಧ್ಯಕ್ಷತೆಯಲ್ಲಿಅರ್ಪಿಸಲಾಗುವುದು. ಜನವರಿ 16ರಂದು ಬೆಳಿಗ್ಗೆ 10.30 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ವಂದನೀಯಪಾವ್ಲ್ ಮೆಲ್ವಿನ್ಡಿ ಸೋಜಾ, ಇವರು ಹಾಗೂ ಸಂಜೆ 6.00ಘಂಟೆಗೆಅತೀ ವಂದನೀಯಅಲೋಶಿಯಸ್ ಪಾವ್ಲ್ ಡಿ ಸೋಜಾ, ನಿವೃತ್ತಧರ್ಮಾಧ್ಯಕ್ಶರು, ಮಂಗಳೂರು ಧರ್ಮಪ್ರಾಂತ್ಯಇವರಅಧ್ಯಕ್ಷತೆಯಲ್ಲಿಅರ್ಪಿಸಲಾಗುವುದು.

ಜನವರಿ 14ರಂದುಜರಗುವ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ:
ಬೆಳಿಗ್ಗೆ 6.00(ಕೊಂಕಣಿ), 7.30(ಇಂಗ್ಲೀಶ್), 9.00(ಕೊಂಕಣಿ), 1.00(ಕನ್ನಡ).ಅದೇ ದಿನ 10.30ಘಂಟೆಗೆ ವ್ಯಾಧಿಷ್ಟರಿಗಾಗಿ ವಿಶೇಷ ಬಲಿಪೂಜೆಕೊಂಕಣಿಯಲ್ಲಿಅರ್ಪಿಸಲಾಗುವುದು.ವಾರ್ಷಿಕ ಹಬ್ಬದಎರಡನೆಯ ದಿನ – ಜನವರಿ 15:ಬೆಳಿಗ್ಗೆ 6.30, 7.30, 9.00ಘಂಟೆಗೆಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00ಘಂಟೆಗೆಮಲಯಾಳಂ ಪೂಜೆಅರ್ಪಿಸಲಾಗುವುದು.ವಾರ್ಷಿಕ ಹಬ್ಬದ ಮೂರನೇ ದಿನ – ಜನವರಿ 16: ಬೆಳಿಗ್ಗೆ 6.00(ಕೊಂಕಣಿ), 7.30(ಇಂಗ್ಲಿಶ್), 9.00(ಕೊಂಕಣಿ), 10.30(ಕೊಂಕಣಿ) ಹಾಗೂ 1.00(ಕೊಂಕಣಿ) ಬಲಿಪೂಜೆಗಳು ನೆರವೇರುವುವು. ಸಂಜೆ 6.00ಘಂಟೆಗೆ ಹಬ್ಬದ ಸಮಾರೋಪ ಬಲಿಪೂಜೆಅರ್ಪಿಸಲಾಗುವುದು.

ನವದಿನಗಳ ನೊವೇನಾ ಪ್ರಾರ್ಥನೆ
ಈ ಮೂರು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನೊವೇನಾ ಪ್ರಾರ್ಥನೆಜನವರಿ 5 ರಿಂದಜನವರಿ 13 ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಬಲಿಪೂಜೆಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆಕೊಂಕಣಿ ಭಾಷೆಯಲ್ಲಿ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆಇಂಗ್ಲೀóಷ್ ಹಾಗೂ 7.30ಘಂಟೆಗೆಕನ್ನಡದಲ್ಲಿ ಬಲಿಪೂಜೆಯು ಪುಣ್ಯಕ್ಷೇತ್ರದೊಳಗೆ ನಡೆಯುವುದು. ಈ ನವದಿನಗಳ ಪ್ರಮುಖ ಬಲಿಪೂಜೆಯು ಸಂಜೆಯ 6.00 ಘಂಟೆಗೆತೆರೆದ ಮೈದಾನದಲ್ಲಿಅರ್ಪಿಸಲಾಗುವುದು.

ಮಹೋತ್ಸವಕ್ಕೆ ಚಾಲನೆ
ಈ ವಾರ್ಷಿಕ ಮಹೋತ್ಸವಕ್ಕೆಜನವರಿ 4 ರಂದು ವಿಧ್ಯುಕ್ತ ಚಾಲನೆಯನ್ನು ನೀಡಲಾಗುವುದು. ಅಂದು ಸಂಜೆ 5.30 ಘಂಟೆಗೆಧ್ವಜರೋಹಣಕಾರ್ಯಕ್ರಮ, ಆನಂತರ ಬಲಿಪೂಜೆಅರ್ಪಿಸಲಾಗುವುದು.

ಕೋವಿಡ್ ಮುಂಜಾಗ್ರತಾಕ್ರಮಗಳು
ಕೋವಿಡ್ 19 ಪಿಡುಗಿನ ಬಗ್ಗೆ ನೀಡಿರುವ ಸರ್ಕಾರದ ಸೂಚನೆಗಳ ಪ್ರಕಾರಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಪುಣ್ಯಕೇತ್ರಕ್ಕೆ ಆಗಮಿಸುವ ಎಲ್ಲಾ ಯಾತ್ರಾರ್ಥಿಗಳು ಹಾಗೂ ಭಕ್ತಾದಿಗಳು ಮಾಸ್ಕ್ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದ್ದು ಈ ನಿಟ್ಟಿನಲ್ಲಿ ಪುಣ್ಯಕ್ಶೇತ್ರವುಗಿರಿಜಾ ಫಾರ್ಮಾಸ್ಯೂಟಿಕಲ್ ಸಂಸ್ಥೆಯಜತೆಗೂಡಿ ನಿರಂತರ ಸೇವೆಯನ್ನು ನೀಡುವುದು ಹಾಗೂ ಕೋವಿಡ್ ಪಿಡುಗಿನ ನಿವಾರಣೆಗಾಗಿ ವಿಶೇಷ ಪ್ರಾರ್ಥನೆಗಳು ಜರುಗುವುವು.

ಸುದ್ದಿಗೋಷ್ಠಿಯಲ್ಲಿ ವಂದನೀಯ ಸ್ವಾಮಿಲ್ಯಾನ್ಸಿ ಲುವಿಸ್, ಬಾಲಯೇಸುವಿನ ಪುಣ್ಯಕ್ಷೇತ್ರ ಸ್ಟ್ಯಾನ್ಲಿ ಬಂಟ್ವಾಳ್ ಉಪಸ್ಥಿತರಿದ್ದರು


Spread the love