ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಹರಿದ ಕಾರು – ಇಬ್ಬರು ಸಾವು

Spread the love

ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಹರಿದ ಕಾರು – ಇಬ್ಬರು ಸಾವು

ರಾಮನಗರ: ಕಾರು ಹರಿದು ಇಬ್ಬರು ಶಾಲಾ ಮಕ್ಕಳ ಸಾವನ್ನಪ್ಪಿದ್ದು, ಏಳು ಮಂದಿ ಮಕ್ಕಳಿಗೆ ಗಂಭೀರವಾಗಿ ಗಾಯಗಳಾಗಿರುವಂತಹ ಘಟನೆ ರಾಮನಗರದ ಲಕ್ಷ್ಮೀಪುರ ಬಳಿ ನಡೆದಿದೆ.

ಪಿಕಪ್ ವಾಹನ ಒಟ್ಟು 9 ಮಕ್ಕಳ ಮೇಲೆ ಹರಿದಿದೆ, ಮಕ್ಕಳೆಲ್ಲರೂ 12 ವರ್ಷದವರು ಎಂದು ತಿಳಿದು ಬಂದಿದೆ. ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ರಾಮನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love