Home Mangalorean News Kannada News ಡಾ. ತುಂಬೆ ಮೊಹಿದ್ದೀನ್ರವರಿಗೆ ” ಎಕ್ಸಲೆನ್ಸ್ಇನ್ಎಜುಕೇಶನ್ ಅಂಡ್ ಹೆಲ್ತ್ಕೇರ್ ಅವಾರ್ಡ್” ಪ್ರದಾನ

ಡಾ. ತುಂಬೆ ಮೊಹಿದ್ದೀನ್ರವರಿಗೆ ” ಎಕ್ಸಲೆನ್ಸ್ಇನ್ಎಜುಕೇಶನ್ ಅಂಡ್ ಹೆಲ್ತ್ಕೇರ್ ಅವಾರ್ಡ್” ಪ್ರದಾನ

Spread the love

ಡಾ. ತುಂಬೆ ಮೊಹಿದ್ದೀನ್ರವರಿಗೆ ” ಎಕ್ಸಲೆನ್ಸ್ಇನ್ಎಜುಕೇಶನ್ ಅಂಡ್ ಹೆಲ್ತ್ಕೇರ್ ಅವಾರ್ಡ್” ಪ್ರದಾನ

ಮಧ್ಯ ಪ್ರಾಚ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿಗುರುವಂದನಾ ಮತ್ತು ಸಂಸ್ಕೃತಿ ಸಿಂಚನ ಕಾರ್ಯಕ್ರಮ ಮೇ ಮೇ 31ಮೇ 2025 ರಂದು ನಡೆಸಲಾಯಿತು.

ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ಪರಮ ಪೂಜ್ಯ ಮಠಾಧಿಪತಿಗಳು ಹಾಗೂ ಗಣ್ಯಾತಿಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸುಮಂಗಲೆಯರಿಂದ ಪೂರ್ಣಕುಂಭ, ವೇದಘೋಷ, ಪಂಚವಾಧ್ಯಗಳೊಂದಿಗೆ ಬಿ.ಎ.ಪಿ.ಎಸ್. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು.

ಸನಾತನ ಸಂಸ್ಕೃತಿ, ಕಲಾ ಆಧ್ಯಾತ್ಮಿಕ, ಗುರು ಪರಂಪರೆಯ ಕಾರ್ಯಕ್ರಮವನ್ನುಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರು ಪರಮ ಪೂಜ್ಯ ಶ್ರೀ ಬ್ರಹ್ಮವಿಹಾರಿದಾಸ್ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಿಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು

ಡಾ ತುಂಬೆ ಮೊಯಿದ್ದೀನ್ರವರಿಗೆ“ಎಕ್ಸಲೆನ್ಸ್ ಇನ್ಎಜುಕೇಶನ್ ಅಂಡ್ ಹೆಲ್ತ್ಕೇರ್ ಅವಾರ್ಡ್”ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

ಕರಾವಳಿ ಕರ್ನಾಟಕದ ತುಂಬೆಯಿಂದ ಅರಬ್ ಸಂಯುಕ್ತ ಸಂಸ್ಥಾನದ ಅಜ್ಮಾನ್ ಗೆ ೧೯೯೦ರ ದಶಕದಲ್ಲಿ ಬಂದು ತಮ್ಮ ಸ್ವಂತ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತುಆಸ್ಪತ್ರೆ ಹಾಗೂ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಪ್ರಸ್ತುತ ತುಂಬೆ ಗ್ರೂಪ್ ನ ಆಶ್ರಯದಲ್ಲಿ ತುಂಬೆ ಮೆಡಿಕಲ್ ಯೂನಿವರ್ಸಿಟಿ, ಆಸ್ಪತ್ರೆ, ಪಾರ್ಮಾಸಿ, ವೈದ್ಯಕೀಯ ತರಭೇತಿ ಸಂಸ್ಥೆಗಳು, ಕಾಫಿ ಶಾಫ್, ರೆಸ್ಟೋರೆಂಟ್, ಬಾಡಿ ಅಂಡ್ ಸೊಲ್ ಸ್ಪಾ, ಇತಾದಿ ಹತ್ತು ಹಲವಾರು ವಿಶ್ವದರ್ಜೆಯ ಸವಲತ್ತುಗಳನ್ನು ತುಂಬೆ ಗ್ರೂಪಿನ ಅಧ್ಯಕ್ಷರಾಗಿರುವ ಡಾ.ತುಂಬೆ ಮೊಹಿದ್ದೀನ್ರವರು ಭಾರತದಿಂದ ಹೊರ ಭಾಗದ ದೇಶದಲ್ಲಿ ಸ್ಥಾಫನೆ ಮಾಡಿರುವ ಏಕೈಕ ಭಾರತೀಯರಾಗಿದ್ದಾರೆ.


Spread the love

Exit mobile version