ಝೋಮ್ಯಾಟೊ ಫುಡ್ ಡೆಲಿವರಿ ಬ್ಯಾಗ್ ನಲ್ಲಿ ಗಾಂಜಾ ಮಾರಾಟ – ಮೂವರ ಬಂಧನ

Spread the love

ಝೋಮ್ಯಾಟೊ ಫುಡ್ ಡೆಲಿವರಿ ಬ್ಯಾಗ್ ನಲ್ಲಿ ಗಾಂಜಾ ಮಾರಾಟ – ಮೂವರ ಬಂಧನ

ಉಡುಪಿ: ಝೋಮ್ಯಾಟೊ ಫುಡ್ ಡೆಲಿವರಿ ಬ್ಯಾಗ್ ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರವಿ ಶಂಕರ್, ಅಂಜಲ್ ಬೈಜು ಮತ್ತು ದೇವಿ ಪ್ರಸಾದ್ ಎಂದು ಗುರುತಿಸಲಾಗಿದೆ.

ಕೇರಳ ರಾಜ್ಯದ ಪಾಲಕ್ಕಾಡ್ ನಿಂದ ರವಿ ಶಂಕರ್ ಎಂಬವನು ಗಾಂಜಾವನ್ನು ರೈಲಿನ ಮೂಲಕ ಉಡುಪಿಗೆ ತಂದು ಉಡುಪಿಯಲ್ಲಿ ಗಾಂಜಾ ಸೇವಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಕೊಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಆತನ ಪತ್ತೆ ಬಗ್ಗೆ ಕ್ರಮ ಕೈಗೊಂಡು ಬಾತ್ಮೀದಾರರಿಂದ ಆತನ ಚಲನವಲನದ ಮೇಲೆ ಮಾಹಿತಿ ಸಂಗ್ರಹಿಸಲಾಗಿತ್ತು.

ಆತನು ಉಡುಪಿ ಜಿಲ್ಲೆಯ ಮಂಚಿ ಗ್ರಾಮದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ಕೆಲವು ಸ್ನೇಹಿತರೊಂದಿಗೆ ಇದ್ದಾನೆಂದು ಮಾಹಿತಿ ಸಿಕ್ಕಿದ್ದು ಅದರಂತೆ ಶನಿವಾರ ಆತ ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಆತನ ಸ್ನೇಹಿತರೊಂದಿಗೆ ಝೋಮ್ಯಾಟೊ ಫುಡ್ ಡೆಲಿವರಿ ಬಾಗ್ ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಗಿರಾಕಿಗಳಿಗೆ ಹಾಗೂ ಪೆಡರ್ ಗಳಿಗಾಗಿ ಕಾಯುತ್ತಿದ್ದಾಗ ಖಚಿತ ವರ್ತಮಾನದ ಮೇರೆಗೆ ಪತ್ರಾಂಕಿತ ಅಧಿಕಾರಿ ಪ್ರೊ. ಪ್ರಕಾಶ್ ರಾವ್ ಹಾಗೂ ಪಂಚರೊಂದಿಗೆ ಧಾಳಿ ನಡೆಸಿ, ಆರೋಪಿಗಳಿಂದ ಸುಮಾರು 1 ಕೆಜಿ 277 ಗ್ರಾಂ ತೂಕದ ಗಾಂಜಾ, 2 ಮೋಟಾರು ಸೈಕಲ್, ಝೋಮ್ಯಾಟೊ ಫುಡ್ ಡೆಲಿವರಿ ಬಾಗ್, 4 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು ಗಾಂಜಾದ ಅಂದಾಜು ಮೌಲ್ಯ ರೂ. 30,000/- ಆಗಿರುತ್ತದೆ. ಎರಡು ಮೋಟಾರು ಸೈಕಲ್ ನ ಅಂದಾಜು ಮೌಲ್ಯ ರೂ. 95,000/- ಆಗಿರುತ್ತದೆ.

ಸ್ವಾಧೀನಪಡಿಸಿಕೊಂಡಿರುವ 4 ಮೊಬೈಲ್ ಫೋನ್ ಗಳ ಅಂದಾಜು ಮೌಲ್ಯ ರೂ. ಅಂದಾಜು ಮೌಲ್ಯ 12,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 1,37,000/- ಆಗಿರುತ್ತದೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Spread the love

Leave a Reply

Please enter your comment!
Please enter your name here