ಡಾ. ಸಂತೋಷ್ ಟಿ. ಸೋನ್ಸ್ ಅಂತರಾಷ್ಟ್ರೀಯ ಪೀಡಿಯಾಟ್ರಿಕ್ ಅಸೋಸಿಯೇಷನ್ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆ

Spread the love

ಡಾ. ಸಂತೋಷ್ ಟಿ. ಸೋನ್ಸ್ ಅಂತರಾಷ್ಟ್ರೀಯ ಪೀಡಿಯಾಟ್ರಿಕ್ ಅಸೋಸಿಯೇಷನ್ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆ

ಮಂಗಳೂರು: ನಗರದ ಖ್ಯಾತ ಮಕ್ಕಳ ತಜ್ಞ ಡಾ. ಸಂತೋಷ್ ಟಿ. ಸೋನ್ಸ್ ಅವರು ಅಂತರಾಷ್ಟ್ರೀಯ ಪೀಡಿಯಾಟ್ರಿಕ್ ಅಸೋಸಿಯೇಷನ್ (ಐಪಿಎ) ನ ಸ್ಥಾಯಿ ಸಮಿತಿಯ 22 ದೇಶಗಳನ್ನು ಒಳಗೊಂಡಿರುವ ಏμÁ್ಯ ಪೆಸಿಫಿಕ್ ಪ್ರದೇಶವನ್ನು ಪ್ರತಿನಿಧಿಸುವ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 21, 2023 ರಂದು ನಡೆದ ಸಂಸ್ಥೆಯ ಪ್ರತಿನಿಧಿ ಪರಿಷತ್ತು (ಕೌನ್ಸಿಲ್ ಆಫ್ ಡೆಲಿಗೇಟ್ಸ್) ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಅವರು ಎರಡು ವರ್ಷಗಳ ಅವಧಿಗೆ (2023-2025) ಸೇವೆ ಸಲ್ಲಿಸಲಿದ್ದಾರೆ. ಅವರು ಈ ಹಿಂದೆ ಐಪಿಎ ಯ ವೈಜ್ಞಾನಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ (2022-2023).

ಸ್ವಿಟ್ಜಲೆರ್ಂಡ್ ಮತ್ತು ಅಮೇರಿಕ ಮೂಲದ ಇಂಟನ್ರ್ಯಾಷನಲ್ ಪೀಡಿಯಾಟ್ರಿಕ್ ಅಸೋಸಿಯೇಷನ್ (ಐಪಿಎ) ಅನ್ನು 1910 ರಲ್ಲಿ ಸ್ಥಾಪಿಸಲಾಯಿತು ಮತ್ತು ಜಾಗತಿಕವಾಗಿ ಗೌರವಾನ್ವಿತ ಮಕ್ಕಳ ಆರೋಗ್ಯ ಸಂಸ್ಥೆಯಾಗಿದೆ. 149 ದೇಶಗಳಿಂದ 164 ಸದಸ್ಯ ಸಂಘಗಳನ್ನೊಳಗೊಂಡ ಐಪಿಎ ಮಿಲಿಯಕ್ಕಿಂತ ಅಧಿಕ ಮಕ್ಕಳ ವೈದ್ಯರನ್ನು ಪ್ರತಿನಿಧಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯೂನಿಸೆಫ್ ನ ಪಾಲುದಾರ ಸಂಸ್ಥೆಯಾಗಿದೆ.

ಡಾ. ಸಂತೋಷ್ ಟಿ. ಸೋನ್ಸ್ ಅವರು ಈ ಹಿಂದೆ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ನ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಅದರ ವೈದ್ಯಕೀಯ ಶಿಕ್ಷಣ ವಿಭಾಗದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಆರ್ಗನೈಸ್ಡ್ ಮೆಡಿಸಿನ್ ಗಿಲ್ಡ್ (ಓಂ ಗಿಲ್ಡ್) ನ ಸ್ಥಾಪಕ ಅಧ್ಯಕ್ಷರು ಕೂಡ ಆಗಿದ್ದರು. ಅವರು ಪ್ರಸ್ತುತ ನಗರದ ಎಜೆ ವೈದ್ಯಕೀಯ ಕಾಲೇಜಿನಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


Spread the love