ಟೆಸ್ಟ್ ರೈಡ್‌ ಗಾಗಿ ತೆಗೆದುಕೊಂಡು ಹೋದ ಬೈಕ್ನೊಂದಿಗೆ ಪರಾರಿಯಾದ ಭೂಪ!

Spread the love

ಟೆಸ್ಟ್ ರೈಡ್‌ ಗಾಗಿ ತೆಗೆದುಕೊಂಡು ಹೋದ ಬೈಕ್ನೊಂದಿಗೆ ಪರಾರಿಯಾದ ಭೂಪ!

ಮಣಿಪಾಲ : ವ್ಯಕ್ತಿಯೊಬ್ಬ ಟೆಸ್ಟ್ ರೈಡ್ ಗಾಗಿ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಶಾಪ್ನಿಂದ ತೆಗೆದುಕೊಂಡು ಹೋದ ಬೈಕ್ನೊಂದಿಗೆ ಪರಾರಿಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಗ ತ್ರಿಶಂಕು ನಗರದ ಪ್ರಶಾಂತ್ ಕುಮಾರ್ ಎಂಬವರು ವಾಹನ ಸೇಲ್ ಮತ್ತು ಖರೀದಿ ವ್ಯವಹಾರವನ್ನು ಮಾಡಿಕೊಂಡಿದ್ದ ನ್ಯೂ ಮಣಿಪಾಲ್ ಬಜಾರ್ ಶಾಪ್ಗೆ ಅ.31ರಂದು ಮಧ್ಯಾಹ್ನ ವೇಳೆ ಗಣೇಶ್ ಉದ್ಯಾವರ ಎಂಬ ಹೆಸರು ಹೇಳಿಕೊಂಡು ಬಂದ ವ್ಯಕ್ತಿ, ಹಳೆಯ ದ್ವಿಚಕ್ರ ವಾಹನ ಬೇಕೆಂದು ಕೇಳಿದ್ದನು. ಅದರಂತೆ ಪ್ರಶಾಂತ್ ಕುಮಾರ್, ಆತನಿಗೆ ಪಾವಂಜೆಯ ನಾಸಿರ್ ಹುಸೈನ್ ಎಂಬವರು ಮಾರಾಟ ಮಾಡಲು ನೀಡಿದ್ದ ಕೆಎ-19-ಇಯು- 6827 ನಂಬರಿನ ಟಿವಿಎಸ್ ವಿಕ್ಟರ್ ಬೈಕ್ನ್ನು ಟೆಸ್ಟ್ ರೈಡ್ ಗೆ ನೀಡಿದ್ದರು. ಸ್ಕೂಟರ್ನ ಕೀಯನ್ನು ಪಡೆದುಕೊಂಡು ಬೈಕ್ ಚಾಲನೆ ಮಾಡಿಕೊಂಡು ಹೋದವರು ಗಣೇಶ್ ಉದ್ಯಾವರ ವಾಪಾಸ್ ಬಾರದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


Spread the love