ಡಾ. ಎಸ್.ಆರ್. ಅರುಣ್ ಕುಮಾರ್ ಮತ್ತು ಲೋಕು ಪೂಜಾರಿಯವರಿಗೆ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ

Spread the love

ಡಾ. ಎಸ್.ಆರ್. ಅರುಣ್ ಕುಮಾರ್ ಮತ್ತು ಲೋಕು ಪೂಜಾರಿಯವರಿಗೆ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ

ಉಡುಪಿ: ಯುವವಾಹಿನಿ (ರಿ) ಉಡುಪಿ ಘಟಕದ ನೇತೃತ್ವದಲ್ಲಿ ಪ್ರಾಯೋಜಿಸಲ್ಪಡುತ್ತಿರುವ “ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ’ಯನ್ನು ಡಾ. ಎಸ್.ಆರ್. ಅರುಣ್ ಕುಮಾರ್, ಜಾನಪದ ವಿದ್ವಾಂಸ, ಶೈಕ್ಷಣಿಕ ತಜ್ಞ ಇವರಿಗೆ ಮತ್ತು ಜಾನಪದ ಕಲಾವಿದ ಪ್ರಶಸ್ತಿಯನ್ನು ಬೈದೇರುಗಳ ದರ್ಶನ ಪಾತ್ರಿ, ವಯೋವೃದ್ಧ ಮೂಜೂರು ಹಾಡಿ ಗರೋಡಿಯ ಲೋಕು ಪೂಜಾರಿಯವರಿಗೆ ನೀಡಲು ನಿರ್ಧರಿಸಲಾಗಿದೆ.

ಮಂಗಳೂರು ವಿ.ವಿ. ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕರು, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರೂ ಆದ  ಮುದ್ದು ಮೂಡುಬೆಳ್ಳೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಬ ನವೆಂಬರ್ 8 ರಂದು ಭಾನುವಾರ ಉಡುಪಿ ಚಿಟ್ಟಾಡಿಯಲ್ಲಿ ಲಕ್ಷ್ಮಿ ಟ್ರೇಡ್ ಸೆಂಟರಿನ ಲಕ್ಷ್ಮಿ ಸಭಾಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ಪ್ರದಾನ ಜರುಗಲಿದ್ದು, ಸಭಾಧ್ಯಕ್ಷತೆಯನ್ನು ಯುವವಾಹಿನಿ ಉಡುಪಿ ಘಟಕ ಅಧ್ಯಕ್ಷರಾದ ಜಗದೀಶ್ ಕುಮಾರ್ ವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನವನ್ನು ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ, ಮಂಗಳೂರು ಕುಲಾಲ ಸಂಘದ ಸಂಚಾಲಕರಾದ ವಿಶ್ವನಾಥ ಬಂಗೇರ ಮಾಡಲಿದ್ದು, ತೆಂಕನಿಡಿಯೂರು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ದುಗ್ಗಪ್ಪ ಕಜೆಕಾರ್ರವರು ಅಭಿನಂದನಾ ಭಾಷಣ ಮಾಡಲಿರುವರು. ಗೌರವ ಉಪಸ್ಥಿತಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷರಾದ ಡಾ. ರಾಜಾರಾಮ, ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಆಮೀನ, ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಯುವವಾಹಿನಿ ಉಡುಪಿ ಘಟಕದ ಕಾರ್ಯದರ್ಶಿ ಮಾಲತಿ ಅಮೀನ್ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love