ಡಿಕೆಶಿ ಆಪ್ತ ಯುಬಿ ಶೆಟ್ಟಿ ಹಣ ವಾಪಾಸ್ ನೀಡಿದ ಅಧಿಕಾರಿಗಳು

Spread the love

ಡಿಕೆಶಿ ಆಪ್ತ ಯುಬಿ ಶೆಟ್ಟಿ ಹಣ ವಾಪಾಸ್ ನೀಡಿದ ಅಧಿಕಾರಿಗಳು

ಕುಂದಾಪುರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಲ್ಲಿನ ಅರೆಶಿರೂರು ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಡಿಕೆಶಿ ಆಪ್ತ ಯುಬಿ ಶೆಟ್ಟಿಯವರ ಬ್ಯಾಗ್ ನೊಳಗಿದ್ದ ಹಣವನ್ನು ತಪಾಸಣೆ ತಂಡ ಜಪ್ತಿ ಮಾಡಿದ್ದು, ತನಿಖೆಯ ಬಳಿಕ ವಾಪಾಸು ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಬೈಂದೂರಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕಾಗಿ ಹೆಲಿಕಾಫ್ಟರ್ನಲ್ಲಿ ಅರೆಶಿರೂರು ಹೆಲಿಪ್ಯಾಡ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಂದಿಳಿದ ವೇಳೆ ಈ ಘಟನೆ ನಡೆದಿತ್ತು. ಡಿಕೆಶಿ ಅವರನ್ನು ಸ್ವಾಗತಿಸಲು ಬಂದಿದ್ದ ಆಪ್ತ ಯುಬಿ ಶೆಟ್ಟಿಯವರ ಕಾರು ಪರಿಶೀಲಿಸುವ ವೇಳೆ ಬ್ಯಾಗ್ ನಲ್ಲಿ 50 ಸಾವಿರ ರೂಪಾಯಿ ಪತ್ತೆಯಾಗಿತ್ತು.

ನಗದು ಹಣವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ತನಿಖೆಗಾಗಿ ಸ್ಕ್ರೀನಿಂಗ್ ಕಮಿಟಿಗೆ ನಗದನ್ನು ಹಸ್ತಾಂತರಿಸಿತ್ತು. ನೀತಿ ಸಂಹಿತೆ ಪ್ರಕಾರ ದಾಖಲೆಯಿಲ್ಲದೆ 50 ಸಾವಿರ ರೂ. ಕೊಂಡೊಯ್ಯಬಹುದು. ಕೇವಲ 50 ಸಾವಿರ ರೂ. ಹಣವಿದ್ದುದರಿಂದ ಕ್ರಮ ಕೈಗೊಳ್ಳುವ ಅವಕಾಶವಿಲ್ಲ. ಹೀಗಾಗಿ ಹಣವನ್ನು ಮರಳಿ ಕೊಟ್ಟಿದ್ದೇವೆ ಎಂದು ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ಮ್ಯಾಂಗಲೋರಿಯನ್ ಡಾಟ್ ಕಾಮ್ ಗೆ ತಿಳಿಸಿದ್ದಾರೆ.


Spread the love