ಟೀಮ್ ಮೋದಿ ಕಾಪು ವಲಯದ ಕಾರ್ಯಕ್ರಮ ಶ್ಲಾಘನೀಯ : ಯಶ್ ಪಾಲ್ ಸುವರ್ಣ

Spread the love

ಟೀಮ್ ಮೋದಿ ಕಾಪು ವಲಯದ ಕಾರ್ಯಕ್ರಮ ಶ್ಲಾಘನೀಯ : ಯಶ್ ಪಾಲ್ ಸುವರ್ಣ

ಕಾಪು: ಟೀಮ್ ಮೋದಿ ಕಾಪು ವಲಯ ಇದರ ಆಶ್ರಯದಲ್ಲಿ ಅಸಂಘಟಿತ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮದಲ್ಲಿ ನೋಂದಾಯಿಸಿದ ಫಲಾನುಭವಿಗಳಿಗೆ ಇ ಶ್ರಮ ಕಾರ್ಡ್ ವಿತರಣಾ ಕಾರ್ಯಕ್ರಮ ವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ ಟೀಮ್ ಮೋದಿ ತಂಡವನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಕಾಪು ಜನಾರ್ಧನ ದೇವಸ್ಥಾನದ ಅರ್ಚಕರಾದ ಜನಾರ್ಧನ ತಂತ್ರಿ, ಕಾಪು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಮೇಶ್, ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾದ  ಸೋನು ಪೂಜಾರಿ, ಟೀಮ್ ಮೋದಿ ಕಾಪು ಅಧ್ಯಕ್ಷರಾದ ಯೋಗೀಶ್ ಪೂಜಾರಿ, ತಂಡದ ಪ್ರಮುಖರಾದ ಲಕ್ಷ್ಮೀಕಾಂತ್, ಅಶ್ವಿನ್ ಮೊದಲಾದವರು ಉಪಸ್ಥಿತರಿದ್ದರು.


Spread the love