ಡಬ್ಬಲ್ ಇಂಜಿನ್ ಸರಕಾರದ ಉಡುಗೊರೆ ಸುರತ್ಕಲ್ ಟೋಲ್ – ಅನಿತಾ ಡಿಸೋಜ ಬೆಳ್ಮಣ್

Spread the love

ಡಬ್ಬಲ್ ಇಂಜಿನ್ ಸರಕಾರದ ಉಡುಗೊರೆ ಸುರತ್ಕಲ್ ಟೋಲ್ – ಅನಿತಾ ಡಿಸೋಜ ಬೆಳ್ಮಣ್

ಕಾರ್ಕಳ: ಸುರತ್ಕಲ್ ಅನಧಿಕೃತ ಟೋಲ್ ತೆರವು ಮಾಡುವ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಹೋರಾಟಗಾರರಿಗೆ ಅದರಲ್ಲೂ ಮಹಿಳಾ ಹೋರಾಟಗಾರರಿಗೆ ಮಧ್ಯರಾತ್ರಿ ಅವರುಗಳ ಮನೆಗೆ ಪೊಲೀಸರು ತೆರಳಿ ನೋಟಿಸು ನೀಡಿರುವ ಕ್ರಮವನ್ನು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿ’ಸೋಜಾ ಬೆಳ್ಮಣ್ ತೀವ್ರವಾಗಿ ಖಂಡಿಸಿದ್ದಾರೆ.

ಹೆದ್ದಾರಿ ಟೋಲ್ ಅದೀನಿಯಮದಂತೆ 60ಕಿಲೋಮೀಟರ್ ಒಳಗೆ  ಎರಡು ಟೋಲ್ ಕಾರ್ಯ ನಿರ್ವಹಿಸುವಂತಿಲ್ಲ. ಅದು ಕಾನೂನು ಬಾಹಿರ ಅದನ್ನು ತೆರವು ಗೊಳಿಸಲು      ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ   ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮನವಿ ಮಾಡಿದ್ದು ತೆರವು ಗೊಳಿಸುವ ಅಶ್ವಾಸನೆಗಳು ಇಬ್ಬರಿಂದಲೂ ಬಂದಿತ್ತು. ಆದರೆ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ಡಬ್ಬಲ್ ಇಂಜಿನ್ ಸರಕಾರದ ಲಾಭದ ಅರಿವು ನಾಡಿನ ಜನತೆಗೆ ಆಗುತ್ತಿದೆ. ಬುದ್ಧಿವಂತರ ನಾಡು ಮತ್ತು ತುಳು ನಾಡು ನಾಗರಿಕರು ತಮ್ಮ ಅಪ್ರಬುದ್ಧ ನಿಲುವನ್ನು ಮತ್ತೊಮ್ಮೆ ಅವಲೋಕಿಸುವ ಅಗತ್ಯ ಇದೆ.

ಈ ಹಗಲು ದರೋಡೆಯನ್ನು ಖಂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯ ಇದರಿಂದ ಬಿಜೆಪಿ ಸರಕಾರ ಮತ್ತು ಅದರ ನಾಯಕರು ಹೊರತಾಗಿಲ್ಲ. ಆದರೆ ನಿನ್ನೆ ಮುಂಚೂಣಿ ಹೋರಾಟ ಗಾರರಿಗೆ ಅದರಲ್ಲೂ ಮಹಿಳಾ ಹೋರಾಟ ಗಾರರಿಗೆ ಮದ್ಯ ರಾತ್ರಿ ನೋಟಿಸು ನೀಡಿ ಬೆದರಿಸಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ. ಸರಕಾರ ಅಕ್ಟೋಬರ್‍ 18ರ ಒಳಗೆ ಸುರತ್ಕಲ್ ಟೋಲನ್ನು ತೆರವು ಗೊಳಿಸಿ ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಶಾಂತಿ ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love