ಟ್ರಾಫಿಕ್ ಸಮಸ್ಯೆ: ನಗರ ಪ್ರದಕ್ಷಿಣೆ ಹಾಕಿ ಮಾಹಿತಿ ಪಡೆದ ಡಿಸಿ ಕೂರ್ಮರಾವ್ ಮತ್ತು ಎಸ್ಪಿ ಅಕ್ಷಯ್ ಮಚ್ಚಿಂದ್ರ

Spread the love

ಟ್ರಾಫಿಕ್ ಸಮಸ್ಯೆ: ನಗರ ಪ್ರದಕ್ಷಿಣೆ ಹಾಕಿ ಮಾಹಿತಿ ಪಡೆದ ಡಿಸಿ ಕೂರ್ಮರಾವ್ ಮತ್ತು ಎಸ್ಪಿ ಅಕ್ಷಯ್ ಮಚ್ಚಿಂದ್ರ

ಉಡುಪಿ: ಜಿಲ್ಲಾಧಿಕಾರಿ ಎಂ ಕೂರ್ಮ ರಾವ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಅವರ ನೇತೃತ್ವದ ತಂಡ ಬುಧವಾರ ನಗರ ಪ್ರದಕ್ಷಿಣೆ ನಡೆಸಿ ಸಂಚಾರ ದಟ್ಟಣೆಯ ಕುರಿತು ಮಾಹಿತಿ ಪಡೆದರು.

ನಗರದ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣ ಮತ್ತು ಕಲ್ಸಂಕ ಜಂಕ್ಷನ್ ಗಳಿಗೆ ಭೇಟಿ ನೀಡಿದ ಅವರು ಸಂಚಾರ ದಟ್ಟಣೆಯ ಮೇಲ್ವೀಚಾರಣೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು ನಗರದಲ್ಲಿ ಜನರು ಟ್ರಾಫಿಕ್ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಿರುವುದರ ಬಗ್ಗೆ ಅನೇಕ ದೂರುಗಳಿದ್ದು ಅದನ್ನು ತಪ್ಪಿಸುವ ಸಲುವಾಗಿ ಅಧಿಕಾರಿಗಳ ಜೊತೆ ಇಂದು ಸ್ಥಳ ಪರಿಕ್ಷೆ ನಡೆಸಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಪ್ರಮೋದ್ ಕುಮಾರ್, ಸಂಚಾರ ಠಾಣೆಯ ಅಬ್ದುಲ್ ಖಾದರ್, ನಗರಸಭಾ ಆಯುಕ್ತರಾದ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here