
ಟ್ರಿಪ್ ಗೆಂದು ಕರೆದುಕೊಂಡು ಹೋಗಿ ಸ್ನೇಹಿತನ ಹತ್ಯೆ – ಇಬ್ಬರ ಬಂಧನ
ಹಾಸನ: ತಾಲೂಕು ದಾಸರಕೊಪ್ಪಲು ಗ್ರಾಮದ ಸಂತೋಷ ಅಲಿಯಾಸ್ ಪುಲ್ಲಿ (35) ಎಂಬ ರೌಡಿ ಶೀಟರ್ ನಾಪತ್ತೆ ಆಗಿದ್ದ ಪ್ರಕರಣವನ್ನು ಕೆ.ಆರ್. ಪುರಂ ಬಡಾವಣೆ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ ತಿಳಿಸಿದರು.
ಪುಲ್ಲಿಯನ್ನು ಆತನ ಗೆಳೆಯರಾದ ಪ್ರೀತಮ್ ಅಲಿಯಾಸ್ ಪ್ರೀತಮ್ ಗೌಡ (25) ಮತ್ತು ಬಿ.ಎಸ್. ಕೀರ್ತಿ (24) ಎಂಬಿಬ್ಬರು ಪುವಾಸಗೊಂದು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿ ಅರಣ್ಯ ಪ್ರದೇ ಶವೊಂದರಲ್ಲಿ ಕೊಲೆ ಮಾಡಿ ಹೂತು ಹಾಕಿದ್ದ ಪೊಲೀಸರ ತನಿಕೆಯಿಂದ ಬೆಳಕಿಗೆ ಬಂದಿದೆ ಎಎಸ್ಪಿ ತಮ್ಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪಕರಣದ ವಿವರ:
ದಾಸರಕೊಪ್ಪಲು ಗ್ರಾಮದ ಪುಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಗೌಡಿ ಪಟ್ಟಿಗೆ ಸೇರಿದಾನ ಈತನನ್ನು ಕಳೆದ ಫೆಬ್ರವರಿ 9 ರಂದು ಆರೋಪಿಗಳಾದ ಪ್ರೀತಮ್ ಮತ್ತು ಬಿ.ಎಸ್ ಕೀರ್ತಿ ಎಂಬಿಬ್ಬರು ಚಿಕ್ಕಮಗಳೂರು ಪ್ರವಾಸಂದು ಕರೆದೊಯಿದರು, ಅದಾದ ವಾರ ಕಳೆದರೂ ಪುಲ್ಲಿ ಮನೆಗೆ ಹಿಂದಿರುಗಿರಲಿಲ್ಲ. ಈ ಹಿಂದೆಯೂ ಪುಲ್ಲಿ, ಅನೇಕ ಬಾರಿ ಮನೆಯಿಂದ ವಾರಗಟ್ಟಲೆ ಹೊರಗೇ ಇರುತ್ತಿದ್ದರಿಂದ ಆತನ ಮನೆಯವರು ತಲೆಕೆಡಿಸಿಕೊಂಡಿರಲಿಲ್ಲ.
ಫೆ.26 ರಂದು ಪುಲ್ಲಿಯ ತಂದೆ ದಾಸೇಗೌಡರಿಗೆ ಅದೇ ಗ್ರಾಮದ ಕೇಶವಮೂರ್ತಿ ಎಂಬುವರು, ನಿಮ್ಮ ಮಗನನ್ನು ಆತನ ಸ್ನೇಹಿತರೇ ಕರೆದೊಯ್ದು ಕೊಲೆ ಮಾಡಿದ್ದಾರಂತೆ’ ಎಂಬ ಸುದ್ದಿ ಮುಟ್ಟಿಸಿದ್ದರಿಂದ ಆತಂಕಗೊಂಡ ದಾರ್ಸಗಳಿದರು. ಬಡಾವಣೆ ರಾಣಿಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಎಸ್ಸಿ ಹರಿರಾಮ್ ಶಂಕರ್ ಮತ್ತು ಎಎಸ್ಪಿ ತಮ್ಮಯ್ಯ ಅವರು ತನಿಖೆಗಾಗಿ ಲೀಸರ ವಿಶೇಷ ತಂಡ ರಚಿಸಿದ್ದರು. ಖಚಿತ ಸುಳಿವಿನ ಮೇರೆಗೆ ಮಾರ್ಚ್ 4ರಂದು ನಗರದ ರಿಂಗ್ ರಸ್ತೆಯ ಟೀ ಅಂಗಡಿಯೊಂದರಲ್ಲಿದ್ದ ಆರೋಪಿಗಳನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.
ವಿಚಾರಣೆ ನಂತರ ಪುಲ್ಲಿಯನ್ನು ತಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ. ಪುಲ್ಕಿ ಮತ್ತು ಪ್ರೀತಮ್ ಗೌಡ ಇಬ್ಬರೂ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದರು. ಇವರಿಬ್ಬರ ನಡುವ ಇತ್ತೀಚೆಗೆ ಯಾವುದೋ ವಿಷಯಕ್ಕೆ, ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಪೂರ್ವ ಸಂಚಿನಂತೆ ಪುಲ್ಲಿಯನ್ನು ಪ್ರವಾಸಕ್ಕೆಂದು ಕರೆದೊಯ್ತು ಫೆ.10 ರಂದು ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಕುರುವಂಗಿ ಗ್ರಾಮದ ಸ.ನಂ. 194ರ ಅರಣ್ಯ ಪ್ರದೇಶದಲ್ಲಿ ಮೂವರು ಮದ್ಯ ಸೇವನೆ ಮಾಡಿ, ನಂತರ ಪುಲಿಗೆ ಗಾಂಜಾ ಸೇವನೆ ಮಾಡಿಸಿ, ಆತ ಪುಜೆ ತಪ್ಪಿದ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಅದೇ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು.
ಪುಲ್ಲಿಯನ್ನು ಕೊಲೆ ಮಾಡಲೇ ಬೇಕೆಂಬ ಉದ್ದೇಶದಿಂದ ಪ್ರೀತಮ್ ಗೌಡ ಮತ್ತು ಕೀರ್ತಿ ಕಾರಿನ ಡಿಕ್ಕಿಯಲ್ಲಿ ಹಾರೆ, ಗುದ್ದಲಿ ಮತ್ತು ಪಿಕಾಸಿಗಳನ್ನು ಇಟ್ಟುಕೊಂಡು ಪುಲ್ಲಿಯನ್ನು ಪ್ರವಾಸಕ್ಕೆ ಕರೆದೊಯ್ದಿದ್ದರು. ಇದೊಂದು ಪೂರ್ವನಿಯೋಜಿತ ಕೊಲೆ ಪ್ರಕರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ದೊರೆಯುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ತಮ್ಮಯ್ಯ ತಿಳಿಸಿದರು.